ಸಣ್ಣ ಕಥೆ

ಗೊಂಬೆ ಪ್ರೀತಿಯಲ್ಲಿ ಜೀವನ ಸಾಗಿಸುತ್ತಿರುವ ವ್ಯಕ್ತಿ

ಇದೆನಪ್ಪ ಗೊಂಬೆ ಜೊತೆ ಪ್ರೀತಿನಾ ಅಂತ ಅಂತಿರಾ…ಇಲ್ಲಿದೆ ನೊಡಿ .ಸದಾ ಗೊಂಬೆಗಳನ್ನು ಕೈನಲ್ಲಿ ಹಿಡಿದು ಆಟ ಆಡುವವರು ಮಕ್ಕಳು. ಆದ್ರೆ ಜಪಾನಿನ ವ್ಯಕ್ತಿಯೊಬ್ಬ ಗೊಂಬೆಯ ಪ್ರೀತಿಯಲ್ಲಿ ಬಿದ್ದಿದ್ದಾನೆ. ಜಪಾನಿನಲ್ಲಿ ನೆಲೆಸಿರುವ ಸೇನ್ ಜೀ ನಕಾಜಿಮಾ ಎಂಬ ವ್ಯಕ್ತಿ ತನ್ನ ಅತ್ಯಮೂಲ್ಯ ಕ್ಷಣಗಳನ್ನು ಗೊಂಬೆ ಜೊತೆ ಕಳೆಯುತ್ತಿದ್ದಾನೆ.

61 ವರ್ಷದ ಸೇನ್ ಜೀ ಸಾವೋರಿ ಗೊಂಬೆ ಪ್ರೀತಿಗೆ ಬಿದ್ದಿದ್ದಾನೆ. ಗೊಂಬೆ ಜೊತೆ ಉತ್ತಮ ಸಂಬಂಧ ಹೊಂದಿದ್ದೇನೆ ಎನ್ನುವ ಸೇನ್ ಜೀ, ವ್ಯಕ್ತಿಯ ಹಾಗೆ ಈ ಗೊಂಬೆಗಳು ಹಣದ ಹಿಂದೆ ಬೀಳುವುದಿಲ್ಲ. ಹಾಗಾಗಿ ಈ ಗೊಂಬೆಯೆಂದ್ರೆ ನನ್ನ ಜೀವ ಎನ್ನುತ್ತಾನೆ. ಐದು ವರ್ಷಗಳ ಹಿಂದೆ ಸೇನ್ ಜೀ ಈ ಗೊಂಬೆಯನ್ನು ಖರೀದಿಸಿದ್ದಾನಂತೆ. ಇದನ್ನು ತೆಗೆದುಕೊಂಡು ಪ್ರವಾಸಕ್ಕೆ ಹೋಗಿದ್ದನಂತೆ. ಅಲ್ಲಿಂದ ಈ ಡಾಲ್ ಮೇಲೆ ಪ್ರೀತಿ ಶುರುವಾಗಿದೆ.

ಡಾಲ್ ಗೆ ಬಗೆ ಬಗೆಯ ಬಟ್ಟೆ ಹಾಕಿ ಕೂದಲು ಬಾಚುತ್ತಾನೆ. ಹೊರಗಡೆ ಸುತ್ತಾಡುತ್ತಾನೆ. ಈ ಡಾಲ್ ಎಂದೂ ಮೋಸ ಮಾಡುವುದಿಲ್ಲ, ನನ್ನನ್ನು ಬಿಟ್ಟು ಹೋಗುವುದಿಲ್ಲ ಎನ್ನುತ್ತಾನೆ ಸೇನ್ ಜೀ. ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿರುವ ಸೇನ್ ಜೀಗೆ ಗೊಂಬೆ ಎಂದ್ರೆ ಪ್ರಾಣ. ಕಳೆದ ಕೆಲ ವರ್ಷಗಳಿಂದ ಚೀನಾ, ಜಪಾನ್ ಹಾಗೂ ದಕ್ಷಿಣ ಏಷ್ಯಾದಲ್ಲಿ ಡಾಲ್ ಜೊತೆ ಜೀವನ ಸಾಗಿಸುವವರ ಸಂಖ್ಯೆ ಜಾಸ್ತಿಯಾಗ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top