fbpx
Health

ನಿಮ್ಮ ಆರೋಗ್ಯಕ್ಕೆ ವಿಟಮಿನ್‌ಗಳು !

ವಿಟಮಿನ್‌ಗಳು ನಮ್ಮ ಆರೋಗ್ಯದಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸುತ್ತಿದೆ. ನಮ್ಮ ದೇಹಕ್ಕೆ ಪರಿಪೂರ್ಣ ಆರೋಗ್ಯ ಮತ್ತು ನಿರೋಗಿಯಾಗಿಯೂ ಇಡುವಲ್ಲಿ ವಿಟಮಿನ್‌ಗಳು ಪಾತ್ರ ಅತ್ಯಂತ ಹಿರಿದು. ತರಕಾರಿ, ಹಣ್ಣು ಮತ್ತು ಇತರೆ ಆಹಾರ ಪದಾರ್ಥಗಳಲ್ಲಿ ಈ ವಿಟಮಿನ್‌ಗಳು ಹೇರಳವಾಗಿ ದೊರೆಯುತ್ತವೆ. ಯಾವ ತರಕಾರಿ, ಹಣ್ಣು ಮತ್ತು ಆಹಾರ ಪದಾರ್ಥಗಳಲ್ಲಿ ಯಾವ ಯಾವ ವಿಟಮಿನ್‌ಗಳು ದೊರೆಯುವುದೆಂದು ಈ ಕೆಳಗೆ ತಿಳಿದುಕೊಳ್ಳಿ.

1. ಸಿಹಿಗೆಣಸು, ಕ್ಯಾರೆಟ್, ಮಾವು, ಸೊಪ್ಪು, ಹಾಲು, ಮೊಟ್ಟೆ, ಕುಂಬಳ, ಪರಂಗಿಹಣ್ಣು, ಇತ್ಯಾದಿಗಳಲ್ಲಿ ಬಹುತೇಕ ಎಲ್ಲಾ ಬಗೆಯ ವಿಟಮಿನ್‌ಗಳೂ ಅಡಗಿವೆ.

2. ನೆಲ್ಲಿಕಾಯಿ, ಹಾಗಲಕಾಯಿ, ಒಣದ್ರಾಕ್ಷಿ ಇತ್ಯಾದಿಗಳನ್ನು ನೀರಿನೊಂದಿಗೆ (ನೆನೆಸಿ ಅಥವಾ ಬೆರೆಸಿ) ಸೇವಿಸಿ.

3. ರಕ್ತದ ಶುದ್ದೀಕರಣ ಹಾಗೂ ಕಂಗಳ ಬೆಳಕು ಹೆಚ್ಚಿಸಲು ಆದಷ್ಟು ತಾಜಾ ಕ್ಯಾರೆಟ್‌ನ್ನು ಹಸಿಯಾಗಿಯೇ (ಸಲಾಡ್, ಕೋಸಂಬರಿ ರೂಪದಲ್ಲಿ) ಸೇವಿಸಿ.

4. ಪ್ರತಿ ದಿನ ಕನಿಷ್ಟ 8-10 ದೊಡ್ಡ ಲೋಟ ನೀರು ಕುಡಿಯಿರಿ. ದೇಹದಲ್ಲಿ ಜಮೆಯಾಗುವ ಹಾನಿಕಾರಕ ಪದಾರ್ಥಗಳನ್ನು ಹೊರಗೆಸೆಯುವಲ್ಲಿ ಹಾಗೂ ಶುದ್ಧೀಕರಣದಲ್ಲಿ ನೀರು ಪ್ರಧಾನ ಪಾತ್ರ ವಹಿಸುತ್ತದೆ.

5. ವಿಟಮಿನ್ ’ಸಿ’ ನಮ್ಮ ದೇಹದ ಸಿಮೆಂಟ್ ಮೆಟೀರಿಯಲ್ ಎಂದೇ ತಿಳಿಯಲಾಗಿದೆ. ಇದರ ಕೊರತೆಯಿಂದಾಗಿ ಚರ್ಮದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಕಣ್ಣಿನ ದೃಷಿಯೂ ಮಂಕಾಗತೊಡಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿ ಬ್ರೋಕ್ಲಿ, ಹೂಕೋಸು, ನಿಂಬೆಹಣ್ಣು, ಸ್ಟ್ರಾಬೆರಿ, ಸಾಸಿವೆ (ಇದರ ಸೊಪ್ಪು ಸಿಗದಿದ್ದರೆ ಮೂಲಂಗಿ ಸೊಪ್ಪು ಬಳಸಬಹುದು), ಪರಂಗಿಹಣ್ಣು, ಎಲೆಕೋಸು, ಬಗೆಬಗೆಯ ಸೋಪ್ಪುಗಳು, ಕಿತ್ತಳೆಹಣ್ಣು, ಬಿಳಿ/ಕಪ್ಪು ದ್ರಾಕ್ಷೀ, ಟೊಮೇಟೊ, ರಾಸ್ಪ್‌ಬೆರಿ, ಸೆಲೆರಿ, ಅನಾನಸ್, ಕಲ್ಲಂಗಡಿಹಣ್ಣು, ಕರ್ಬೂಜಾ, ಸೌತೇಕಾಯಿ (ವಿಭಿನ್ನ ಬಗೆಯವು), ಹಸಿ ಬಟಾಣಿ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಸೇಬು, ಬಾಳೆಹಣ್ಣು ಇತ್ಯಾದಿಗಳನ್ನು ಸೇವಿಸಬೇಕು.

6. ತ್ವಚೆಯ ಸೌಂದರ್ಯ ಹೆಚ್ಚಿಸುವುದಕ್ಕಾಗಿ, ಹಿಂದಿನ ರಾತ್ರಿ ಮೆಂತ್ಯ ನೆನೆಹಾಕಿ ಮಾರನೇ ದಿನ ನುಣ್ಣಗೆ ಅರೆದು, ನೀರು ಮಜ್ಜಿಗೆಯಲ್ಲಿ ಕದಡಿಕೊಂಡು ಕುಡಿಯಿರಿ. ಪ್ರತಿ ದಿನ ಮೆಂತ್ಯಸೊಪ್ಪನ್ನು ಸಲಾಡ್ ರೂಪದಲ್ಲಿ ಹಸಿಯಾಗಿಯೇ (ಈರುಳ್ಳಿ-ಟೊಮೇಟೊ ಬಿಲ್ಲೆಗಳೊಂದಿಗೆ) ಸೇವಿಸಿ. ಅಡುಗೆಗೆ ಮೆಂತ್ಯಸೊಪ್ಪನ್ನು ಬಳಸುವಾಗ, ಧಾರಾಳವಾಗಿ ಜೊತೆಗೆ ಕರಿಬೇವನ್ನೂ ಸೇರಿಸಿಕೊಳ್ಳಿ. ಈ ಮಿಕ್ಸ್ ಕೂದಲಿನ ಬೆಳವಣಿಗೆಗೆ ಪೂರಕ.

7. ಹೂಕೋಸು ನಿಜಕ್ಕೂ ಇನ್ನರ್ ಬಾಡಿ ಕ್ಲೀನರ್ ಆಗಿದೆ. ಇದನ್ನು ಲಘುವಾಗಿ ಫ್ರೈ ಮಾಡಿ ಬೇಯಿಸಬೇಕೇ ಹೊರತು ಬೇರೆ ತರಕಾರಿಗಳಂತೆ ತುಂಬಾ ಬೇಯಿಸಬಾರದು. (ಇದನ್ನು ಬೇಯಿಸದೆ ಹಾಗೇಯೆ ಹಸಿಯಾಗಿ ಸೇವಿಸಬಹುದು. ಇದರಲ್ಲಿನ ಟಾಕ್ಸಿನ್ ಅಂಶಗಳು ಹಾನಿ ಮಾಡುವ ಸಂಭವವಿದೆ. ಹೀಗೆ ಅರೆ ಬೇಯಿಸುವಿಕೆಯೇ ಉತ್ತಮ ಉಪಾಯ) ನಿಮ್ಮ ಸ್ಕಿನ್ ಬಹಳ ಡ್ರೈ ಎನಿಸಿದರೆ, ಅರೆ ಬೆಂದ ಹೂಕೋಸನ್ನು ಮಿಕ್ಸಿಯಲ್ಲಿ ಜೂಸ್ ಮಾಡಿ ಸೇವಿಸಿದರೆ ಹೆಚ್ಚಿನ ಲಾಭವಿದೆ.

8. ತುಳಸಿ ಎಲೆಗಳನ್ನು ಪೇಸ್ಟ್ ಮಾಡಿ ತಣ್ಣೀರು, ಎಳನೀರು, ನೀರು ಮಜ್ಜಿಗೆ, ಬಾರ್ಲಿ ಬೇಯಿಸಿ ಬಸಿದ ನೀರು ಇತ್ಯಾದಿಗಳೊಂದಿಗೆ ಬೆರೆಸಿ ಕುಡಿದಾಗ ರಕ್ತದ ಕೊರತೆಯ ಸಮಸ್ಯೆ (ಅನೀಮಿಕ್) ತಾನಾಗಿ ದೂರಾಗುತ್ತದೆ. ಎಳೆನೀರಿನಿಂದ ಆಗಾಗ ಮುಖ ತೊಳೆಯುವುದೂ ಒಳ್ಳೆಯದು.

10. ತಾಟಿನಿಂಗು ಕೂಡ ಬೇಸಿಗೆಗೆ ಬಲು ಹಿತಕಾರಿ. ಇದನ್ನು ಆದಷ್ಟು ಹೆಚ್ಚಾಗಿ ಸೇವಿಸಿ, ಜೊತೆಗೆ ಪೇಸ್ಟ್ ಮಾಡಿ ಮುಖಕ್ಕೆ ಪ್ಯಾಕ್ ಮಾಡಿಕೊಳ್ಳುವುದರಿಂದ, ಚರ್ಮಕ್ಕೆ ಹೆಚ್ಚಿನ ಕಾಂತಿ, ಹೊಳಪು ಮೂಡುತ್ತದೆ.

11. ವಿಟಮಿನ್ ’ಈ’ ಆಂಟಿ ಏಜಿಂಗ್ ವಿಟಮಿನ್ ಆಗಿದೆ. ತ್ವಚೆಯನ್ನು ಸುಕ್ಕುಗಳಿಂದ ರಕ್ಷಿಸಲು ನಮ್ಮ ಆಹಾರದಲ್ಲಿ ಇದನ್ನು ಅಗತ್ಯವಾಗಿ ಬೆರೆಸಿಕೊಳ್ಳಬೇಕು. ಸೊಪ್ಪು – ಹಸಿ ತರಕಾರಿ, ಸೋಯಾಬೀನ್ಸ್, ನಟ್ಸ್ ಇತ್ಯಾದಿಗಳು ವಿಟಮಿನ್ ’ಈ’ ತುಂಬಿರುವ ಆಕರಗಳಾಗಿವೆ.

12. ವಿಟಮಿನ್ ’ಬಿ-2’ನ ಕೊರತೆಯಾದಾಗ ತುಟಿಗಳು ಒಡೆಯತೊಡಗುತ್ತವೆ. ಮಾಂಸ, ಮೀನು, ಮೊಟ್ಟೆ, ಹಾಲು ಇತ್ಯಾದಿಗಳ ಸೇವನೆಯಿಂದ ವಿಟಮಿನ್ ’ಬಿ-2’ನ ಕೊರತೆ ನಿವಾರಣೆಯಾಗುತ್ತದೆ.

13. ವಿಟಮಿನ್ ’ಬಿ’ ಕಾಂಪ್ಲೆಕ್ಸ್‌ನ ಕೊರತೆಯಿಂದ ಉಗುರು ಸೀಳುವಿಕೆ, ತ್ವಚೆ ಕೆಟ್ಟದಾಗಿ ಕಂಡುಬರುವುದು ಇತ್ಯಾದಿ ಸಮಸ್ಯೆ ಕಾಡಬಹುದು. ಜಿಲೆಟಿನ್ ಬಳಸುವುದರಿಂದ ಅದನ್ನು ನಿವಾರಿಸಬಹುದು. ನಮ್ಮ ಆಹಾರದಲ್ಲಿ ಬೇಳೆ, ಮೊಳಕೆ ಕಟ್ಟಿದ ಕಾಳು, ಹಸಿ ತರಕಾರಿ ಇತ್ಯಾದಿಗಳನ್ನು ಬಳಸುವುದರಿಂದ ಈ ಸಮಸ್ಯೆ ನೀಗುತ್ತದೆ.

14. ನುಗ್ಗೆಸೊಪ್ಪಿನ ಸೂಪ್, ನುಗ್ಗೆಸೊಪ್ಪಿನ ಪಲ್ಯ ತಯಾರಿಸಿ ಸೇವಿಸುವುದರಿಂದ ಚರ್ಮದ ಕಾಂತಿ ವರ್ಧಿಸುತ್ತದೆ. ನುಗ್ಗೆಕಾಯಿಯ ಸೇವನೆ ಸಂತಾನ ಪ್ರಾಪ್ತಿಗೆ ಸಹಕಾರಿ.

15. ಲೆಸಿಥಿನ್ ಎಂಬ ಪೋಷಕಾಂಶ ದೈನಂದಿನ ಆರೋಗ್ಯಕ್ಕೆ ಅತ್ಯಗತ್ಯ ಚರ್ಮವನ್ನು ಹೆಚ್ಚು ಕೋಮಲವಾಗಿರಿಸಲು ಇದು ಪೂರಕ. ಮೊಟ್ಟೆ ಪ್ರಾಣಿಗಳ ಯಕೃತ್ತು , ಸೋಯಾಬೀನ್ಸ್, ಹಣ್ಣುಗಳ ರಸ, ಈರುಳ್ಳಿ – ಬೆಳ್ಳುಳ್ಳಿ ಹಸಿ ಚಟ್ನಿ (ಸಲಾಡ್), ಆಪಲ್ ಜ್ಯೂಸಗಳಲ್ಲಿ ಲೆಸಿಥಿನ್ ದಂಡಿಯಾಗಿದೆ, ಚರ್ಮದ ಸೊಗಸು ಹೆಚ್ಚಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top