fbpx
Karnataka

ಹಿಂದೆಂದೂ ಬಂದಿರದ ಕರ್ನಾಟಕ ರೈತರ ಸಂಕಷ್ಟ..

ನಮಗೆ ನಿಮಗೆ ಗೊತ್ತಿರುವಂತೆ ಈ ವರ್ಷ ಮುಂಗಾರು ಕೈ ಕೊಟ್ಟಿದೆ. ಅದೆಷ್ಟರ ಮಟ್ಟಿಗೆ ಎಂದರೆ ಈ ವರ್ಷ ಲಕ್ಷಾಂತರ ಮಂದಿ ವ್ಯವಸಾಯ ತ್ಯಜಿಸಿ ದಿನಗೂಲಿ ಮಾಡುವತ್ತ ಮುಖ ಮಾಡಿದ್ದಾರೆ. ಹೌದು, ಕಲ್ಪತರು ನಾಡು ಎಂದೇ ಖ್ಯಾತಿ ಗಳಿಸಿರುವ ತುಮಕೂರಿಗೂ ಮಳೆ ಅಭಾವ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ವರ್ಷ ಹೇಮೆ ಬರಿದಾಗಿದ್ದಾಳೆ, ಅದೆಷ್ಟರ ಮಟ್ಟಿಗೆ ಎಂದರೆ ಆಕೆಯ ಒಡಲಲ್ಲಿ 37 ಟಿಎಂಸಿ ಶೇಕರಿಸಬಹುದಾದ ಸಾಮರ್ಥ್ಯವಿದ್ದರೂ ಈಗ ಇರುವುದು ಕೇವಲ 7 ಟಿಎಂಸಿ ಮಾತ್ರ. ಅದರಲ್ಲೂ ಗಾಯದ ಮೇಲೆ ಬರೆ ಎಳೆದಂತೆ 7 ಟಿಎಂಸಿಯಲ್ಲಿ 3 ಟಿಎಂಸಿ ಬಿಟ್ಟು ಉಳಿದದ್ದು ಡೆಡ್ ಸ್ಟೋರೇಜ್.

ಅಧಿಕಾರಿಗಳು ಹೇಳುವ ಪ್ರಕಾರ ಸುಮಾರು ಜೂನ್ ನಿಂದ ಇಲ್ಲಿಯವರೆಗೆ ಸುಮಾರು 16 ಟಿಎಂಸಿ ಯಷ್ಟು ನೀರನ್ನು ಕೃಷ್ಣ ರಾಜ ಸಾಗರ ಡ್ಯಾಮ್ ಗೆ ಹರಿ ಬಿಡಲಾಗಿದ್ದು, ಅಲ್ಲಿಂದ ಆ ನೀರು ತಮಿಳುನಾಡಿಗೆ ಹರಿದು ಹೋಗಿದೆ. ತುಮಕೂರಿನ ಜನತೆ ಈ ವರ್ಷ ನೀರಿನ ವಿಚಾರವಾಗಿ ತಾತ್ವರ ಪಡಲೇ ಬೇಕು ಎಂಬುದು ಈ ಅಂಕಿಅಂಶಗಳು ಸಾರಿ ಸಾರಿ ಹೇಳುತ್ತಿವೆ.

ತುಮಕೂರು ಜಿಲ್ಲೆಯಲ್ಲಿ ಸುಮಾರು 176 ಟ್ಯಾಂಕುಗಳು ಇದ್ದು ಅವುಗಳಲ್ಲಿ ಕೇವಲ 21 ಮಾತ್ರ 50 ರಿಂದ 100 ರಷ್ಟು ನೀರು ಹೊಂದಿವೆ. ಈಗಾಗಲೇ ಟ್ಯಾಂಕುಗಳಿಂದ ನೀರನ್ನು ನಗರಕ್ಕೆ ಕುಡಿಯುವ ಸಲುವಾಗಿ ಹರಿಬಿಡಲಾಗುತ್ತಿದ್ದು, ಮುಂದಿನ ಮಳೆಗಾಲದ ವರೆಗೂ ಏನು ಮಾಡಬೇಕು ಎಂಬುದು ಯಕ್ಷ ಪ್ರೆಶ್ನೆಯಾಗಿದೆ.

ಹೇಮಾವತಿಯು ಸದ್ಯ ತುಮಕೂರು ಹಾಸನ ಮತ್ತು ಮಂಡ್ಯ ಜನತೆಯ ಜೀವ ನಾಡಿಯಾಗಿ, ಜನರ ಕಷ್ಟಕಾರ್ಪಣ್ಯಗಳಿಗೆ ನೀರು ಒದಗಿಸುತ್ತಿರುವಾಗ ಆಕೆಯೇ ಬರಿದಾಗಿರುವುದು ಶೋಚನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top