fbpx
Karnataka

TRP ಗೋಸ್ಕರ ರೈತನಿಗೆ ವಿಷ ಕುಡಿಸಿದ ಪತ್ರಕರ್ತ… ಜಾಗ್ವಾರ್ ಚಿತ್ರದ ಡೈಲಾಗ್ ನೆನಪಿಸುತ್ತದೆ ಈ ವಿಡಿಯೋ….

ನಮ್ಮ ನ್ಯೂಸ್ ಚಾನೆಲ್ ಗಳು ತಮ್ಮ TRP ಗೋಸ್ಕರ ಎಂತ ಹೇಯ ಕೆಲಸಕ್ಕೂ ಕೈ ಹಾಕುತ್ತಾರೆ ಎಂಬುದಕ್ಕೆ ಈ ವಿಡಿಯೋ ಉದಾಹರಣೆಯಾಗಿದೆ. ಒಂದು ಕಡೆ ಬರಗಾಲದಿಂದ ಬೆಳೆ ನಾಶವಾಗಿ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ, ಇನ್ನೊಂದು ಕಡೆ ಜಯಲಲಿತಾ ಕಾಟ!! ಇವರಿಬ್ಬರ ನಡುವೆ ಚಲ್ಲಾಟವಾಡುತ್ತಿರುವುದು ನ್ಯೂಸ್ ಚಾನೆಲ್ ಗಳು.

ಬಳ್ಳಾರಿ ಜಿಲ್ಲೆಯಲ್ಲಿ ಈ ಘಟನೆ ನೆಡೆದಿದೆ. ಕೊರ್ಲಗುಂದಿ ಗ್ರಾಮದ ರೈತರೊಬ್ಬರು ಮೆಣಸಿನ ಬೆಳೆ ಬೆಳೆದಿದ್ದು, ಸರಿಯಾದ ಸಮಯಕ್ಕೆ ಮಳೆ ಬೀಳದೆ ಬರ ಬಂದೆರಗಿತ್ತು. ಇದರಿಂದ ಬೇಸತ್ತ ರೈತ ಬೆಳೆಯನ್ನು ತಾನೇ ನಾಶಪಡಿಸಲು ಮುಂದಾಗಿದ್ದ. ಆದರೆ, ಈ ವಿಚಾರ ತಿಳಿದ ಊರಿನ ರಾಜಕೀಯ ಮುಖಂಡರೊಬ್ಬರು ನ್ಯೂಸ್‌ ಚಾನಲ್‌ಗಳಿಗೆ ಮಾಹಿತಿ ನೀಡಿ ಮಾಧ್ಯಮ ಪ್ರತಿನಿಧಿಗಳನ್ನು ರೈತನ ಜಮೀನಿಗೆ ಕರೆದುಕೊಂಡು ಹೋಗಿದ್ದರು. ವಿಷ ಕುಡಿಯಲು ಮುಂದಾದ ರೈತನನ್ನು ದೃಶ್ಯ ಮಾಧ್ಯಮಗಳ ಕ್ಯಾಮರಾಮನ್‌ಗಳು ವೀಡಿಯೋಗಾಗಿ ವಿಷ ಕುಡಿಯುವಂತೆ ನಾಟಕ ಮಾಡುವಂತೆ ಪ್ರೇರೆಪಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಆಗ ರೈತ ಮಾದ್ಯಮ ಪ್ರತಿನಿಧಿಗಳ ಎದುರೇ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ದೃಶ್ಯವನ್ನು ಎರಡು ನ್ಯೂಸ್ ಚಾನೆಲ್‌‌‌ನವರು ಚಿತ್ರೀಕರಿಸಿದ್ದಾರೆ. ಈ ವಿಷಯ ತಿಳಿದ ಬೇರೆ ಕೆಲ ಚಾನೆಲ್‌ನವರು ಕೆಲ ಸಮಯದ ಬಳಿಕ ಆ ರೈತನನ್ನು ಸಂಪರ್ಕಿಸಿದ್ದಾರೆ.ಇದೇ ದೃಶ್ಯಾವಳಿಗಾಗಿ ಆ ರೈತನಿಗೆ ಮತ್ತೊಮ್ಮೆ ವಿಷ ಕುಡಿದಂತೆ ನಟಿಸುವಂತೆ ತಿಳಿಸಿದ್ದಾರೆ. ಕ್ಯಾಮರಾಮನ್‌ಗಳ ಒತ್ತಡಕ್ಕೆ ರೈತ ಮತ್ತೊಮ್ಮೆ ವಿಷ ಕುಡಿದಂತೆ ನಟಿಸಿದ್ದಾನೆ. ಸಮೀಪದಲ್ಲಿದ್ದವರು ಅದನ್ನು ತಡೆಯುವಂತೆಯೂ ನಟಿಸಿದ್ದಾರೆ.

ಇದನೆಲ್ಲಾ ನೋಡುತ್ತಿದ್ದರೆ ಜಾಗ್ವಾರ್ ಚಿತ್ರದ ಜಗಪತಿಬಾಬುರವರ “If there is no news, create the news” ಎನ್ನುವ ಡೈಲಾಗ್ ನೆನಪಿಗೆ ಬರುತ್ತದೆ.

SOURCE : EENADU KANNADA

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top