fbpx
Awareness

ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗ್ತಾ ಇಲ್ಲ… ಏನ್ ಮಾಡ್ತಿದೆ ಸರ್ಕಾರ???

ಆ ಭಾಗ್ಯ ಈ ಭಾಗ್ಯ ಎಂದು ಘೋಷಣೆ ಮಾಡೋ ನಮ್ಮ ಘನ CM ಸಾಹೇಬ್ರು ಒಮ್ಮೆ ಈ ವರದಿಯನ್ನು ನೋಡಲೇಬೇಕು, ಮೂಲಗಳ ಪ್ರಕಾರ ಕರ್ನಾಟಕದಲ್ಲಿ 9,468 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ, ಆದ್ರೆ ವಾಸ್ತವ ಸ್ಥಿತಿ ಬೇರೆ ಎಂಬುದು ಈಗ ಬಯಲಾಗಿದೆ. ಹೌದು, ಸರ್ಕಾರದ ಸ್ವಾಯತ್ತ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಇದನ್ನು ಸುಳ್ಳು ಎಂದು ಸಾಬೀತುಪಡಿಸಿದೆ.

  • ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಮೀತಿ ವರದಿ : ಶಾಲೆಗೆ ಹೋಗದಿರುವ ಮಕ್ಕಳ ಸಂಖ್ಯೆ 1.61 ಲಕ್ಷ.

 

  • ಸರ್ವಶಿಕ್ಷ ಅಭಿಯಾನ ನಡೆಸಿದ್ದ ಸಮೀಕ್ಷೆ ವರದಿ : ಶಾಲೆಗೆ ಹೋಗದಿರುವ ಮಕ್ಕಳ ಸಂಖ್ಯೆ 9000 ಮಕ್ಕಳು

           ಅಂದರೆ ಆಯೋಗ ನಡೆಸಿರುವ ಸಮೀಕ್ಷೆಯಲ್ಲಿ ಅದು 20 ಪಟ್ಟು ಹೆಚ್ಚಾಗಿದೆ.

ಕೇಂದ್ರ ಸರ್ಕಾರ ನೀಡಿದ ಶಾಕ್ :

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವದೇಕರ್ ಲೋಕಸಭೆಯಲ್ಲಿ ಹೇಳಿಕೆ ನೀಡಿ, ಕರ್ನಾಟಕದಲ್ಲಿ 1.22 ಲಕ್ಷ ಶಾಲೆಯಿಂದ ಹೊರಗುಳಿದಿರುವ ಮಕ್ಕಳಿದ್ದಾರೆ ಎಂದಿದ್ದರು.

ಹಾಗಾದ್ರೆ ಸರ್ವಶಿಕ್ಷ ಅಭಿಯಾನ ಇಲಾಖೆ ಮೋಸ ಮಾಡ್ತಿದ್ಯ…?

ಹೀಗೊಂದು ಪ್ರೆಶ್ನೆ ಎದುರಾಗಿದೆ, ಈ ಸಂಖ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸರ್ವ ಶಿಕ್ಷಾ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಸಿ.ಪಿ.ಜಾಫರ್, ನಮ್ಮ ಮೊದಲ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 1.20 ಲಕ್ಷ ಮಂದಿ ಮಕ್ಕಳು ಶಾಲೆಗೆ ಹೋಗದೆ ಉಳಿದಿದ್ದಾರೆ ಎಂದು ತಿಳಿದುಬಂದಿತ್ತು. ನಂತರ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ಜನವರಿ 2016ರಲ್ಲಿ ಮರು ಸಮೀಕ್ಷೆ ನಡೆಸಿದಾಗ ಶಾಲೆಗೆ ಹೋಗದಿರುವ ಮಕ್ಕಳ ಸಂಖ್ಯೆ 9,000 ಕಂಡುಬಂತು ಎಂದಿದ್ದಾರೆ.

ಆದರೆ ಮಕ್ಕಳ ಹಕ್ಕು ಆಯೋಗ ‘ಶಾಲೆ ಕಡೆಗೆ, ನನ್ನ ನಡಿಗೆ’ ಯೋಜನೆಯಡಿ ನಡೆಸಿದ ಸಮೀಕ್ಷೆ ಇತ್ತೀಚಿನದ್ದಾಗಿದೆ. ಇದರ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಮೀಕ್ಷೆಯ ವರದಿ ಸಿಕ್ಕಿದೆ.ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಆಯೋಗದ ಉನ್ನತಾಧಿಕಾರಿಯೊಬ್ಬರು, ರಾಜ್ಯಾದ್ಯಂತ ಇರುವ ಮಕ್ಕಳು ಮತ್ತು ಪೋಷಕರ ಸಂಪರ್ಕ ಪಡೆದು ನಾವು ಸಮೀಕ್ಷೆ ನಡೆಸಿದ್ದೇವೆ. ವರದಿಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸುತ್ತೇವೆ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top