fbpx
Awareness

ಹೆಣ್ಣುಮಕ್ಕಳಿಗೂ ಕರೀಮಣಿಗೂ ಇರುವ ನಂಟು…

‘‘ಮಾಂಗಲ್ಯಮ್‌ ತಂತುನಾನೇನ ಮಮ ಜೀವನ ಹೇತುನಾ। ಕಂಠೆ ಬಧ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಮ್‌।।’’ ಈ ಶ್ಲೋಕ ಎಲ್ಲಾ ಹಿಂದೂ ಮದುವೆಗಳಲ್ಲಿ ತಾಳಿ ಕಟ್ಟುವಾಗ ಕೇಳಿ ಬರೋದು ಸರ್ವೇ ಸಾಮಾನ್ಯ. ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯದಕ್ಕೆ ಎಷ್ಟು ಮಹತ್ವವಿದೆಯೇ ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ.

ತಾಳಿ ಕಟ್ಟೋರು, ಕಟ್ಟಿಸಿಕೊಳೋರು, ಕಟ್ಟಿಸೋರು ಎಲ್ಲರೂ ಈ ಮುಖ್ಯವಾದ ಶ್ಲೋಕಾನ ಅರ್ಥ ಮಾಡ್ಕೊಂಡ್ರೆ ಒಳ್ಳೇದು… ಮದುವೆಯ ಸಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ, ಕುಂಕುಮ, ಗಾಜಿನಬಳೆ, ಕಾಲುಂಗರ, ಹೂವು ನೀಡಲಾಗುವುದು; ಅದು ಗೃಹಿಣಿಗೆ ಸೌಭಾಗ್ಯಕರವಾದವು.

ಮಂಗಳಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ, ಅತಿ ಪಾವಿತ್ರ್ಯದ, ಅತ್ಯಂತ ಭಾವನಾತ್ಮಕವಾದ ಆಭರಣವಿದೆಯಲ್ಲ – ಅದರಲ್ಲಿ ‘ಮಾಂಗಲ್ಯ’ ಯಾವುದು, ಮಾಂಗಲ್ಯಧಾರಣದ ಸಂಪ್ರದಾಯ ಹೇಗೆ ಬಂತು, ಬಂಗಾರದೊಡವೆಯಲ್ಲಿ ಕರಿಮಣಿಗಳೇಕೆ, ಕರಿಮಣಿಸರದಲ್ಲಿ ಹವಳವೇಕೆ ಎಂಬುದನ್ನು ನೋಡೋಣ.

ಕರಿ ಮಣಿ ಮಹತ್ವ ತಿಳಿಯೋಣ :

  • ಶಿವನು ಪಾರ್ವತಿಗೆ ಮಂಗಲಸೂತ್ರವನ್ನು ಕಟ್ಟಿದನೆಂದಿದು ಆದಿಶಂಕರರು ರಚಿಸಿದ ಸೌಂದರ್ಯಲಹರಿಯಲ್ಲಿ ಪ್ರಸ್ತಾಪಿಸಲಾಗಿದೆ

 

  • ಕೆಟ್ಟದೃಷ್ಟಿ ವಿವಾಹಿತ ಹೆಂಗಸಿನ ಮೇಲೆ ಬೀಳಬಾರದು ಎಂದು ಮಂಗಲಸೂತ್ರದಲ್ಲಿ ಕಪ್ಪುಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ.

 

  • ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಕಪ್ಪು ಮಣಿ ಹೀರಿಕೊಳ್ಳುತ್ತವೆ ಮತ್ತು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದಂತೆ.

 

  • ಸುಂದರ ಸರಮಾಲೆಯಾಗುವುದು ಕರಿಮಣಿಗಳನ್ನು ಒಂದೊಂದಾಗಿ ಪೋಣಿಸಿದಾಗ ಮಾತ್ರ, ಅದರಂತೆಯೇ ಗಂಡಿನ ಕುಟುಂಬವೆಂಬ ಸೂತ್ರದೊಂದಿಗೆ ನವವಿವಾಹಿತ ಹೆಣ್ಣು ಅಷ್ಟೇ ಸುಲಲಿತವಾಗಿ ಹೊಂದಿಕೊಳ್ಳುತ್ತಾಳೆ ಎಂಬ ಹೋಲಿಸುತ್ತಾರೆ.

 

  • ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆ ಹಾಲಿನ ಉಷ್ಣತೆಯನ್ನು ಹೀರಿಕೊಂಡು ಎದೆಹಾಲು ಕೆಡದಂತೆ ಶಿಶುವಿಗೆ ಉಣಲೂ ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ.

ಕರಿಮಣಿಯ ಬಗೆಗಳು :

ಬ್ರಾಹ್ಮಣವರ್ಗದಲ್ಲಿ ಎರಡು ಪದಕಗಳ ತಾಳಿ.

ಕಾಯಸ್ಥ/ಮರಾಠಾ ಸ್ತ್ರೀಯರಿಗೆ ಒಂದು ಪದಕದ ತಾಳಿ.

ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿನ್ನ ವಜ್ರ ವೈಢೂರ್ಯಗಳಿರುವ ತಾಳಿ.

ವೀರಶೈವ ಸ್ತ್ರೀಯರು ತಾಳಿಯಾಂದಿಗೇ ಲಿಂಗದ ಕರಂಡಕವನ್ನು ಕಟ್ಟಿಕೊಳ್ಳುವುದೂ ಇದೆ.

ಕರಿಮಣಿ ಕಾಣೆಯಾಗುತ್ತಿದೆಯೇ…!?

ಗೃಹಿಣಿಯರು ಇಂದು ಸೌಭಾಗ್ಯಕರವಾದ ಇವುಗಳನ್ನು ಧರಿಸುವುದರಲ್ಲಿ ಆಸಕ್ತಿ ವಹಿಸುತ್ತಿಲ್ಲ. ಆದರೆ ಅವುಗಳಿಗಿರುವ ಮಹತ್ವವನ್ನು, ಸಂಪ್ರದಾಯವನ್ನು ಎತ್ತಿಹಿಡಿಯುವ ಗೌರವಾರ್ಹವಾಗುವಂತಹ ಮಂಗಳಕರ ಆಭರಣಗಳನ್ನು ಧರಿಸದೆ ಫ್ಯಾಷನ್ ಜಗತ್ತಿಗೆ ತಮ್ಮ ಕೊರಳನ್ನು ಒಡ್ಡುತ್ತಿರುವುದು ಶೋಚನೀಯ ಸಂಗತಿ. ದಕ್ಷಿಣ ಭಾರತದಲ್ಲಿ ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರೂ ವಿವಾಹಾನಂತರ ತಾಳಿ/ಕರಿಮಣಿಸರ ಧರಿಸುತ್ತಾರೆ. ಇನ್ನಾದರೂ ಹಿಂದುಗಳಾದ ನಾವು ನಮ್ಮ ಸಂಸ್ಕೃತಿ ಪದ್ದತಿಯನ್ನು ಬಿಡದೆ, ಎಚ್ಚರಿಕೆಯಿಂದ ಮುನ್ನೆಡೆಯೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top