fbpx
Business

ಮೋದಿ ಸರ್ಕಾರದ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಯ್ತ!!

ಕೇಂದ್ರ ಸರ್ಕಾರದ ನೋಟು ಬದಲಾವಣೆ ನಿರ್ಧಾರ ತಪ್ಪು ಎನ್ನಿಸುವುದಕ್ಕೆ ಶುರುವಾಗಿದೆ, ಹೌದು, ಹಲವಾರು ವರದಿಗಳ ಪ್ರಕಾರ 3 ಲಕ್ಷ ಕೋಟಿ ರೂ ಇಂದ 5 ಲಕ್ಷ ಕೋಟಿ ರೂವರೆಗೆ ಕಪ್ಪು ಹಣ ಖಾತೆಗಳಿಗೆ ಜಮವಾಗದೆ ಉಳಿಯುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಆದರೆ ಇಂದಿನವರೆಗೆ ಬ್ಯಾಂಕ್ ಖಾತೆಗಳಲ್ಲಿ ಜಮಾ ಆಗಿರುವ ಮೊತ್ತವನ್ನು ಗಮನಿಸಿದರೆ ಇದು ಬೇರೆಯೇ ಕಥೆ ಹೇಳುತ್ತದೆ. ಇದು ನರೇಂದ್ರ ಮೋದಿ ಸರ್ಕಾರಕ್ಕೆ ಆಘಾತವನ್ನುಂಟು ಮಾಡಲಿದೆ ಎನ್ನಲಾಗುತ್ತಿದೆ.

ಅಂಕಿ ಅಂಶ ಏನು ಹೇಳುತ್ತೆ…?

ಚಾಲ್ತಿಯಲ್ಲಿರುವ ಹಣ :

ಚಾಲ್ತಿಯಲ್ಲಿದ್ದ 5೦೦ ಮತ್ತು 1೦೦೦ ರೂ ಮೌಲ್ಯದ ಒಟ್ಟು ಹಣ 15.44 ಲಕ್ಷ ಕೋಟಿ ರು. ( ಅದರಲ್ಲಿ 500 = 8.58 ಲಕ್ಷ ರೂ ಕೋಟಿ ಮತ್ತು 1೦೦೦ ರೂ ನೋಟುಗಳಲ್ಲಿ 6.86 ಲಕ್ಷ ರೂ ಕೋಟಿ ).

ಇಲ್ಲಿಯವರೆಗೂ ಜಮೆಯಾದ ಹಣ :

ನವೆಂಬರ್ 10 ಮತ್ತು ನವೆಂಬರ್ 27 ರ ನಡುವೆ ಬ್ಯಾಂಕ್ ಗಳಲ್ಲಿ ನಿಷೇಧಿತ ನೋಟುಗಳು ಜಮಾ ಆಗಿರುವ ಹಣದ ಒಟ್ಟು ಮೊತ್ತ 8.45 ಲಕ್ಷ ಕೋಟಿ ರು. ಅಂದ್ರೆ, ಕೇವಲ 15 ದಿನಗಳಲ್ಲಿ 8.45 ಲಕ್ಷ ಕೋಟಿ ಜಮೆಯಾಗಿದೆ.

ಗಮನಿಸಬೇಕಾದ ಅಂಶಗಳು :

ಜಮೆ ಮಾಡಲು ಇನ್ನೂ 30 ದಿನಗಳು ಬಾಕಿ ಉಳಿದಿವೆ. ಇನ್ನು ಎಷ್ಟೋ ಜನ ಬ್ಯಾಂಕ್ ಮುಂದೆ ದೊಡ್ಡ ಸರತಿ ಸಾಲುಗಳನ್ನು ನೋಡಿ ಆತ್ತ ಸರಿದಿಲ್ಲ. ಇನ್ನು ಹೆಚ್ಚು ಹಣ ಜಮೆಯಾಗುವ ನಿರೀಕ್ಷೆ ಇದೆ. ಬ್ಯಾಂಕ್ ಗಳ ಒಳಹರಿಯುತ್ತಿರುವ ಈ ನೋಟುಗಳ ಪ್ರಮಾಣ ನೋಡಿದರೆ ಇನ್ನುಳಿದ ೨ ಲಕ್ಷ ಕೋಟಿ ರೂ ಹಣ ಡಿಸೆಂಬರ್ ೩೦ ರೊಳಗೆ ಜಮಾ ಆಗುವುದು ಬಹುತೇಕ ಖಚಿತವಾಗಿದೆ.

ಬ್ಯಾಂಕ್ ಗಳು ದಿನನಿತ್ಯದ ವ್ಯವಹಾರ ನಡೆಸಲು ಕೂಡ ಹಣ ಇಟ್ಟುಕೊಂಡಿರುತ್ತವೆ. ಒಂದು ಅಂದಾಜಿನ ಪ್ರಕಾರ ಇದು ಎಲ್ಲ ನೋಟುಗಳನ್ನು ಒಳಗೊಂಡಂತೆ ಸುಮಾರು 7೦,೦೦೦ ಕೋಟಿ ಎನ್ನಲಾಗಿದೆ.

ಭಾರತದ ಎಲ್ಲ ವಾಣಿಜ್ಯ ಬ್ಯಾಂಕ್ ಗಳು ಆರ್ ಬಿ ಐ ನಲ್ಲಿ ತಮ್ಮ ಠೇವಣಿಯ ಒಂದು ಭಾಗವನ್ನು ಇರಿಸಬೇಕಿರುತ್ತದೆ. ಅದನ್ನು cash reserve ratio (CRR) ಎಂದು ಕರೆಯಲಾಗುತ್ತದೆ. ಈ ಮಾಹಿತಿ ಪ್ರಕಾರ ನವೆಂಬರ್ 8 ರಂದು RBIನಲ್ಲಿ ಇದ್ದ ಒಟ್ಟು ನಗದು (CRR) 4.06 ಲಕ್ಷ ಕೋಟಿ ರೂ.

DEPOSITED AMOUNT : 8.45 LAKH CRORE
CRR : 4.06 LAKH CRORE
DAILY BASIS AMOUNT WITH BANKS : 70 THOUSAND CRORE
TOTAL = aprox 13 LAKH CRORE

ಹಾಗಾದ್ರೆ ಕಪ್ಪು ಹಣ ಎಲ್ಲಿ…?

ಸುಮಾರು 12 ಲಕ್ಷ ಕೋಟಿ ಈಗಾಗಲೇ ವ್ಯವಸ್ಥೆಯ ಒಳಕ್ಕೆ ಬಂದಿದೆ. ಹಿಂಪಡೆದ ನೋಟುಗಳನ್ನು ಜಮಾ ಮಾಡಲು ಇನ್ನು ೩೦ ದಿನಗಳು ಬಾಕಿಯಿದ್ದು, ಮತ್ತು
ಈ ಲೆಕ್ಕಾಚಾರ, ಸರ್ಕಾರದ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡುತ್ತಿದ್ದು, ಸರ್ಕಾರವನ್ನು ಮುಜುಗರದ ಪರಿಸ್ಥಿತಿಗೆ ತಳ್ಳಿ ಆಘಾತ ಉಂಟು ಮಾಡಲಿದೆಯೇ? ಇದು ಇನ್ನಷ್ಟು ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ. ಕಪ್ಪು ಹಣ ಉನ್ನತ ಮೌಲ್ಯದ ನೋಟುಗಳಲ್ಲಿ ಶೇಖರವಾಗಿಲ್ಲವೇ? ಅಥವಾ ಅನ್ಯ ಮಾರ್ಗಗಳನ್ನು ಬಳಸಿ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗಿದೆಯೇ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top