Karnataka

ಕೆಪಿಎಸ್ಸಿ ಯಡವಟ್ಟಿಗೆ ಉದ್ಯೋಗಿಗಳು ಬಲಿ!?

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೆಂಗಳೂರು: ಕೆಪಿಎಸ್ಸಿ ಯಡವಟ್ಟುಗಳನ್ನು ಮಾಡೋದ್ರಲ್ಲಿ ಎತ್ತಿದ ಕೈ. ಈಗ ಕೆಪಿಎಸ್ಸಿ ಮತ್ತೊಂದು ಯಡವಟು ಮಾಡಿದ್ದು, ಇದರಿಂದ ಇಂಜಿನಿಯರ್ ಗಳು ಉದ್ಯೋಗ ಕಳೆದುಕೊಳ್ಳುವಂತಾಗಿದೆ.

 ಇತ್ತೀಚೆಗಷ್ಟೇ ಕೆಎಎಸ್ ನೇಮಕದಲ್ಲಿ ಮಂಗಳಾರತಿ ಎತ್ತಿಸಿಕೊಂಡಿರುವ ಕೆಪಿಎಸ್ಸಿ ಈಗ ಇಂಜಿನಿಯರ್’ಗಳ ನೇಮಕದಲ್ಲೂ ಯಡವಟ್ಟು ಮಾಡಿದೆ. ಇದರಿಂದಾಗಿ 22 ಮಂದಿ ಅಸಿಸ್ಟೆಂಟ್ ಸಿವಿಲ್ ಇಂಜಿನಿಯರ್ ಗಳು ಕೆಲಸ ಕೆಳದುಕೊಳ್ಳುವ ಭೀತಿಯಲ್ಲಿದ್ದಾರೆ.

ಕೆಪಿಎಸ್ಸಿ ಎಡವಟ್ಟಿನಿಂದ ಕೆಲಸ ಕಳೆದುಕೊಳ್ಳಲಿದ್ದಾರೆ 22 ಮಂದಿ ಅಸಿಸ್ಟಂಟ್ ಸಿವಿಲ್ ಇಂಜಿನಿಯರ್ಗಳು

ಕರ್ನಾಟಕ ಲೋಕಸೇವಾ ಆಯೋಗಕ್ಕೆ ಇನ್ನೂ ಬುದ್ಧಿ ಬಂದಂತಿಲ್ಲ. 1998, 99 ಮತ್ತು 2004ರ ಕೆಎಎಸ್ ಅಧಿಕಾರಿಗಳ ನೇಮಕ ಪ್ರಕರಣದಲ್ಲಿ ಹೈಕೋರ್ಟ್ ಎದುರು ತಲೆ ತಗ್ಗಿಸಿ ನಿಂತಿದ್ದ ಕೆಪಿಎಸ್ಸಿ, ಈಗ ಸುಪ್ರೀಂ ಕೋರ್ಟ್ ಮುಂದೆ ತಲೆ ತಗ್ಗಿಸಿ ನಿಲ್ ಬೇಕಾದ ಸ್ಥಿತಿ ಬಂದಿದೆ. ಗ್ರಾಮೀಣ ಕೋಟಾದಡಿಯಲ್ಲಿ ನೇಮಕವಾಗಿರುವ ಸಿವಿಲ್ 22 ಇಂಜಿನಿಯರ್ಗಳು ಕೆಪಿಎಸ್ಸಿ 2016ರ ಜೂನ್ 21ರಂದು ಪ್ರಕಟಿಸಿರುವ ಹೊಸ ಪಟ್ಟಿಯಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಹೆಚ್ಚುವರಿ ಪಟ್ಟಿಯಲ್ಲಿದ್ದವರೆಲ್ಲ ಮುಖ್ಯ ಪಟ್ಟಿಗೆ ಸೇರ್ಪಡೆ

ಹೆಚ್ಚುವರಿ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳನ್ನು ಮುಖ್ಯ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಮೀಸಲಾತಿ ನೀತಿಯನ್ನೇ ಕೆಪಿಎಸ್ಸಿ ಗಾಳಿಗೆ ತೂರಿದೆ. ಅಲ್ಲದೆ, ಮೆಕ್ಯಾನಿಕಲ್ ಇಂಜಿನಿಯರ್ಗಳ ಪುನರ್ ನೇಮಕದ ಸಂದರ್ಭದಲ್ಲಿ ಕಂಡು ಬಂದಿದ್ದ ಗ್ರಾಮೀಣ ಮೀಸಲಾತಿ ಲೋಪವನ್ನು ಸರಿಪಡಿಸಿದ್ದ ಆಯೋಗ, ಸಿವಿಲ್ ಇಂಜಿನಿಯರ್ಗಳ ಪುನರ್ ನೇಮಕದಲ್ಲಿ ಲೋಪವನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.

ಏನಿದು ಪ್ರಕರಣ?

ಬ್ಯಾಕ್ಲಾಗ್ ಇಂಜಿನಿಯರ್ಗಳ ಗುತ್ತಿಗೆ ಆಧಾರದಲ್ಲಿ 1347 ಇಂಜಿನಿಯರ್ಗಳ ನೇಮಕವಾಗಿತ್ತು

ಸಿವಿಲ್, ಮೆಕ್ಯಾನಿಕಲ್ ವಿಭಾಗದಲ್ಲಿ 846 ಮಂದಿ ಅಸಿಸ್ಟಂಟ್ ಇಂಜಿನಿಯರ್ಗಳ ನೇಮಕವಾಗಿತ್ತು

ನಂತರ ಲೋಕೋಪಯೋಗಿ ಇಲಾಖೆ ಇವರ ಸೇವೆಯನ್ನು ವಿಲೀನಗೊಳಿಸಿತ್ತು. ವಯೋಮಿತಿಯನ್ನು 18ರಿಂದ 29 ಮತ್ತು 29ರಿಂದ 35. 35ರಿಂದ 40 ವರ್ಷ ವಯೋಮಿತಿ ಎಂದು 3 ಗುಂಪುಗಳನ್ನಾಗಿಸಲಾಗಿತ್ತು.

ಇಲಾಖೆ ಮಾಡಿದ್ದ ಈ ಕ್ರಮದಿಂದ ನೇಮಕದಿಂದ ವಂಚಿತರಾದ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು.

ಸುಪ್ರೀಂಕೋರ್ಟ್ ತೀರ್ಪೇನು?

ನೇಮಕಾತಿ ಆಯ್ಕೆ ಪ್ರಕ್ರಿಯೆಯನ್ನು 2001ರ ಬ್ಯಾಕ್ಲಾಗ್ ವಿಶೇಷ ನೇಮಕಾತಿ ನಿಯಮಾವಳಿ ಪ್ರಕಾರ ವಯೋಮಿತಿ, ವಿದ್ಯಾರ್ಹತೆ ಹಾಗೂ ಅಂದು ಚಾಲ್ತಿಯಲ್ಲಿದ್ದ ನಿಯಮ ಮಾನದಂಡಗಳ ಪ್ರಕಾರ ಆಯ್ಕೆ ಮಾಡ್ಬೇಕು. ಹಾಗೆಯೇ ವಯೋಮಿತಿ 18 ವರ್ಷದಿಂದ 29 ವರ್ಷ ಮತ್ತು 29 ರಿಂದ 40 ವರ್ಷ ವಯೋಮಿತಿವರೆಗೆ 2 ಗುಂಪುಗಳನ್ನಾಗಿಸಿ ಪುನರ್ ನೇಮಕ ಮಾಡ್ಬೇಕು. 2003ರಿಂದಲೇ ಸೇವಾ ಸೌಲಭ್ಯಗಳನ್ನು ಒದಗಿಸಿಕೊಡ್ಬೇಕು ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಕುರಿತು ನೇಮಕ ಪ್ರಕ್ರಿಯೆಯನ್ನು ಕೆಪಿಎಸ್ಸಿಗೆ ಸರ್ಕಾರ ವಹಿಸಿತ್ತು.

ಕೆಪಿಎಸ್ಸಿ ಮಾಡಿದ ಎಡವಟ್ಟೇನು?

ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಆಧರಿಸಿ 2016ರ ಜನವರಿಯಲ್ಲಿ ಆಯೋಗ ಅಧಿಸೂಚನೆ ಹೊರಡಿಸಿತ್ತು. 2016ರ ಏಪ್ರಿಲ್ 20ರಂದು ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಗಳ ಪುನರ್ ನೇಮಕದ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತು. ಆದರೆ ಇದಕ್ಕೂ ಮುನ್ನ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸ್ಲೇ ಇಲ್ಲ. ಇನ್ನು, ಆಕ್ಷೇಪಣೆ ಸಲ್ಲಿಸ್ಲಿಕ್ಕೆ ಸೇವೆಯಲ್ಲಿರೋ ಇಂಜಿನಿಯರ್ಗಳಿಗೆ ಕಾಲಾವಕಾಶವನ್ನೂ ನೀಡಿಲ್ಲ. ಆಯೋಗದ ಈ ನಡೆ ಗ್ರಾಮೀಣ ಕೋಟಾದಲ್ಲಿ ನೇಮಕವಾಗಿದ್ದ ಸಿವಿಲ್ ಇಂಜಿನಿಯರ್ಗಳ ಕೆಂಗಣ್ಣಿಗೆ ಗುರಿಯಾಗಿದೆ.

ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಯಥಾವತ್ತಾಗಿ ಪಾಲಿಸ್ಬೇಕಿದ್ದ ಕೆಪಿಎಸ್ಸಿ 2012ರ ನಂತರ ಜಾರಿಯಲ್ಲಿರೋ ಮೀಸಲಾತಿ ನಿಯಮ ಅನುಸರಿಸಿದೆ. ಇದ್ರ ಪ್ರಕಾರ 2016ರ ಏಪ್ರಿಲ್ , ಜೂನ್ 1, ಜೂನ್ 26ರಂದು ಒಟ್ಟು 3 ಪಟ್ಟಿ ಪ್ರಕಟಿಸಿದೆ. ಆದ್ರೆ ಇಡೀ ಪಟ್ಟಿನೇ ಈಗ ಗೊಂದಲಮಯವಾಗಿದೆ. ಆಯೋಗ ಮಾಡಿರೋ ಈ ತಪ್ಪಿನಿಂದ ಸೇವೆಯಲ್ಲಿರೋ ಇಂಜಿನಿಯರ್ಗಳು ಕೆಲ್ಸ ಕಳ್ಕೋಳ್ಳೊ ಪರಿಸ್ಥಿತಿಗೆ ಬಂದು ನಿಂತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top