fbpx
Editor's Pick

ಸುಪ್ರೀಂಗೆ ಸೆಡ್ಡು ಹೊಡೆಯಲು ನಡೆಯಲಿದೆ ಉಭಯ ಸದನಗಳ ಐತಿಹಾಸಿಕ ಅಧಿವೇಶನ

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ನಿಲುವಿಗೆ ಅಂಟಿಕೊಂಡಿರುವ ರಾಜ್ಯ ಸರಕಾರ ಶುಕ್ರವಾರ ತುರ್ತು ಉಭಯ ಸದನಗಳ ಅಧಿವೇಶನ ಕರೆಯಲು ನಿರ್ಧರಿಸಿದೆ.

ಬುಧವಾರ ದಿನವೀಡಿ ನಡೆದ ಬೆಳವಣಿಗೆ ನಡೆದ ನಂತರ ರಾತ್ರಿ ನಡೆದ ಸಚಿವ ಸಂಪುಟದಲ್ಲಿ ಶುಕ್ರವಾರ ಮಧ್ಯಾಹ್ನ ೧೧ ಗಂಟೆಗೆ ಉಭಯ ಸದನಗಳ ಸಭೆ ಕರೆಯಲು ತೀರ್ಮಾನಿಸಲಾಯಿತು.

ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ವಪಕ್ಷಗಳ ಸಭೆಯಲ್ಲಿ ಕಾವೇರಿ ವಿವಾದದ ವಾಸ್ತವಾಂಶ ಹಾಗೂ ಸುಪ್ರೀಂಕೊರ್ಟ್ ತೀರ್ಪಿನ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಸಚಿವ ಸಂಪುಟದಲ್ಲಿ ಈ ಬಗ್ಗೆ ಪರಿಶೀಲಿಸಲಾಯಿತು ಎಂದು ಅವರು ವಿವರಿಸಿದರು.
ಸೆಪ್ಟೆಂಬರ್ ೨೯ ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆ ಯಲ್ಲಿ ತುರ್ತು ಉಭಯ ಸಭೆ ಕರೆಯಲು ಸರ್ವಾನುಮತದಿಂದ ನಿರ್ಧ ರಿಸಲಾಯಿತು. ಉಭಯ ಸದನಗಳ ಸಭೆ ನಡೆದು ತೀರ್ಮಾನ ಕೈಗೊಳ್ಳುವವರೆಗೂ ನೀರು ಬಿಡುವ ತೀರ್ಮಾನವನ್ನು ಮುಂದೂಡಲಾ ಯಿತು ಎಂದು ಸಿದ್ದರಾಮಯ್ಯ ಲಿಖಿತ ಹೇಳಿಕೆ ಓದಿದರು.

೨೮ ವರ್ಷ ನಂತರ ಸಭೆಗೆ ಹಾಜರಾದ ಗೌಡರು

ಮುಖ್ಯಮಂತ್ರಿ ಆಹ್ವಾನದ ಮೇರೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡರು. ಈ ಮೂಲಕ ೨೮ ವರ್ಷಗಳ ನಂತರ ದೇವೇಗೌಡರು ಭಾಗವಹಿಸಿದರು.

೧೯೯೬ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರು ಕೊನೆಯ ಬಾರಿಗೆ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಸುಮಾರು ಅರ್ಧಗಂಟೆ ಮಾತನಾಡಿದ ದೇವೇಗೌಡರು, ನೀರು ಬಿಡದೇ ಇರುವುದರಿಂದ ಆಗುವ ಸಮಸ್ಯೆಗಳನ್ನು ಎದುರಿಸಲು ಸರಕಾರ ಸಜ್ಜಾಗಿರಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಪದ್ಮನಾಭನಗರದ ಅವರ ನಿವಾಸಕ್ಕೆ ಮೊದಲ ಬಾರಿ ತೆರಳಿದ ಸಿದ್ಧರಾಮಯ್ಯ, ಸುಮಾರು ಒಂದೂವರೆ ಗಂಟೆಗಳ ಕಾಲ ಕಾವೇರಿ ವಿವಾದದ ಸಂಬಂಧ ಚರ್ಚಿಸಿದರು.

ಸಭೆಯಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಜಿ. ಪರಮೇಶ್ವರ್. ಸಚಿವರಾದ ಎಂ.ಬಿ. ಪಾಟೀಲ್, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top