fbpx
News

೭ ಸಾವಿರ ಕೆಜಿ ಚಿನ್ನ ವಶ : ದೇಶದಲ್ಲೇ ಅತೀ ದೊಡ್ಡ ಕಳ್ಳಸಾಗಾಟ ಪತ್ತೆ

ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಚಿನ್ನ ಕಳ್ಳ ಸಾಗಟ ವನ್ನು ಭೇದಿಸಿರುವ ದೆಹಲಿಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)  ಸುಮಾರು 2 ಸಾವಿರ ಕೋಟಿ ಬೆಲೆ ಬಾಳುವ 7 ಸಾವಿರ ಕೆಜಿ ಚಿನ್ನವನ್ನು ಶಪಡಿಸಿಕೊಂಡಿದೆ.

ಮ್ಯಾನ್ಮಾರ್ ನಿಂದ ಭಾರತಕ್ಕೆ ಅಕ್ರಮವಾಗಿ ೭ ಸಾವಿರ ಕೆಜಿ ಚಿನ್ನ ಸಾಗಿಸುವಾಗ ಡಿಆರ್‌ಐ ಅಧಿಕಾರಿಗಳು ಖದೀ ಮರನ್ನು ಸೆರೆಹಿಡಿದಿದ್ದಾರೆ. ಇದರ ಮೊತ್ತ ಸುಮಾರು 2 ಸಾವಿರ ಕೋಟಿ ಅಂದಾಜಿಸಲಾಗಿದೆ ಎಂದು ಡಿಆರ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಎರಡೂವರೆ ವರ್ಷಗಳಲ್ಲಿ ಕಳ್ಳಸಾಗಣೆಯಾಗಿದ್ದ 7 ಸಾವಿರ ಕೆಜಿ ಬಂಗಾರವನ್ನು ಡಿಆರ್‌ಐ ಜಪ್ತಿ ಮಾಡಿದೆ. ಈ ಸಂಬಂಧ ಗುವಾಹಟಿ ಮೂಲದ ವ್ಯಾಪಾರಿ ಹಾಗೂ ದೆಹಲಿ ಮೂಲದ ಆತನ ಸಹಚರನನ್ನು ಬಂಧಿಸಲಾಗಿದೆ. ಇವರಿಬ್ಬರೂ 617 ಸಲ ಚಿನ್ನವನ್ನು ಮ್ಯಾನ್ಮಾರ್ ನಿಂದ ಭಾರತಕ್ಕೆ ಕಳ್ಳ ಸಾಗಣೆ ಮಾಡಿರುವುದು ಪತ್ತೆಯಾಗಿದೆ.

ಸೆ.2ರಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ದೆಹಲಿ ಘಟಕದ ಅಧಿಕಾರಿಗಳು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಕೆಜಿ 24 ಕ್ಯಾರಟ್ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರ. ಇದರ ಮಾರುಕಟ್ಟೆ ಮೌಲ್ಯ 3.1 ಕೋಟಿ ರುಪಾಯಿ ಗಳಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top