fbpx
Entertainment

ಬಿಗ್ ಬಾಸ್ ೪ಗೆ ಅನುಪಮಾ, ರಕ್ಷಿತಾ?

ಬಿಗ್ ಬಾಸ್ ಕನ್ನಡ ಅವತರಣಿಕೆಯ ೪ನೇ ಆವೃತ್ತಿಯಲ್ಲಿ ಇನ್ನೆರಡು ಹೊಸ ಹೆಸರುಗಳು ಕೇಳಿ ಬಂದಿವೆ. ಅದರಲ್ಲೂ ಇತ್ತೀಚೆಗೆ ಇಡೀ ರಾಜ್ಯದ ಗಮನ ಸೆಳೆದ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಹಾಗೂ ವಿವಾದಗಳಿಗೆ ಮತ್ತೊಂದು ಹೆಸರಾದ ಮಾಜಿ ನಾಯಕ ನಟಿ ರಕ್ಷಿತಾ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

 

ಕಳೆದ ಆವೃತ್ತಿಯಲ್ಲಿ ಬಿಗ್ ಬಾಸ್ ಗೆ ಟಿ ಆರ್ ಪಿ ತಂದುಕೊಟ್ಟಿದ್ದು ಹುಚ್ಚ ವೆಂಕಟ್. ವಿವಾದ ಸೃಷ್ಟಿಸೋರು, ವಿವಾದಕ್ಕೆ ಸಿಲುಕಿದವರು ಸಿಕ್ಕಿದಷ್ಟೂ ಟಿಆರ್ ಪಿ ಬರು ತ್ತದೆ ಎಂಬುದನ್ನು ಅರಿತಿರುವ ಕಲರ್ಸ್ ತಂಡ ಇವರಿ ಬ್ಬರನ್ನು ಬಿಗ್ ಬಾಸ್ ಮನೆಗೆ ಆಹ್ವಾನಿಸಿದೆಯಂತೆ. ಈ ಬಗ್ಗೆ ಅನುಪಮಾ ಆಗಲಿ ರಕ್ಷಿತಾ ಆಗಲಿ ಇನ್ನೂ ಬಾಯಿ ಬಿಟ್ಟಿಲ್ಲ.
ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿರುವ ಅನುಪಮಾ ರಾಜಕೀಯ ಪಕ್ಷ ಸೇರುವ ಬಗ್ಗೆ ವದಂತಿಗಳಿವೆ. ಸದ್ಯಕ್ಲೆ ಅವರಿಗೆ ಯಾವುದೇ ಕೆಲಸವೂ ಇಲ್ಲ.

ಬಹುತೇಕ ಇದೇ ಪರಿಸ್ಥಿತಿ ಕೂಡ ರಕ್ಷಿತಾ ಅನುಭವಿಸು ತ್ತಿದ್ದಾರೆ. ಪ್ರೇಮ್ ಮದುವೆ ಆದ ನಂತರ ನಟನೆಗೆ ಗುಡ್ ಬೈ ಹೇಳಿರುವ ರಕ್ಷಿತಾ, ರಾಜಕೀಯ ಗೊಂದಲದಿಂದ ಮೂಲೆಗುಂಪಾದರು. ನಿರ್ಮಾಪಕಿ ಆದರೂ ಹೆಚ್ಚು ಕೆಲಸ ಇಲ್ಲದಂತಾಗಿದೆ. ಹಾಗಾಗಿ ಇವರಿಬ್ಬರು ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top