fbpx
Food

ನಲ್ಲಿಕಾಯಿಯ ಈ ಹತ್ತು ಗುಣಗಳು ಆರೋಗ್ಯಕ್ಕೆ ಅತ್ಯುತ್ತಮ!!!

ಕಾರ್ತಿಕ ಮಾಸ ಬಂದೊಡನೆ ಎಲ್ಲೆಲ್ಲಿಯೂ ನೆಲ್ಲಿಕಾಯಿಗಳದ್ದೇ ಸುಗ್ಗಿ.. ಪೂಜಾ ಕಾರ್ಯಗಳಷ್ಠೆಯೇ ಅರೋಗ್ಯ ನಿರ್ವಹಣೆಗಳಲ್ಲಿಯೂ ನೆಲ್ಲಿಕಾಯಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ವಿಟಮಿನ್ ಸಿ, ಫೈಬರ್ (ನಾರು), ಪೆಕ್ಟಿನ್ ಹಾಗು ನಿಕೊಟಿನಿಕ್ ಆಮ್ಲಗಳು ಹೇರಳವಾಗಿದ್ದು ಸ್ವಲ್ಪ ಪ್ರಮಾಣದ ಗ್ಯಾಲಿಕ್ ಆಮ್ಲ , ಎಲಾಜಿಕ್ ಆಮ್ಲ ಹಾಗು ಗ್ಲುಕೋಸ್ ಅನ್ನು ಹೊಂದಿರುತ್ತದೆ.

೨ಸ್ಪೂನ್ ನೆಲ್ಲಿಕಾಯಿ ರಸಕ್ಕೆ ೨೫ ಗ್ರಾಂ ಅಮೃತಬಳ್ಳಿ/ ಅಗ್ನಿಬಳ್ಳಿ ಪುಡಿ ಬೆರೆಸಿ ಸೇವಿಸಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ.

೧ ಚಮಚ ನೆಲ್ಲಿಕಾಯಿ ಪುಡಿಯನ್ನು ೧ ಸ್ಪೂನ್  ಸಕ್ಕರೆಯೊಡನೆ ೧ ಗ್ಲಾಸ್ ಹಾಲು ಅಥವಾ ನೀರಿನೊಂದಿಗೆ ದಿನಕ್ಕೆರಡು ಬಾರಿ ಸೇವಿಸಿದರೆ ಅಸಿಡಿಟಿ ಹಾಗು ಅಜೀರ್ಣದಿಂದ ಮುಕ್ತಿ ಪಡಿಯಬಹುದು.

Image result for indian gooseberry

 

ನೆಲ್ಲಿಕಾಯಿ ಶರಬತ್ತು ಹಾಗು ನಿಂಬೆ ರಸ ಮಿಶ್ರಣ ಮಾಡಿ ಕುಡಿಯುತ್ತಿದ್ದಲ್ಲಿ ರಕ್ತ ಭೇದಿಯನ್ನು ತಡೆಗಟ್ಟಬಹುದು.

Image result for indian gooseberry juice

 

ಕಾಯಿ ನೆನಸಿಟ್ಟ ನೀರಿಗೆ ಚಿಟಿಕೆ ಅಡಿಗೆ ಉಪ್ಪು ಬೆರೆಸಿ ಕುಡಿಯುತ್ತಿದ್ದಲ್ಲಿ ತಲೆಸುತ್ತು, ದಣಿವು ದೂರಗೊಳ್ಳುತ್ತದೆ.

 

ನೆಲ್ಲಿಕಾಯಿ ಎಲೆಯನ್ನು ಕುಡಿಸಿ ತಯಾರಿಸಿದ ನೀರಲ್ಲಿ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ಗಂಧವನ್ನು ಹೋಗಲಾಡಿಸಬಹುದು.

Image result for indian gooseberry salt

 

ನೆಲ್ಲಿ, ನೇರಳೆ ಹಾಗು ಹಾಗಾಲಕ್ಕಾಯಿ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸುತ್ತಾ ಬಂದಲ್ಲಿ ಮಧುಮೇಹವನ್ನು ನಿಯಂತ್ರಿಸಬಹುದು.

Image result for indian gooseberry health

 

೧ ಚಮಚ ನೆಲ್ಲಿ ಎಲೆಯ ಪೇಸ್ಟ್ ಅನ್ನು ೧ ಚಮಚ ಜೇನುತುಪ್ಪದೊಂದಿಗೆ ಸೇವಿಸಿದ್ದಲ್ಲಿ ಭೇದಿ ಹತೋಟಿಯಲ್ಲಿರುತ್ತದೆ.

Image result for indian gooseberry honey

 

ಬಲಿತಕಾಯಿಯನ್ನು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ತಯಾರಿಸಿದ ತೈಲವನ್ನು ಪ್ರತಿದಿನ ತಲೆಗೆ ಹಚ್ಚುತ್ತಿದ್ದರೆ ಕೂದಲು ಕಪ್ಪಾಗಿ ಹಾಗು ದಟ್ಟವಾಗಿ ಬೆಳೆಯುತ್ತದೆ. ಇದರಿಂದ ದೃಷ್ಟಿ ದೋಷಗಳು ದೂರಗೊಳ್ಳುತ್ತವೆ.

Image result for indian gooseberry hair

 

ಅಳಲೆಕಾಯಿ, ತಾರೆಕಾಯಿ ಹಾಗು ಬೆಟ್ಟದ ನೆಲ್ಲಿಕಾಯಿ ಮಿಶ್ರಣವನ್ನು( ತ್ರಿಫಲಾ) ದಿನಾ ಬೆಳಿಗ್ಗೆ  ೧ ಚಮಚ ಜೇನುತುಪ್ಪದೊಂದಿಗೆ ಸೇವಿಸುತ್ತಾ ಬಂದಲ್ಲಿ ಉತ್ತಮ ಅರೋಗ್ಯ ನಿಮ್ಮದಾಗುತ್ತದೆ.

Image result for indian gooseberry hair

 

ಹೆಂಗಸರು ನಿಯಮಿತವಾಗಿ ನೆಲ್ಲಿಕಾಯಿಯನ್ನು ಸೇವಿಸುತ್ತಾ ಬಂದಲ್ಲಿ ಮುಟ್ಟಿನ ಸಮಸ್ಯೆ, ಬಿಳಿ ಸೆರಗು, ಸುಸ್ತು ಹಾಗು ನಿಶ್ಶಕ್ತಿಗಳಿಂದ ಮುಕ್ತಿ ಹೊಂದಬಹುದು.

Image result for indian gooseberry women

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top