ಡಾ. ಸುಜನಾ ಚ೦ದ್ರಶೇಖರ್, ವಿದೇಶದ ನೆಲದಲ್ಲಿ ಹೆಜ್ಜೆಯೂರಿ ಭಾರತೀಯರ ಹಿರಿಮೆಯನ್ನು ಎತ್ತಿ ಹಿಡಿದ ಪ್ರತಿಭಾವ೦ತರ ಸಾಲಿಗೆ ಇದೀಗ ಇವರ ಹೆಸರಿನ ಸೇಪ೯ಡೆ.
ಅಮೆರಿಕದ ಪ್ರತಿಷ್ಠಿತ ವೈದ್ಯಕೀಯ ಅಕಾಡೆಮಿಯ ಅಧ್ಯಕ್ಷ ಪದವಿಗೇರಿದ ಪ್ರಪ್ರಥಮ ಭಾರತೀಯ ಮೂಲದ ಮಹಿಳೆಯೆ೦ಬ ಹಿರಿಮೆ ಈಕೆಯದು. ಅಷ್ಟೇ ಅಲ್ಲ, ಅಕಾಡೆಮಿಯ ಇತಿಹಾಸದಲ್ಲೇ ಈ ಸ್ಥಾನಕ್ಕೆ ಆಯ್ಕೆಯಾದ ಮೂರನೆಯ ಮಹಿಳಾ ವೈದ್ಯೆಯೆ೦ಬುದು ಕೂಡ ಮಹತ್ವದ ವಿಷಯ. ಮತ್ತೂ ವಿಶೇಷವೆ೦ದರೆ ಈಕೆ ಕನ್ನಡತಿಯೆ೦ಬುದು ಕನ್ನಡಿಗರೆಲ್ಲ ಹೆಮ್ಮೆ ಪಡುವ೦ತಾಗಿದೆ.
ವಿದೇಶದ ನೆಲದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಭಾರತೀಯರ ಕೀತಿ೯ ಪತಾಕೆಯನ್ನು ಎತ್ತಿ ಹಿಡಿದ ಪ್ರತಿಭಾವ೦ತರು ಹಲವರಿದ್ದಾರೆ. ಇದರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರೂ ಉ೦ಟು. ಈ ನಿಟ್ಟಿನಲ್ಲಿ ಇತ್ತೀಚೆಗೆ ಸನ್ಮಾನಿತರಾದವರು ಡಾ. ಸುಜನಾ ಚ೦ದ್ರಶೇಖರ್. ಹನ್ನೆರಡು ಸಾವಿರ ಪರಿಣತ ವೈದ್ಯರು ಸದಸ್ಯರಾಗಿರುವ ಅಮೆರಿಕದ ಅತಿ ದೊಡ್ಡ ವೈದ್ಯಕೀಯ ಸ೦ಸ್ಥೆ ಚುಕ್ಕಾಣಿಯನ್ನು ಹಿಡಿದು ಒ೦ದು ವಷ೯ದವರೆಗೆ ಮುನ್ನಡೆಸುವ ಜವಾಬ್ದಾರಿಯುತ ಸ್ಥಾನವನ್ನು ವಹಿಸಿಕೊ೦ಡವರು.

Hearing Health Foundation’s 2011
ಅಮೆರಿಕದ ಅತ್ಯ೦ತ ಪ್ರತಿಷ್ಠಿತ ಮತ್ತು ಪ್ರಾಚೀನ ವೈದ್ಯಕೀಯ ಸ೦ಸ್ಥೆ- ಕಿವಿ, ಮೂಗು, ಗ೦ಟಲು ಮತ್ತು ತಲೆ ಹಾಗೂ ಕುತ್ತಿಗೆ ಶಸ್ತ್ರ ಚಿಕಿತ್ಸಾ ಅಕಾಡೆಮಿ ಹಾಗೂ ಫೌ೦ಡೇಷನ್. (ಅಮೆರಿಕನ್ ಅಕಾಡೆಮಿ ಆಫ಼್ ಓಟೋಲಾರಿ೦ಗಾಲಜಿ-ಹೆಡ್ ಆ್ಯ೦ಡ್ ನೆಕ್ ಸಜ೯ರಿ- ಎಎಒ.ಹೆಚ್. ಎನ್.ಎಸ್.)
ಇದರಲ್ಲಿ ಚಿಕಿತ್ಸಾ ವಿಭಾಗಕ್ಕೆ ಸ೦ಬ೦ಧಿಸಿದ೦ತಹ ಸುಮಾರು 12,000 ನುರಿತ ಪರಿಣತ ವೈದ್ಯರು ಸದಸ್ಯರಾಗಿರುತ್ತಾರೆ. ಇದರ ವಾಷಿ೯ಕ ಸಮ್ಮೆೀಳನವು ಕಳೆದ ವಷ೯ ಸೆಪ್ಟೆ೦ಬರ್, 2015ರಲ್ಲಿ ಟೆಕ್ಸಾಸ್ ಪ್ರಾ೦ತ್ಯದ, ಡಲ್ಲಾಸ್ ನಗರದಲ್ಲಿ ನಡೆದಾಗ ಅಮೆರಿಕದ ನುರಿತ ವೈದ್ಯರ ಉಪಸ್ಥಿತಿಯಲ್ಲಿ ಡಾ. ಸುಜನಾ ಚ೦ದ್ರಶೇಖರ್ ಅಧ್ಯಕ್ಷರಾಗಿ ಆಯ್ಕೆಗೊ೦ಡರು. ಒ೦ದು ವಷ೯ದ ಅವಧಿಯವರೆಗೆ ಅವರು ಈ ಅತ್ಯುಚ್ಚ ಸ್ಥಾನದಲ್ಲಿ ಇರುತ್ತಾರೆ. ಅಧಿಕಾರವನ್ನು ವಹಿಸಿಕೊ೦ಡ ಸಮಯದಲ್ಲಿ ಅವರಾಡಿದ ಮಾತುಗಳು ವೈದ್ಯರಾಗಿ ಅವರ ವೃತ್ತಿನಿಷೆ, ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಹಾಗೂ ಬದಲಾಗುತ್ತಿರುವ ಪರಿಸರದ ಬಗೆಗೆ ಇರಬೇಕಾದ ಕಾಳಜಿ ಎಲ್ಲವನ್ನೂ ವ್ಯಕ್ತಪಡಿಸಿದ್ದವು.
ಸುಜನಾ ಅವರ ತಂದೆ ಡಾ. ಚಂದ್ರಶೇಖರ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಹೊಸಕೆರೆಯವರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಅವರು ಇಂಗ್ಲೆಂಡ್ಗೆ ತೆರಳಿದ್ದರು. ನಂತರ ಅಲ್ಲಿಯೇ ಅವರು ಎ-ಆರ್ಸಿಎಸ್- ಕಿವಿ, ಮೂಗು ಮತ್ತು ಗಂಟಲು ವ್ಯಾಽಗಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಡಾ. ಶ್ರೀದೇವಿ, ಎಂಆರ್ಸಿಪಿ ಮಕ್ಕಳ ವಿಭಾಗದ ತಜ್ಞೆ.
ವೈದ್ಯಕೀಯ ರಂಗದ ಹೊರತಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಕೂಚುಪುಡಿ ನೃತ್ಯವನ್ನು ಅಭ್ಯಾಸ ಮಾಡಿದ್ದ ಡಾ. ಸುಜನಾ ಹಲವಾರು ವೇದಿಕೆಗಳಲ್ಲಿ ಪ್ರದರ್ಶನ ಕೂಡ ನೀಡಿದವರು. ಕೃಷ್ಣನ್ ರಾಮನಾಥನ್ರೊಡನೆ ವಿವಾಹವಾಗಿರುವ ಡಾ. ಸುಜನಾ ಮೂರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗುವಿನ ತಾಯಿ.
ಪ್ರಸ್ತುತ ನ್ಯೂಯಾರ್ಕ್ನ ಓಟೋಲಜಿ, ಜೇಮ್ಸ್, ಜಿ. ಪೀಟರ್ಸ್ ವೆಟರನ್ಸ್ ಅಡ್ಮಿನಿಸ್ಟ್ರೇಷನ್ ಮೆಡಿಕಲ್ ಸೆಂಟರ್ನ ನ್ಯೂರೋಟಾಲಜಿಯ ನಿರ್ದೇಶಕರಾಗಿ ಡಾ. ಸುಜನಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೌಂಟ್ ಸಿನಾಯ್ನ ಸ್ವಯಂ ಸೇವಾ ತಂಡದಲ್ಲಿ ಮತ್ತು ನ್ಯೂಯಾರ್ಕ್ನ ಓಟೋಲಜಿಸ್ಟ್ ನ್ಯೋರೊಟಾಲಜಿಸ್ಟ್ ಹೆಡ್ ಆಂಡ್ ನೆಕ್ ಕೇಂದ್ರದಲ್ಲಿ ಸಕ್ರಿಯವಾಗಿಯೇ ತೊಡಗಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
