ಸಮಾಚಾರ

ಉತ್ತರಾಖಂಡದಲ್ಲಿ ಮೇಘಸ್ಫೋಟ…

ಉತ್ತರಾಖಂಡದಲ್ಲಿ ಸತತವಾಗಿ ಸುರಿಯುತ್ತಿರುವ ಮೇಘಸ್ಫೋಟದ ಭಾರಿ ಮಳೆಗೆ ಈ ವರೆಗೂ 20 ಮಂದಿ ಸಾವನ್ನಪ್ಪಿ ಸುಮಾರು 35ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಪವಿತ್ರ ಗಂಗಾನದಿ ಉಕ್ಕಿ ಹರಿಯುತ್ತಿರುವ ಪರಿಣಾಮ, ಕೇದಾರನಾಥ ದೇವಾಲಯ ಸಂಪರ್ಕಿಸುವ ಗಂಗೋಲ್ ಗಾಂವ್ ಹೆದ್ದಾರಿ ಕೂಡ ಭೂಕುಸಿತದಿಂದ ಸ್ಥಗಿತಗೊಂಡಿದೆ, ಛಮೋಲಿ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಅಲ್ಲದೆ ಭೂಕುಸಿತದಲ್ಲಿ ಹಲುವ ಮನೆಗಳು ಕುಸಿದಿದ್ದು,ಅಪಾಯದಲ್ಲಿ ಸಿಲುಕಿರುವ ನೂರಾರು ನಾಗರಿಕನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಪಿಥೋರ್ ಘಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೆಚ್ ಸಿ ಸೆಮ್ವಾಲ್ ತಿಳಿಸಿದ್ದಾರೆ.

ಇನ್ನು ಪಿಥೋರ್ ಘಡದ ಸುತ್ತಮುತ್ತಲಿನ ಸುಮಾರು 7ಕ್ಕೂ ಹೆಚ್ಚು ಹಳ್ಳಿಗಳು ಸಂಪೂರ್ಣ ಜಲಾವೃತ್ತವಾಗಿದ್ದು, ಸಿಂಘಾಲಿ ಪ್ರದೇಶದಲ್ಲಿ ಒಂಬತ್ತು ಶವಗಳು, ಸುವಾ ಗ್ರಾಮದಲ್ಲಿ ಒಂದು ಮತ್ತು ಥಾಲ್ ಗ್ರಾಮದಲ್ಲಿ ಮೂರು ಶವಗಳು ದೊರೆತಿವೆ ಎಂದು ತಿಳಿದುಬಂದಿದೆ.

ಕಳೆದ ತಿಂಗಳಷ್ಟೇ ಉತ್ತರಾಖಂಡದಲ್ಲಿ ಮೇಘಸ್ಫೋಟವಾಗಿ ಪವಿತ್ರ ಯಾತ್ರಾ ಸ್ಥಳಗಳ ಮಾರ್ಗ ಸ್ಥಗಿತವಾಗಿತ್ತು. ಇದೀಗ ಮತ್ತೆ ಛಮೋಲಿಯಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, ಮತ್ತೆ ಯಾತ್ರೆಗೆ ಅಡ್ಡಿಯುಂಟಾಗಿದೆ.

ಮಳೆಯಿಂದಾಗಿ ಅಲ್ಕಾನಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಜ್ಯದಲ್ಲಿರುವ ವಿವಿಧ ಅಣೆಕಟ್ಟುಗಳು ಎಲ್ಲ ಬಾಗಿಲುಗಳನ್ನು ಏಕಕಾಲಕ್ಕೆ ತೆರೆದು ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಅಲ್ಲದೆ ಸಮೀಪದ ಗ್ರಾಮಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ ಎಂದು ಸ್ಥಳೀಯ ಜಿಲ್ಲಾಡಳಿತ ತಿಳಿಸಿದೆ. ಭೂಕುಸಿತದಲ್ಲಿ ಹಲುವ ಮನೆಗಳು ಕುಸಿದಿದ್ದು, ಅಪಾಯದಲ್ಲಿ ಸಿಲುಕಿರುವ ನೂರಾರು ನಾಗರಿಕನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಪಿಥೋರ್ ಘಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೆಚ್ ಸಿ ಸೆಮ್ವಾಲ್ ತಿಳಿಸಿದ್ದಾರೆ.

ಇನ್ನು ಛಮೋಲಿಯಲ್ಲಿ ಸಂಭವಿಸಿದ ಮೇಘಸ್ಫೋಟದ ಪರಿಣಾಮ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 54 ಮಿ.ಮೀ ಮಳೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top