fbpx
Achivers

ಇಲ್ಲಿ ರಟ್ಟಿನಿಂದ ಮನೆಯ ಪೀಠೋಪಕರಣಗಳನ್ನು ಮಾಡುತ್ತಾರೆ!!!

ಈಗಲೇ ಮನೆಗೆ ತನ್ನಿ ರಟ್ಟಿನ ಫರ್ನಿಚರ್!!

ರಟ್ಟು ( cardboard) ಅನ್ನು ಸಾಮಾನ್ಯವಾಗಿ ಪ್ಯಾಕ್ ಮಾಡಲು ಬಳಸುತ್ತಾರೆ , ಅದೇ ರಟ್ಟಿನಿಂದ ಪೀಠೋಪಕರಣವನ್ನು ಮಾಡಬಹುದು! ಸುಳ್ಳು ಎನ್ನುತೀರಾ ?

ಮುಂಬೈ ವಾಸಿ ಹರೀಶ್ ಮೆಹ್ತಾರ ಕೈಚಳಕ . ಇವರು ಪೇಪರ್ ಶೆಪರ್ ಎಂಬ ಹೆಸರಿನ ಉದ್ಯಮದ ಮೂಲಕ ರಟ್ಟಿನ ಪೀಠೋಪಕರಣಗಳನ್ನು ತಯಾರಿಸುತ್ತಾರೆ. ಇದಕ್ಕೆ ಅವರ ಕೊರಗುಲೆಟೆಡ್ ( corragulated )ರಟ್ಟನ್ನು ಉಪಯೋಗಿಸುತ್ತಾರೆ. ಈ ರಟ್ಟಿನ ವಿಶೇಷತೆ ಏನೆಂದರೆ , ಇದರಲ್ಲಿ ೨ ರಟ್ಟು ಇರುತದೆ , ಮತ್ತು ಆ ೨ ರಟ್ಟಿನ ಮದ್ಯದಲ್ಲಿ ಅಲೆಯ ಆಕಾರದಲ್ಲಿ ರಟ್ಟನ್ನು ಇರಿಸಲಾಗುತ್ತದೆ.

ಈ ಆಕಾರದಿಂದಲೇ ಆ ಕರಗುಲಾಟೆಡ್ ರಟ್ಟಿಗೆ ಒತಡ ತಡೆದುಕೊಳ್ಳುವ ಶಕ್ತಿ ಬರುತ್ತದೆ. ಹರೀಶ್ ಮೆಹ್ತಾ ಅವರ ಕುಟ್ಟಂಬದ ಮೂಲ ಉದ್ಯಮವೇ ರಟ್ಟಿನ ಬಾಕ್ಸ್ ಮಾಡುವುದು , ಇವರು ಸಹ ಶುರುವಿನಲ್ಲಿ ಅದೇ ಉದ್ಯಮಕ್ಕೆ ಕಾಲಿರಿಸಿದರು . ನಂತರದ ದಿನಗಳಲ್ಲಿ , ಇವರಿಗಿದ್ದ ರಟ್ಟಿನ ಬಗೆಗಿನ ಜ್ಞಾನವನ್ನು ಉಪಯೋಗಿಸಿ ರಾಟ್ಟಿನ ಫರ್ನಿಚರ್ ಮಾಡಲು ಶುರು ಮಾಡಿದರು .

ಇವರಿಗಿದ್ದ ಮೊದಲ ಸವಾಲು , ಆ ಪೀಠೋಪಕರಣದ ಬಾಳಿಕೆಯ ಬಗ್ಗೆ. ಅವರ ಬಳಿ ೫-೭ ವರ್ಷ ಬಾಳಿಕೆ ಬರುವ ಫರ್ನಿಚರ್ ಗಳು ದೊರೆಯುತ್ತದೆ. ಈ ಪೀಠೋಪಕರಣಗಳಿಗೆ ನಟ್ಟು ಬೊಲ್ಟ್ ನ ಅವಶ್ಯಕತೆ ಇಲ್ಲ. ಕೊರಗುಲೆಟೆಡ್ ರಟ್ಟಿನ ಅಲೆಯ ಆಕಾರ ೨ ಕಾರ್ಡಬೋರ್ಡುಗಳು ಒಟ್ಟಿಗೆ ಗಟ್ಟಿಯಾಗಿ ಕೂರಲು ಸಹಾಯಕ .

ಈ ಪೀಠೋಪಕರಣಗಳಿಗೆ ಕಡಿಮೆ ದರ ಮಾತ್ರವಲ್ಲ ಇವನ್ನು ಮರುಬಳಕೆ ಕೂಡ ಮಾಡಬಹುದು ಹಾಗು ಪರಿಸರ ಸ್ನೇಹಿ. ಒಂದು ಮರದಿಂದ ಮಾಡಿದ ಓದುವ ಮೇಜು ಹಾಗು ಕುರ್ಚಿಗೆ 9000 , ಅದೇ ಮೇಜು ರಟ್ಟಿನಲ್ಲಿ ಮಾಡಿದಾದ್ರೆ ಅದಕ್ಕೆ ಬರೀ 1920 ರೂಪಾಯಿಗಳು. ಈ ರಟ್ಟಿನ ಪೀಠೋಪಕರಣಗಳು ಪರಿಸರ ಸ್ನೇಹಿಯೂ ಹೌದು , ಜೇಬಿನ ಸ್ನೇಹಿಯೂ ಹೌದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top