ಸಮಾಚಾರ

ಒಂದೇ ಬಾರಿ 11 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

ಅವಳಿ ಜವಳಿ, ಮೂರು, ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಅಮ್ಮಂದಿರ ಬಗ್ಗೆ ನೀವು ಕೇಳಿರುತ್ತೀರಾ. ಆದ್ರೆ ಇಂಡಿಯಾನಾದಲ್ಲಿ 42 ವರ್ಷದ ಮಹಿಳೆಯೊಬ್ಬಳು 11 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಒಂದೇ ಬಾರಿ 11 ಮಕ್ಕಳಿಗೆ ಜನ್ಮ ನೀಡಿರುವುದು ಆಶ್ಚರ್ಯ ಹುಟ್ಟಿಸುವಂತಿದೆ. ಜೊತೆಗೆ ವಿಶ್ವ ದಾಖಲೆಯೂ ಹೌದು.

ಇಂಡಿಯಾನಾದ ಮಾರಿಯಾ ಹರ್ನನ್ಡೇಸ್ ಎಂಬಾಕೆಯೇ 11 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಹೆರಿಗೆ ನೋವು ಶುರುವಾದಾಗ ಆಸ್ಪತ್ರೆಗೆ ಬಂದ ಮಾರಿಯಾ ಹೊಟ್ಟೆ ನೋಡಿಯೇ ಜನರು ಆಶ್ಚರ್ಯಗೊಂಡಿದ್ದರು. ನಂತ್ರ 17 ನಿಮಿಷದಲ್ಲಿ 11 ಮಕ್ಕಳಿಗೆ ಜನ್ಮ ನೀಡಿದ್ದು ಮತ್ತಷ್ಟು ಆಶ್ಚರ್ಯ ಹುಟ್ಟಿಸಿತ್ತು.

ಡೆಲೆವರಿ ಮಾಡಿಸಿದ ವೈದ್ಯರ ತಂಡ ಬೆರಗಾಗಿ ನೋಡುತ್ತಿತ್ತಂತೆ. ಒಂದಾದ ನಂತ್ರ ಒಂದು ಶಿಶು ಹೊರ ಬರ್ತಾ ಇದ್ದಂತೆ ವೈದ್ಯರು ಆಶ್ಚರ್ಯಗೊಂಡಿದ್ದರಂತೆ. ಹುಟ್ಟಿದ ಮಕ್ಕಳೆಲ್ಲ ಸುರಕ್ಷಿತ ಹಾಗೂ ಆರೋಗ್ಯವಾಗಿವೆ. ಡೆಲೆವರಿ ಸಮಯದಲ್ಲಿ ಭಯಗೊಂಡಿದ್ದ ಮಾರಿಯಾ ಪತಿ ಈಗ ಖುಷಿಯಾಗಿದ್ದಾರೆ. ಒಂದೇ ಬಾರಿ 11 ಮಕ್ಕಳ ಪಾಲಕರಾಗಿರುವ ಮಾರಿಯಾ ಹಾಗೂ ಆಕೆಯ ಪತಿಗೆ ವಿಶ್ವದ ಜನರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

Source:Kannada dunia

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

1 Comment

1 Comment

  1. Murali

    July 1, 2016 at 11:44 pm

    It is a very old hoax being circulated on internet.

Leave a Reply

Your email address will not be published. Required fields are marked *

To Top