fbpx
Health

ಸಣ್ಣಗಾಗಲು ಮತ್ತು ದೇಹದ ಫಿಟ್ನೆಸ್ ಕಾಪಾಡಿಕೊಳ್ಳಲು ಉಪ್ಪು ನೀರನ್ನು ಸೇವಿಸಿ!!

ಸಣ್ಣಗಾಗಲು ಮತ್ತು ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳಲು ಪ್ರಯತ್ನಿಸುವವರಿಗೆ ಉಪ್ಪು ನೀರು ಅತ್ಯುತ್ತಮವಾಗಿ ಪರಿಣಮಿಸಿದೆ. ನಿತ್ಯದ ಆಹಾರಗಳಲ್ಲಿ ಅಗತ್ಯವಿರುವ ಉಪ್ಪಿನಂಶ ಇರದಿದ್ದರೆ ನಾವೆಲ್ಲಾ ಅನಾರೋಗ್ಯಕಾರಿ ಆಹಾರಗಳ ಮೇಲೆ ಅವಲಂಬಿತರಾಗುತ್ತೇವೆ. ಈ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಕುರುಕುಲು ತಿಂಡಿಗಳನ್ನು ತಿನ್ನಲು ಆರಂಭಿಸುತ್ತೇವೆ. ಇದರಿಂದ ಸಹಜವಾಗಿಯೇ ದೇಹದ ತೂಕ ಹೆಚ್ಚುತ್ತದೆ. ಉಪ್ಪು ನೀರು ಕುಡಿದರೆ ದೇಹದಲ್ಲಿರುವ ಉಪ್ಪಿನ ಮಟ್ಟ ಸ್ಥಿರವಾಗಿರುತ್ತದೆ ಮತ್ತು ಹೆಚ್ಚು ಹಸಿವೆಯೂ ಆಗುವುದಿಲ್ಲ.

1)ಉಪ್ಪು ನೀರು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ ಮತ್ತು ರಕ್ತದೊತ್ತಡವನ್ನು ಸಮ ಸ್ಥಿತಿಯಲ್ಲಿಡುತ್ತದೆ. ಹಾಗಾದರೆ ಉತ್ತಮ ಆರೋಗ್ಯ ಫಲಿತಾಂಶಗಳನ್ನು ಪಡೆಯಲು ಇವತ್ತಿನಿಂದಲೇ ಉಪ್ಪು ನೀರು ಕುಡಿಯಲು ಆರಂಭಿಸಿ.

2)ದೇಸದಲ್ಲಿರುವ ಬೇಡವಾದ ಕಲ್ಮಶಗಳನ್ನು ಹೊರಹಾಕಲು ಇದು ಸಹಕಾರಿಯಾಗಿದೆ.

3)ಉಪ್ಪು ದೇಹದ ಬೆಳವಣಿಗೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

4)ಸಾಮಾನ್ಯ ಉಪ್ಪು ದೇಹದಲ್ಲಿರುವ ನೀರಿನ ಮಟ್ಟವನ್ನು ಸ್ಥಿರವಾಗಿರಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

5)ಇದು ಸೋಂಕು ರೋಗಗಳ ವಿರುದ್ಧವೂ ಹೋರಾಡುತ್ತದೆ ಮತ್ತು ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸುತ್ತದೆ.

6)ಉಪ್ಪು ನೀರು ರಕ್ತವನ್ನು ಶುದ್ಧಗೊಳಿಸುತ್ತದೆ,

7)ಇದು ಉತ್ತಮ ವಿಷ ನಿವಾರಣೆ ವಾಹಕವಾಗಿ ಕೆಲಸ ಮಾಡುತ್ತದೆ.

8)ಜೀರ್ಣಾಂಗ ವ್ಯೂಹವನ್ನು ಸ್ವಚ್ಛಗೊಳಿಸುತ್ತದೆ ಮತ್ತು ದೇಹದ ನೋವುಗಳನ್ನು ನಿವಾರಣೆ ಮಾಡುತ್ತದೆ.

9)ದೇಹದಲ್ಲಿ ಮೂತ್ರಜನಕಾಂಗ ಮುಂತಾದ ಕೆಲವು ಮುಖ್ಯ ಅಂಗಗಳನ್ನು ನಿರ್ವಿಷಗೊಳಿಸಲು ಉಪ್ಪು ನೀರು ಸಹಕರಿಸುತ್ತದೆ.

10)ನೀರಿಗೆ ಒಂದು ಚಮಚ ಉಪ್ಪು ಬೆರೆಸಿ ದಿನಾ ಕುಡಿಯಿರಿ. ನೀರಿನಲ್ಲಿ ಉಪ್ಪು ಸರಿಯಾಗಿ ಕರಗುವಂತೆ ನೋಡಿಕೊಳ್ಳಿ. ಉಪ್ಪು ಕರಗದೆ ಹಾಗೇ ಉಳಿದರೆ ಅದು ನಿರ್ಜಲೀಕರಣ ಮತ್ತು ಮೂತ್ರಜನಕಾಂಗದ ಕಾರ್ಯಗಳಿಗೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇರುತ್ತದೆ.

11)ಪ್ರತಿದಿನ ಉಪ್ಪು ನೀರು ಕುಡಿದರೆ ಯಾವುದೇ ರೀತಿಯ ನಿಶ್ಶಕ್ತಿಯೂ ಇನ್ನಿಲ್ಲವಾಗುತ್ತದೆ.

12)ಮೂತ್ರ ವಿಸರ್ಜನೆಯ ವೇಳೆ ದೇಹದಲ್ಲಿರುವ ಉಪ್ಪು ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗುತ್ತದೆ. ಉಪ್ಪು ನೀರು ಕುಡಿದರೆ ದೇಹದಲ್ಲಿರುವ ಉಪ್ಪಿನ ಮಟ್ಟ ಸಮತೋಲನದಲ್ಲಿರುತ್ತದೆ. ಹಾಗಾದರೆ ಉತ್ತಮ ಆರೋಗ್ಯ ಫಲಿತಾಂಶಗಳನ್ನು ಪಡೆಯಲು ಇವತ್ತಿನಿಂದಲೇ ಉಪ್ಪು ನೀರು ಕುಡಿಯಲು ಆರಂಭಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top