fbpx
News

ಭಾರತದ ಜಯಕ್ಕೆ ಆಶ್ವಿನಿ ‘ದೇವತೆ’ ಅಸ್ತು

ಕಾನ್ಪುರ: ತಿರುವು ಪಡೆಯುವ ಪಿಚ್ ನಲ್ಲಿ ಪ್ರವಾಸಿಗರು ತರಗಲೆಯಂತೆ ಉದುರುವಂತೆ ಮಾಡಿ ಐತಿಹಾಸಿಕ ೫೦೦ನೇ ಟೆಸ್ಟ್ ಪಂದ್ಯದಲ್ಲಿ ಸುಲಭ ಗೆಲುವು ತಂದುಕೊಟ್ಟ ಆರ್. ‘ಅಶ್ವಿನ್’ ಭಾರತಿಯರ ಪಾಲಿಗೆ ದೇವರಾದರು.
434 ರನ್ ಗಳ ಕಠಿಣ ಗುರಿ ಪಡೆದಿದ್ದ ನ್ಯೂಜಿಲೆಂಡ್ ಮೂರನೇ ದಿನದಾಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ನಾಲ್ಕನೇ ದಿನವಾದ ಸೋಮವಾರ ಅಶ್ವಿನ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ 236  ರನ್ ಗಳಿಗೆ ಆಲೌಟಾಗುವ ಮೂಲಕ 197
ರನ್ ಗಳಿಂದ ಸೋಲುಂಡಿತು. ಇದರೊಂದಿಗೆ ಭಾರತ  3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ೧-೦ ಮುನ್ನಡೆ ಪಡೆಯಿತು.

ಸೋಮವಾರ ಕೊನೆಯ ದಿನದ ಆಟದಲ್ಲಿ ಭಾರತಕ್ಕೆ ಕಾಡಿದ ಸ್ಯಾಂಟನರ್ ಹಾಗೂ ರೋಂಚಿ ಜೋಡಿ ದಿಟ್ಟ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತು. ಕೆಟ್ಟ ಎಸೆತವನ್ನು ದಂಡಿಸುತ್ತಾ ಸಾಗಿದ ಜೋಡಿ, ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿತು. ಅಲ್ಲದೆ ವಿಕೆಟ್ ಕಾಪಾಡಿಕೊಳ್ಳುವತ್ತ ಚಿತ್ತ ನೆಟ್ಟಿತು. ಈ ಜೋಡಿ ೩೬.೧ ಓವರ್‌ಗಳಲ್ಲಿ ೧೦೨ ರನ್ ಕಲೆ ಹಾಕಿತು. ಈ ಜೋಡಿಯನ್ನು ಜಡೇಜಾ ಬೇರ್ಪಡಿಸುವಲ್ಲಿ ಸಫಲರಾದರು.

ಒಂದು ಹಂತದಲ್ಲಿ 194 ರನ್‌ಗಳಿಗೆ 5ವಿಕೆಟ್ ಕಳೆದು ಕೊಂಡಿದ್ದ ನ್ಯೂಜಿಲೆಂಡ್ ಅಶ್ವಿನ್, ಶಮಿ ಅವರ ಬೌಲಿಂಗ್ ಎದುರಿಸುವಲ್ಲಿ ವಿಫಲವಾಯಿತು. ಫಲವಾಗಿ 236 ರನ್‌ಗಳಿಗೆ ನ್ಯೂಜಿಲೆಂಡ್ ಆಲೌಟ್ ಆಯಿತು.

ಸ್ಪಿನ್ ಮಾಂತ್ರಿಕ ಅಶ್ವಿನ್ ಸೋಮವಾರ ನ್ಯೂಜಿಲೆಂಡ್ ತಂಡವನ್ನು ಬಹುವಾಗಿ ಕಾಡಿದರು. ಸರಿಯಾದ ಸ್ಥಳದಲ್ಲಿ ಚೆಂಡನ್ನು ಎಸೆದ ಅಶ್ವಿನ್ ವಿಕೆಟ್ ಬೇಟೆಯನ್ನು ನಡೆಸಿದರು. 35.3 ಓವರ್‌ಗಳನ್ನು ಮಾಡಿದ ಅಶ್ವಿನ್ 132 ರನ್ ನೀಡಿ ಆರು ಬಹು ಮುಖ್ಯ ವಿಕೆಟ್ ಪಡೆದರು. ಅಲ್ಲದೆ ಟೆಸ್ಟ್ ಪಂದ್ಯದಲ್ಲಿ ೧೯ನೇ ಬಾರಿ 5 ವಿಕೆಟ್ ಕಿತ್ತರು. ಮೊದಲ ಟೆಸ್ಟ್‌ನಲ್ಲಿ 4 ವಿಕೆಟ್ ಪಡೆದಿದ್ದ ಅಶ್ವಿನ್, ದ್ವಿತೀಯ ಇನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದರು. ಒಟ್ಟು ಒಂದು ಪಂದ್ಯದಲ್ಲಿ ೫ನೇ ಬಾರಿ 10 ವಿಕೆಟ್ ಪಡೆದ ಸಾಧನೆ ಇವರದ್ದಾಗಿದೆ.

ಭಾರತ ಮೊದಲ ಇನಿಂಗ್ಸ್ ೩೧೮
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ೨೬೨
ಭಾರತ ದ್ವಿತೀಯ ಇನಿಂಗ್ಸ್ ೩೭೭ಕ್ಕೆ ೫ ಡಿಕ್ಲೇರ್
ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್ ೨೩೬

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top