fbpx
Health

ಸುಂದರ ಆರೋಗ್ಯಕರ ಕಣ್ಣುಗಳಿಗೆ ಸೇವಿಸಬೇಕಾದ ಆಹಾರ

 

ನಮಗೆ ಅತ್ಯಂತ ಹತ್ತಿರದವರನ್ನು ಕಣ್ಣುಗಳಿಗೆ ಹೋಲಿಸಿ ಅವರು ನಮಗೆಷ್ಟು ಅಮೂಲ್ಯ ಎಂದು ಬಣ್ಣಿಸುವುದು ಸಾಮಾನ್ಯ. ಏಕೆಂದರೆ ನಮ್ಮ ಶರೀರದಲ್ಲಿ ಅತಿ ಸೂಕ್ಷ್ಮವಾದ ಮತ್ತು ಅಮೂಲ್ಯವಾದ ಅಂಗಗಳೆಂದರೆ ಕಣ್ಣುಗಳು. ದೇಹದ ಯಾವುದೇ ಭಾಗಕ್ಕೆ ಪೆಟ್ಟಾದರೂ ಸಹಿಸುವ ನಾವು ಕಣ್ಣುಗಳಿಗೆ ಯಾವುದೇ ತೊಂದರೆ ಸಹಿಸುವುದಿಲ್ಲ. ಹಾಗಾಗಿ ಈ ಅಂಗಗಳನ್ನು ಅತ್ಯಂತ ಜಾಗರುಕವಾಗಿ ಕಾಪಾಡಿಕೊಳ್ಳಬೇಕು

ನಾವು ಆರೋಗ್ಯಕರ ಕಣ್ಣುಗಳನ್ನು ಕಾಪಾಡಿಕೊಳ್ಳಬೇಕಾದರೆ ನಾವು ಒಂದೆರಡು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ದಿಸೆಯಲ್ಲಿ ನಾವು ಮೊದಲು ನಮ್ಮ ಕಣ್ಣುಗಳು ಅಗತ್ಯವಾಗಿ ಆರೋಗ್ಯಕರ ಸ್ಥಿತಿಯಲ್ಲಿ ಇರಬೇಕೆಂದರೆ ನಮ್ಮ ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳನ್ನು ಸೇವಿಸಿದರೆ ಮಾತ್ರ ಸಾಧ್ಯ.

1)ಮೀನುಗಳು ನಿಮ್ಮ ಆಹಾರದಲ್ಲಿ ಒಮೆಗಾ -3 ಕೊಬ್ಬಿನ ಆಮ್ಲಗಳ ತುಂಬಿಕೊಂಡಿರುವ ಮೀನನ್ನು ಸೇರಿಸಿ. ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಮೀನನ್ನು ಸೇವಿಸಿ. ಇದು ಒಣ-ಕಣ್ಣಿನ ಸಿಂಡ್ರೋಮ್ ತಪ್ಪಿಸಲು ಉತ್ತಮ ಮಾರ್ಗವಾಗಿದೆ.

%e0%b2%ae%e0%b3%80%e0%b2%a8%e0%b3%81%e0%b2%97%e0%b2%b3%e0%b3%81

2)ನೀರು ನೀರು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ. ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ಡಿಹೈಡ್ರೇಶನ್ ನಿಂದ ದೃಷ್ಟಿಯು ಸುಧಾರಿಸುತ್ತದೆ.

water

3) ಮೊಟ್ಟೆ ಸೇವಿಸಿ ಮೊಟ್ಟೆಗಳು ನಿಮ್ಮ ಸರಿಯಾದ ದೃಷ್ಟಿಗೆ ಮತ್ತು ಕುರುಡು ಮಾಡಬಲ್ಲ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಲ್ಯೂಟೀನ್ ಮತ್ತು ಝಿಯಾಕ್ಸಾಂತಿನ್ ನಿಮ್ಮ ದೇಹಕ್ಕೆ ಉತ್ತಮ ಅಂಶಗಳನ್ನು ಒದಗಿಸುತ್ತದೆ.

egg

4) ಪಾಲಾಕ್ ತಿನ್ನಿ ಕುದಿಸಿ ಇದು ಅಥವಾ ಸ್ವಲ್ಪವೇ ಎಣ್ಣೆ ಹಾಕಿ ಬೇಗನೆ ಹುರಿದ ಪಾಲಾಕನ್ನು ನಿಮ್ಮ ಆಹಾರಕ್ಕೆ ಸೇರಿಸಿ ತಿನ್ನಿ. ಪಾಲಕ ಕಣ್ಣಿನ ಮತ್ತು ತೆಳುವಾದ ದೃಷ್ಟಿತ್ವ ಹಾಗೂ ಇನ್ನಿತರ ಅನೇಕ ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡಬಹುದು. ಇದು ಲ್ಯೂಟೀನ್ ಮತ್ತು ವಿವಿಧ ಇತರ ಪೋಷಕಾಂಶಗಳಿಂದ ತುಂಬಿದೆ.

Fresh spinach iin a wooden bowl on a cutting board

5) ಕಣ್ಣಿಗೆ ಸಂಬಂಧಿಸಿದ ಆಹಾರ ಸೇವಿಸಿ ಕ್ಯಾರೆಟ್, ಏಪ್ರಿಕಾಟ್ ಮತ್ತು ಬೆರಿಹಣ್ಣುಗಳು ಇಂತಹ ಕಣ್ಣಿನ ಆರೋಗ್ಯ ಹೆಚ್ಚಿಸುವ ಆಹಾರಗಳು ನಿಮ್ಮ ಕಣ್ಣುಗಳಿಗೆ ಪುಷ್ಟಿ ನೀಡುತ್ತವೆ. ಈ ಎಲ್ಲಾ ಆಹಾರಗಳಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ ಮತ್ತು ಇದು ನಿಮ್ಮ ಕಣ್ಣುಗಳು ಒಳ್ಳೆಯದು. ಹೀಗೆ ಉತ್ತಮ ಕಣ್ಣಿನ ಆರೋಗ್ಯಕ್ಕಾಗಿ ಉತ್ತಮ ರೀತಿಯಲ್ಲಿ ಕಣ್ಣಿನ ಆರೈಕೆಯನ್ನು ಮಾಡುವುದೂ ಬಹಳ ಅಗತ್ಯ.

carrot

6) ಕ್ಯಾರೆಟ್, ಹಸಿರು ತರಕಾರಿ, ಮೊಳಕೆಯೊಡೆದ ಧಾನ್ಯಗಳನ್ನು ಹೆಚ್ಚು ಸೇವಿಸಿ.

green-vegetables

7)ಸೌತೆಕಾಯಿ ಸೇವನೆಯಿಂದ ಕಣ್ಣಿಗೆ ತಂಪನ್ನುಂಟುಮಾಡುತ್ತದೆ.

cucumber

8) ಬೀಟ್‌ರೂಟ್ ಇದು ಮತ್ತೋಂದು ವಿಟಮಿನ್ ಎ ಸಮೃದ್ಧವಾಗಿ ಇರುವ ಬೇರಿನ ಜಾತಿಯ ಆಹಾರ. ನಿಮ್ಮ ಕಣ್ಣುಗಳು ಉತ್ಸಾಹಭರಿತ ಮತ್ತು ಸಂತೋಷದಿಂದ ಕೂಡಿರಬೇಕಾದಲ್ಲಿ ಈ ಬೀಟ್‌ರೂಟ್ ತರಕಾರಿಯನ್ನು ಸಾಕಷ್ಟು ಸೇವಿಸಬೇಕು.

beetroots

9) ಬಾದಾಮಿ ಇದು ಕಣ್ಣುಗಳಿಗೆ ಉತ್ತಮ ಆಹಾರ. ವಿಟಮಿನ್ ಇ ಮತ್ತು ಏಕಾಪರ್ಯಾಪ್ತ ಕೊಬ್ಬಿನಾಮ್ಲಗಳ (Monounsaturated fatty acids) ಬಾದಾಮಿಯಲ್ಲಿ ಸಮೃದ್ಧವಾಗಿದ್ದು ಕಣ್ಣುಗಳನ್ನು ಯುವ ವಯಸ್ಸಿನ ಹಾಗೂ ಆರೋಗ್ಯಕರ ಸ್ಥಿತಿಯಲ್ಲಿಟ್ಟುಕೊಂಡಿರಲು ಸಹಾಯವಾಗುತ್ತದೆ. ನೀವೇನೂ ಅತಿ ಹೆಚ್ಚು ಬಾದಾಮಿಯನ್ನು ಸೇವಿಸಬೇಕಾಗಿಲ್ಲ. ದಿನಕ್ಕೆ 8 ರಿಂದ 10 ಬಾದಾಮಿಯನ್ನು ತೆಗೆದುಕೊಂಡರೆ ನಿಮ್ಮ ಅಗತ್ಯ ಪೂರೈಸುತ್ತದೆ.

almonds-badam

10) ಬ್ರೊಕೋಲಿ ದಟ್ಟ ಹಸಿರುಬಣ್ಣದ ಬ್ರೊಕೋಲಿಯಲ್ಲಿ ವಿಟಮಿನ್ ಸಿ, ಲ್ಯೂಟೈನ್ ಮತ್ತು ಜಿಯಾಕ್ಸಂತಿನ್‌ಗಳು ಸಮೃದ್ಧಿಯಾಗಿವೆ. ಹೀಗಿದ್ದಾಗ ಇದನ್ನು ಬಿಟ್ಟು ಕಣ್ಣುಗಳಿಗೆ ಬೇರೆ ಯಾವ ಉತ್ತಮ ಆಹಾರವನ್ನು ಹುಡುಕಬೇಕು? ಒಂದು ಮರದ ರೂಪದಲ್ಲಿರುವ ತರಕಾರಿಯು ಕಣ್ಣುಗಳಿಗೆ ಉತ್ತಮ ಆರೋಗ್ಯವನ್ನು ಕೊಡುತ್ತದೆಯಾದರೂ ಅದು ತಾಜಾ ತರಕಾರಿಯಾಗಿರಬೇಕು ಎನ್ನುವುದನ್ನು ಗಮನಿಸಿ. ಅದರ ಬಣ್ಣ ಎಷ್ಟು ಗಾಢವಾದಷ್ಟೂ ಅಷ್ಟು ಉತ್ತಮ.

broccoli

11) ಪ್ರೋಟೀನ್‌ಯುಕ್ತ ಆಹಾರ ಸಮುದ್ರಾಹಾರಗಳಲ್ಲಿ ಸಾಲ್ಮನ್ ಮತ್ತು ಸಾರ್ಡೀನ್‌ಗಳು ಪ್ರೋಟೀನ್ ಮತ್ತು ಒಮೇಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲಗಳು. ಅವುಗಳಲ್ಲಿ ಉತ್ತಮ ಕಣ್ಣಿಗೆ ಅವಶ್ಯಕವಾದ ಮತ್ತೊಂದು ಖನಿಜಾಂಶವಿರುವ ಸತು (Zinc) ಸಮೃದ್ಧವಾಗಿ ಇರುತ್ತದೆ. ಹೀಗಾಗಿ ಈ ಸಮುದ್ರದ ಜೀವಿಗಳು ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳ ಗುಂಪಿಗೆ ಸೇರುತ್ತವೆ.

omega-3-foods

12) ಸಿಟ್ರಸ್ ಜಾತಿಯ ಹಣ್ಣುಗಳು ವಿಟಮಿನ್ ಸಿ ಎಂದು ಹೇಳಿದರೆ ಅದು ಸಿಟ್ರಸ್ ಹಣ್ಣುಗಳಲ್ಲಿವೆ ಎಂದು ಗೊತ್ತಿದೆ. ಕಿತ್ತಲೆ ಮತ್ತು ದ್ರಾಕ್ಷಿಹಣ್ಣುಗಳು ತಿನ್ನಲು ರುಚಿಯಾಗಿರುತ್ತದಲ್ಲದೆ ಶೀತ ಮತ್ತು ಕೆಮ್ಮನ್ನು ವಾಸಿಮಾಡುವುದು ಮತ್ತು ಕಣ್ಣುಗಳಿಗೂ ಸಹ ಉತ್ತಮ ಆಹಾರ. ನಾವು ಆಹಾರಗಳ ಜೊತೆ ಸಿಟ್ರಸ್ ಹಣ್ಣುಗಳನ್ನು ಸೇವಿಸಿ ಅಕ್ಷಿಪಟಲದ ಅವನತಿ ಮತ್ತು ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಇವುಗಳಿಂದ ದೂರವಿರಬಹುದು.

drink-fresh-fruit-juices

13) ಹುರುಳಿ, ಅವರೆ, ಇತ್ಯಾದಿ ಕಾಳುಗಳು ಎಲ್ಲ ರೀತಿಯ ಕಾಳುಗಳಲ್ಲಿ ಕಣ್ಣುಗಳಿಗೆ ಅಗತ್ಯವಾದ ಸತು ಇರುತ್ತದೆ. ಈ ಖನಿಜ ಸೇವನೆಯಿಂದ ಬೆಳಕಿನ ಹಾನಿಕಾರಕ ಪರಿಣಾಮಗಳಿಂದ ಕಣ್ಣುಗಳನ್ನು ರಕ್ಷಿಸಬಹುದು.

soaking-and-sprouting-101-megan

14) ಟೋಫು ಸೋಯಾ ಹಾಲಿನಿಂದ ಟೋಫು‌ವನ್ನು ತಯಾರಿಸುತ್ತಾರೆ. ಸೋಯಾ ಕೂಡ ಒಂದು ದ್ವಿದಳ ಧಾನ್ಯ. ಎಲ್ಲಾ ಕಾಳುಗಳಂತೆಯೆ ಟೋಫು‌ವಿನಲ್ಲಿ ಸತುವಿನ ಅಂಶವು ಉತ್ತಮವಾಗಿದ್ದು ಅದರ ಸೇವನೆಯಿಂದ ಕಣ್ಣುಗಳಿಗೆ ಲಾಭದಾಯಕವಾಗಿರುತ್ತದೆ.

soy-foods

15)ಕರಿಬೇವು. ಕೊತ್ತಂಬರಿ ತಿನ್ನುವುದರಿಂದ ಕಣ್ಣಿಗೆ ಸಾಕಷ್ಟು ಖನಿಜಾಂಶವಿರುವ ಸತು (Zinc) ಸಮೃದ್ಧವಾಗಿ ಇರುತ್ತದೆ ಮತ್ತು  ರಕ್ಷಣೆಕೂಡ ದೊರೆಯುತ್ತದೆ.

%e0%b2%95%e0%b2%b0%e0%b3%80%e0%b2%ac%e0%b3%86%e0%b2%b5%e0%b3%81

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top