fbpx
ಅರೋಗ್ಯ

ಮಕ್ಕಳೇಕೆ ಬೇಗ ದೊಡ್ಡವರಾಗುತ್ತಿದ್ದಾರೆ?

ನಿಮ್ಮ ಮಕ್ಕಳು ಹಾಲನ್ನು ದೂರವಿಟ್ಟು ಬರೀ ತಂಪು ಪಾನೀಯಗಳ ಮೇಲೆ ಅವಲಂಬಿತರಾಗಿದ್ದಾರಾ? ಹಾಗಾದರೆ ತಪ್ಪದೆ ಮುಂದೆ ಓದಿ…

ನಿಮ್ಮ ಮಕ್ಕಳು ಹಾಲನ್ನು ಬಿಟ್ಟು ಕೋಲಾಗಳು, ಸೋಡಾಗಳು, ಐಸ್ ಟೀ, ಸಿಹಿ ಪಾನೀಯ ಗಳನ್ನು ಹುಚ್ಚೆದ್ದು ಕುಡಿಯುತ್ತಿದ್ದಾರಾ? ಹಾಗಿದ್ದರೆ ನೀವು ಮಕ್ಕಳ ಮೇಲೆ ಒಂದು ಕಣ್ಣಿಡಲು ಶುರುಮಾಡಿ. ಅದರಲ್ಲೂ ಹೆಣ್ಣುಮಕ್ಕಳು ಚಿಕ್ಕವಯಸ್ಸಿನಲ್ಲೇ ಪ್ರೌಢ ಹಂತ ತಲುಪುತ್ತಿದ್ದಾರೆ. ಇದನ್ನು ನೀವು ಸರ್ವೇಸಾಮಾನ್ಯವಾಗಿ ನೋಡಿರುತ್ತೀರಾ. ಇದಕ್ಕೆ ಕಾರಣವೇನೆಂದು ಕೇಳಿದಾಗ ನಿಮ್ಮಿಂದ ಬರುವ ಉತ್ತರ “ಹೆರಿಡಿಟಿ” ಅಂತ. ತಪ್ಪು ಕಲ್ಪನೆ ಇದು. ಸಣ್ಣ ವಯಸ್ಸಿನಲ್ಲೇ ಸಿಹಿ, ಮತ್ತು ಕಾರ್ಬೋನೇಟೆಡ್ ಪಾನೀಯಗಳ ಅತ್ಯಂತ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತವೆ. ದೇಹದ ತೂಕ ಜಾಸ್ತಿಯಾಗುವುದರ ಜತೆಗೆ ಮಕ್ಕಳು ಅಕಾಲಿಕವಾಗಿ ದೊಡ್ಡವರಾಗಿಬಿಡಲು ಕಾರಣವಾಗುತ್ತಿವೆ.

ಇದು ಅವರ ಮಾನಸಿಕ ಸ್ಥಿತಿ ಮೇಲೆ ಘಾಸಿಯುಂಟು ಮಾಡುವುದರ ಜತೆಗೆ ಮುಂದಿನ ಹಂತಗಳಲ್ಲಿ ಸ್ತನ ಕ್ಯಾನ್ಸರ್‌ಗೂ ಕಾರಣವಾಗುತ್ತದೆ ಎನ್ನುವ ಗಂಭೀರ ಅಂಶವನ್ನು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ವಿಜ್ಞಾನಿಗಳು ಎತ್ತಿಹಿಡಿದಿದ್ದು, ಜನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಹೆಣ್ಮಕ್ಕಳಲ್ಲಿ ಪ್ರೌಢತೆಯ ಲಕ್ಷಣಗಳು ಕಾಣಿಸಿಕೊಳ್ಳುವ ನಿಜವಾದ ಹಂತ ಎಂದರೆ 9ರಿಂದ 13 ಮತ್ತು ಗಂಡು ಮಕ್ಕಳಲ್ಲಿ 11ರಿಂದ 14 ವರ್ಷದಲ್ಲಿ. ಅಂದರೆ ಸ್ತನಗಳು, ಗುಪ್ತಾಂಗಗಳ ಬೆಳವಣಿಗೆ, ಮಾಂಸ ಖಂಡಗಳು ಗಟ್ಟಿಯಾಗುವುದು ಸಹಿತ ದೈಹಿಕವಾದ ಹಲವು ವ್ಯತ್ಯಾಸಗಳು ಗೋಚರಿಸುತ್ತವೆ. ಆದರೆ, ಹಾರ್ಮೋನ್ ವ್ಯತ್ಯಾಸ, ದೈಹಿಕ ಬೆಳವಣಿಗೆಯ ವೈರುಧ್ಯಗಳ ಹಿನ್ನೆಲೆಯಲ್ಲಿ ಈ ಪ್ರೌಢತೆಯ ಹಂತ ಬೇಗನೆ ಬರುತ್ತಿವೆ. ಹೆಣ್ಣುಮಕ್ಕಳು 8 ವರ್ಷದ ಒಳಗೇ ಬೆಳವಣಿಗೆಯ ಲಕ್ಷಣ ತೋರಿದರೆ ಗಂಡುಮಕ್ಕಳು 10ರ ಹರೆಯಕ್ಕೇ ದೊಡ್ಡವರಾಗುತ್ತಿದ್ದಾರೆ.

ಕೃತಕ ಸಿಹಿ ಅಥವಾ ಸಿಹಿ ಇರುವ ಆಹಾರದ ಸೇವನೆ ಇಂದಾಗಿ ಮಕ್ಕಳ ಆರೋಗ್ಯ ಹದಗೆಡುತ್ತಲೆ ಇರುತ್ತದೆ. ಡಯಟ್ ಕೋಕ್ ಹಾಗೂ ಡಯಟ್ ಪೆಪ್ಸಿ ಕುಡಿಯುವರಲ್ಲಿ ಮಲ್ಟಿಪಲ್ ಸ್ಕ್ಲೀರೋಸಿಸ್ ಖಾಯಿಲೆ ಹೆಚ್ಚು ಎಂದು ಅಧ್ಯಯನಗಳು ಹೇಳುತ್ತದೆ. ಸಿಹಿಕಾರಕಗಳು ಮತ್ತು ಕಾರ್ಬೊನೇಟೆಡ್ ಡ್ರಿಂಕ್‌ಗಳು ಸ್ಥೂಲಕಾಯ ಮತ್ತು ಈಸ್ಟ್ರೋಜನ್ ಮೇಲೆ ಪರಿಣಾಮ ಬೀರುವುದರಿಂದ ಇದರ ಬಳಕೆ ಮೇಲೆ ನಿಯಂತ್ರಣ ಅನಿವಾರ್ಯ. ಇಲ್ಲವಾದರೆ, ಇನ್ನೂ ಜಗತ್ತನ್ನೇ ಅರಿಯದ ಕಂದಮ್ಮಗಳು ಜಗತ್ತಿನ ಕೆಟ್ಟ ದಷ್ಟಿಯನ್ನು ಎದುರಿಸುವ ಅಪಾಯ ಎದುರಾಗುತ್ತದೆ. ಆದಷ್ಟು ನಿಮ್ಮ ಮಕ್ಕಳು ತಂಪು ಪಾನೀಯಗಳ ಸಹವಾಸಕ್ಕೆ ಹೊಗದಿರುವುದೇ ಓಳ್ಳೆಯದು!! ಏನೇ ಅಗಲಿ ಜನಸಮಾನ್ಯರು ಎಚ್ಚರದಿಂದ ಇರಬೇಕು ಅಲ್ಲವೇ ಮಕ್ಕಳೆ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top