News

ಕಾಶ್ಮೀರದಲ್ಲಿ ಶಿಕ್ಷಕನನ್ನು ಸಾಯುವಂತೆ ಥಳಿಸಿದ ಭದ್ರತಾ ಪಡೆಗಳು’: ನಿವಾಸಿಗಳ ಆರೋಪ

ಶ್ರೀನಗರ: ಕಾಶ್ಮೀರ ಗ್ರಾಮದಲ್ಲಿ ರಾತ್ರೋ ರಾತ್ರಿ ನಡೆದ ದಾಳಿಯಲ್ಲಿ ಭದ್ರತಾ ಪಡೆಗಳು 30 ವರ್ಷದ ಶಿಕ್ಷಕನನ್ನು ಥಳಿಸಿ ಕೊಂದಿದ್ದಾರೆ ಎಂದು ಗುರುವಾರ ನಿವಾಸಿಗಳು ಆರೋಪಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕ್ರ್ಯು ಗ್ರಾಮದಲ್ಲಿ ಪೊಲೀಸರು ಮತ್ತು ಸೇನೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಬಂಧಿಸಿದ 12 ಜನರಲ್ಲಿ ಶಬೀರ್ ಅಹಮದ್ ಮುಂಗಾ ಕೂಡ ಒಬ್ಬರು ಎಂದು ಅವರು ತಿಳಿಸಿದ್ದಾರೆ.

ಆದರೆ, ಪೊಲೀಸರು ಹೇಳಿರುವಂತೆ ಕ್ರ್ಯು ನಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಸಂಜೆಗೂ ಮುಂಚೆ ನಡೆದ ಘರ್ಷಣೆಯಲ್ಲಿ ಮುಂಗಾ ಮೃತಪಟ್ಟಿರುವುದು ಎಂದಿದ್ದಾರೆ.

ಗುರುವಾರ ಬೆಳಗ್ಗೆ ಮೃತ ದೇಹವನ್ನು ಕುಟುಂಬಕ್ಕೆ ನೀಡಲಾಗಿದೆ.

ಮುಂಗಾ ದೇಹದ ಮೇಲೆ ಚಿತ್ರಹಿಂಸೆಯ ಗುರುತುಗಳಿದ್ದು, ಗ್ರಾಮದಲ್ಲಿ ರಾತ್ರಿ ನಡೆದ ಪ್ರತಿಭಟನೆಗಳ ನಂತರ ಅವರನ್ನು ಬಂಧಿಸಿ ಸಾಯುವವರೆಗೆ ಹೊಡೆಯಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಇದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವುದರಿಂದ ಈ ಆರೋಪವನ್ನು ಧೃಢೀಕರಿಸಲು ಸಾಧ್ಯವಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ. ಮುಂಗಾ ಅಂತಿಮ ಸಂಸ್ಕಾರದ ವೇಳೆ ಜನ ಪ್ರತಿಭಟಿಸುವುದನ್ನು ಹತ್ತಿಕ್ಕುವುದಕ್ಕೆ ಕ್ರ್ಯು, ಪಾಂಪೊರ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಅಧಿಕಾರಿಗಳು ಕಫ್ರ್ಯೂ ವಿಧಿಸಿದ್ದಾರೆ.

@copy; kannadaprabha

@copy; kannadaprabha

ಈ ಸಾವಿನಿಂದ, ಹಿಜಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಜುಲೈ 8 ರಂದು ಭದ್ರತಾ ಪಡೆಗಳು ಹತ್ಯೆ ಮಾಡಿದಾಗಲಿಂದಲೂ ನಡೆದಿರುವ ಘರ್ಷಣೆಯಲ್ಲಿ ಮೃತಪಟ್ಟವರ ಸಂಖ್ಯೆ 66 ಕ್ಕೆ ಏರಿದೆ. ಕಾಶ್ಮೀರ ಕಣಿವೆಯಲ್ಲಿ 41 ನೆಯ ದಿನ ಕಫ್ರ್ಯೂ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಹೊಸದಾಗಿ ಹಿಂಸಾಚಾರ ಭುಗಿಲೆದ್ದಿರುವುದರಿಂದ ಮೊದಲ ಬಾರಿಗೆ ರಾತ್ರಿ ವೇಳೆಯಲ್ಲಿ ಕಫ್ರ್ಯೂ ವಿಸ್ತರಿಸಿ ಅಧಿಕಾರಿಗಳು ಆದೇಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top