fbpx
Uncategorized

“non-veg ಜೋಕ್ಸ್ ಇಷ್ಟ, ಬೇರೆಯರಿಗೆ ಗೊತ್ತಾದ್ರೆ ಕಷ್ಟ…” ಈ 9 ವಿಚಾರಗಳನ್ನು ಓದಿ…

ಬೆಸ್ಟ್ ಜಾಗ ಬಾತ್ ರೂಮ್ :

ಪೋಲಿ ಜೋಕ್ಸ್ ಓದಲು ಎಲ್ಲರ ನೆಚ್ಚಿನ ಜಾಗ ಬಾತ್ ರೂಮ್. ಹೌದು, ಈ ವಿಷಯದಲ್ಲಿ ಬಾತ್ ರೂಮೇ safe ಜಾಗ. ಏನೇ messages ಇದ್ರೂ, ಯಾವ್ ಭಯನೂ ಇಲ್ದೆ, ಆರಾಮಾಗಿ ಓದಬಹುದು.

ಸಿಕ್ಕಿ ಬೀಳೊ ಪರಿಸ್ಥಿತಿ :

ಹೌದು, ಕೆಲವೊಮ್ಮೆ just ಮಿಸ್ ಆಗಿ ನಿಮ್ಮ ಮೊಬೈಲ್ ಬೇರೆಯವರ ಕೈಯಲ್ಲಿ ಹೋದ್ರೆ ಕತೆ ಮುಗಿತು. ಆದ್ರೆ, ಏನೇ ಕಷ್ಟಪಟ್ರು ಒಂದ್ ದಿನ ಸಿಕ್ಕಿ ಬೀಳ್ತಿನಿ , ಅದ್ರಿಂದ ಮುಜುಗರ ಆಗೋದು guarantee , ಅನ್ನೋ ಭಯದಲ್ಲೇ ದಿನ ಶುರು ಆಗುತ್ತೆ.

message tone ಕೇಳುದ್ರೆ ಭಯ ಆಗ್ಬಿಡುತ್ತೆ :

ಇನ್ಮೇಲೆ message tone ಎಚ್ಚರಿಕೆಯ ಗಂಟೆ ಎನ್ನಬಹುದು. ಶಬ್ದ ಕೇಳಿದ ಕೂಡಲೇ ನಿಮ್ಮ ಹೃದಯ ಬಡಿತ, ನಿಮಗೆ ಗೊತ್ತಿರದೇ ಒಂದೇ ಸಮನೆ ಜಾಸ್ತಿ ಆಗುತ್ತೆ. message ನೋಡೋ ತನಕ ನಿಮಗೆ ಏನೋ ಒಂದ್ ರೀತಿ ಭಯ.

ಬೇರೆಯವರಿಗೆ ಈ ಬಗ್ಗೆ ಗೊತ್ತಾದ್ರೆ blackmail ಶುರು :

ನಿಮ್ಮ ಅಕ್ಕನಿಗೋ ಅಣ್ಣನಿಗೋ ಗೊತ್ತಾದ್ರೆ ನಿಮ್ಮನ್ನು ಅರ್ಧ ಜೀವ ಮಾಡಿಬಿಡ್ತಾರೆ. ಅವ್ರು ಸೂತ್ರದಾರಿ, ನೀವು ಪಾತ್ರದಾರಿ. ಈ ವಿಷಯ ನಿಮಗೆ ಕೋಪ ಬರುವ ಹಾಗೆ ಮಾಡುತ್ತೆ. ಆದ್ರೆ ಬೇರೆ ದಾರಿ ಇಲ್ಲ.

ಅವಾಗ್ ಅವಾಗ ಗ್ಯಾಲರಿ ಕ್ಲೀನ್ ಮಾಡ್ಬೇಕು :

ಸ್ವಲ್ಪ miss ಆದ್ರೂ, ಸಿಕ್ಕಿ ಬೀಳೋದ್ guarantee. ಅದ್ರಲ್ಲೂ ನಿಮ್ಮ ಫ್ರೆಂಡ್ಸ್ ಯಾವಾಗ message ಮಾಡ್ತಾರೆ ಅಂತ ನಿಮಗೆ ಗೊತ್ತಿರುತ್ತೆ. ಪೋಲಿ messages ಕ್ಲೀನ್ ಮಾಡೋದು ನಿಮ್ಮ ದೈನಂದಿನ ಕೆಲಸ.

ಮೊಬೈಲ್ ಮೇಲೆ ಕಣ್ಣು ಇರಲೇ ಬೇಕು :

ಇರೋದೇ ಎರಡು ಕಣ್ಣು, ಅದ್ರಲ್ಲಿ ಒಂದು ಕಣ್ಣು ಮೊಬೈಲ್ ಮೇಲೆ ಇರಲೇ ಬೇಕು, ಯಾಕಂದ್ರೆ ನಿಮ್ ಫ್ರೆಂಡ್ಸ್ ಬಗ್ಗೆ ನಿಮ್ಮ್ಗೆ ಚೆನ್ನಾಗ್ ಗೊತ್ತು. ಯಾವಾಗ್ಲೂ mobile ಕೈಯಲ್ಲಿ ಇರಲ್ಲ . ಆದ್ರೆ ಏನೇ ಕೆಲಸ ಮಾಡ್ತಾ ಇದ್ರೂ mobile ಕಡೆ ನಿಮ್ಮ ಗಮನ ಇದ್ದೆ ಇರುತ್ತೆ.

ಜೆನೆರೇಟರ್ ನಾಲೆಡ್ಜ್  ಕಮ್ಮಿ :

ಪೋಲಿ messages ಅಂದ್ರೆ ತುಂಬ ಸುಲಭವಾಗಿ ಅರ್ಥ ಆಗಲ್ಲ . ಬೇರೆಯರವ ಜೊತೆ ಕೇಳೋದ್ ಬಹಳ ಕಷ್ಟ. ಅದ್ರಲ್ಲೂ ಎಲ್ರು ನಿಮ್ಮ ಕಾಲ್ ಎಳೆಯೋಕೆ wait ಮಾಡ್ತಾ ಇರ್ತಾರೆ.

ಸುಳ್ಳು ಹೇಳೋ ಪರಿಸ್ಥಿತಿ ಬಂದೆ ಬರುತ್ತೆ :

ಯಾರ್ ಮೇಲೆ ಬೇಕಾದ್ರು ಆಣೆ ಮಾಡ್ತೀನಿ, ನೀವು ಈ ವಿಚಾರವಾಗಿ ಸುಳ್ಳು ಹೇಳಲೇ ಬೇಕಾದ ಪರಿಸ್ಥಿತಿ ಬರುತ್ತೆ. ಪ್ರತಿ message ಗು ಹೊಸ ಸುಳ್ಳು ಹುಡುಕೋದು ಬಹಳ ಕಷ್ಟ. ಅದ್ರಲ್ಲೂ ಸಣ್ಣ ಅನುಮಾನ ಬಂದ್ರೂ, ಇನ್ನೊಂದ್ problem ಶುರು .

ಫ್ರೆಂಡ್ಸ್ ಜೊತೆ ಶೇರ್ ಮಾಡೋಕು ಮುಜುಗರ :

ಈ ಕಾಲದಲ್ಲಿ ಎಲ್ರು ಈ ತರ ಇರಲ್ಲ but ಕೆಲವು ಮಂದಿ ಈಗ್ಲೂ ಈ ತರ ವಿಚಾರಗಳನ್ನ ಶೇರ್ ಮಾಡ್ಕೊಳಕ್ಕೆ ಹೋಗಲ್ಲ. ಯಾಕ್ ಅಂದ್ರೆ ಮಡಿವಂತಿಕೆ ಅಡ್ಡ ಬರುತ್ತೆ. same ವಯಸ್ಸಿನವರ ಜೊತೆ ಹೇಳ್ಬೇಕು ಅಂತ ತುಂಬ ಪ್ರಯತ್ನ ಮಾಡ್ತಿರ. ಆದ್ರೆ ಪ್ರತಿ ಸಲ ಏನೋ ಒಂದ್ problem . ಬರೇ ಯೋಚನೆ, ಆದ್ರೆ ಏನು ಪ್ರಯೋಜನ ಇಲ್ಲ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top