fbpx
ಸಮಾಚಾರ

BSF ಸಾಮಾಜಿಕ ಜಾಲತಾಣದ ಸಂಚಲನಕ್ಕೆ ಕಣ್ಣು ತೆರೆದ ಸರಕಾರ

ಸಾಮಾಜಿಕ ಜಾಲತಾಣದಲ್ಲಿ ದೂರು ಸಲ್ಲಿಸಿ ದೇಶಾದ್ಯಂತ ಸಂಚಲನಕ್ಕೆ ಕಾರಣರಾಗಿದ್ದ ಯೋಧರು ಕೊನೆಗೂ ಸರಕಾರದ ಕಣ್ಣು ತೆರೆಸಿದ್ದಾರೆ. ಗಡಿ ಭದ್ರತಾ ಪಡೆಯ ಅಡುಗೆ ಮನೆ ಉಸ್ತುವಾರಿಗೆ ಸಮಿತಿ ನೇಮಕ ಮಾಡಲಾಗಿದ್ದು, ಇದೀಗ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರಿಗೆ ದೊರೆಯುವ ಊಟದಲ್ಲಿ ಪರೋಟ, ಮೀನು, ದಾಲ್‍ ಸಿಗಲು ಆರಂಭಿಸಿದೆ.

ಹೊಸದಾಗಿ ನೇಮಕಗೊಂಡ ಸಮಿತಿಯು ಗಡಿಯಲ್ಲಿರುವ ಯೋಧರಿಗೆ ಪೂರೈಸಲಾಗುವ ಆಹಾರದ ತಯಾರಿ ಮತ್ತು ಪೂರೈಕೆ ಕುರಿತು ಗಮನ ಹರಿಸಲಿದೆ. ಅಲ್ಲದೇ ಆಹಾರ ತಯಾರಿಸುವಾಗಲೂ ಅತ್ಯಂತ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲಿದೆ.

ಸಮಿತಿಯ ಎಲ್ಲಾ ಸದಸ್ಯರು ಅತ್ಯಂತ ಸಮೀಪದಲ್ಲಿರುವ ಮಾರುಕಟ್ಟೆಯಿಂದ ತಾಜಾ ತರಕಾರಿ ಖರೀದಿಸಲಿದೆ. ತರಕಾರಿ ಅಲ್ಲದೇ ಅಡುಗೆಗೆ ಬೇಕಾದ ಇತರೆ ವಸ್ತುಗಳು ಉತ್ತಮ ಗುಣಮಟ್ಟದ್ದು ಎಲ್ಲಿ ಸಿಗುತ್ತವೆ ಎಂದು ಸಮೀಕ್ಷೆ ಮಾಡಲಿದೆ. ಖರೀದಿ ನಂತರ ಸರ್ವೆ ಸಮಿತಿ ಮರು ಪರಿಶೀಲನೆ ಮಾಡಿ ಒಪ್ಪಿಗೆ ಸೂಚಿಸಿದ ನಂತರವೇ ಅಡುಗೆ ಸಿದ್ಧಪಡಿಸಲಾಗುವುದು ಎಂದು ಸಹಾಯಕ ಕಮಾಂಡೆಂಟ್ ಅಕ್ರಮ್‍ ಖಾನ್ ವಿವರಿಸಿದ್ದಾರೆ.

ಮುಖ್ಯ ಕಚೇರಿಯಿಂದ ಪ್ರತಿ ತಿಂಗಳು ರೇಷನ್‍ ಆಯಾ ಭಾಗಕ್ಕೆ ತಲುಪಲಿದೆ. ತಾಜಾ ತರಕಾರಿ ಮತ್ತು ಹಣ್ಣುಗಳನ್ನು ವಾರಕ್ಕೆ ಮೂರು ಬಾರಿ ಸಮೀಪದ ಅಂಗಡಿಗಳಿಂದ ಖರೀದಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಎಲ್ಲಾ ಯೋಧರನ್ನು ಪರಿಗಣಿಸಿ ಆಹಾರ ಸಿದ್ಧಪಡಿಸಲಾಗುತ್ತಿದ್ದು, ಪ್ರತಿಯೊಬ್ಬರಿಗೂ ಸಮಾಧಾನ ಆಗುವಂತಹ ಗುಣಮಟ್ಟದ ಆಹಾರ ನೀಡಲು ಸಮಿತಿ ಶ್ರಮಿಸಲಾಗುತ್ತಿದೆ.

ಗಡಿ ನಿಯಂತ್ರಣ ರೇಖೆ ಬಳಿ ಕಾವಲು ಇರುವ ಯೋಧರಿಗೆ ಬಿಎಸ್‍ಎಫ್‍ ಅಡುಗೆ ಮನೆಯಲ್ಲಿ ಆಹಾರ ಸಿದ್ಧಪಡಿಸಲಾಗುತ್ತದೆ. ಗಡಿಯ ಬಳಿ ಆರ್‍.ಎಸ್‍. ಪುರದಲ್ಲಿ ಅಡುಗೆ ಮನೆ ಇದೆ. ಇಲ್ಲಿಂದ ಯೋಧರಿಗೆ ಪೂರೈಕೆಯಾಗುವ ಭೋಜನದಲ್ಲಿ ರೋಟಿಗಳು, ಮೀನು, ಚೀಸ್‍ ಮತ್ತು ದಾಲ್‍ ಇರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಪ್ರತಿಯೊಬ್ಬ ಯೋಧನಿಗೆ ಕನಿಷ್ಠ 3000 ಕ್ಯಾಲೋರಿ ಆಹಾರ ಪೂರೈಸಲಾಗುವುದು. 3600 ಅಡಿಗಿಂತಲೂ ಎತ್ತರದ ತಾಣಗಳಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ಇದಲ್ಲದೇ ವಿಶೇಷವಾಗಿ ಜೇನುತುಪ್ಪ, ಹಣ್ಣು, ಚಾಕಲೇಟ್‍ ಮತ್ತು ಟಿನ್‍ಗಳ ಆಹಾರ ಕೂಡ ನೀಡಲಾಗುತ್ತಿದೆ.

ಆಹಾರ ತಯಾರಿಯ ವೇಳಾಪಟ್ಟಿಯನ್ನು ಕಮಾಂಡರ್‍ ನಿಗದಿಪಡಿಸುತ್ತಾರೆ. ಅವರ ನಿರ್ದೇಶನದ ಮೇರೆಗೆ ನಿಗದಿತ ಅವಧಿಯಲ್ಲಿ ಅಡುಗೆ ಸಿದ್ಧಪಡಿಸಲಾಗುತ್ತಿದೆ. ವಾಹನಗಳಲ್ಲಿ ಆಡುಗೆ ಆದಷ್ಟು ಬೇಗ ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆರ್‍ಎಸ್‍ ಪುರದ ಕಿರಿಯ ಅಧಿಕಾರಿ ಹೇಳಿದರು.

ಇದೀಗ ಯೋಧರಿಂದ ಅಡುಗೆ ಬಗ್ಗೆ ದೂರುಗಳು ಕೇಳಿ ಬಂದಿಲ್ಲ. ರಾಜ್‍ ಬಹದ್ದೂರ್‍ ಎಂಬ ಯೋಧ ಕಳಪೆ ಆಹಾರದ ಬಗ್ಗೆ ಮಾಡಿರುವ ಆರೋಪ ನಿಜ ಕೂಡ. ಏಕೆಂದರೆ ಆತ ತುಂಬಾ ಎತ್ತರದ ಹಾಗೂ ಕಡಿದಾದ ಜಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಗೆ ತಲುಪಬೇಕಾದರೆ ಕಷ್ಟವೂ ಇದೆ ಎಂದು ಕಾನ್ಸ್ ಟೇಬಲ್ ಜತಿಂದರ್‍ ಕುಮಾರ್ ಯಾದವ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top