fbpx
Awareness

ನಿಮ್ಮ ಮುತ್ತಜ್ಜನ ಮುತ್ತಜ್ಜನ ಮುತ್ತಜನ ಹೆಸರು ತಿಳಿಯಬೇಕ?ಈಗಲೆ ಹರಿದ್ವಾರಕ್ಕೆ ಹೊರಡಿ!!

ನಮ್ಮ ಅಜ್ಜ ಮುತ್ತಜ್ಜರ ಹೆಸರು ಕೇಳಿದರೆ ನೆನಪಿರದ ಈ ಕಾಲದಲ್ಲಿ,ಈ ಹರಿದ್ವಾರ ಪಂಡಿತರ ಬಳಿ ಹೋಗಿ ಕುಳಿತರೆ , ನಮ್ಮ ೨೦ ಪೀಳಿಗೆಗಳಷ್ಟು ಹಿಂದಿನ ಪೂರ್ವಜರ ಬಗ್ಗೆ ಮಾಹಿತಿ ನೀಡುತ್ತಾರೆ!!

ಹೌದು ! ಕಳೆದ ಹಲವಾರು ಪೀಳಿಗೆಗಳ ಹಿಂದೂ ಕುಟುಂಬಗಳ ವಿವರವಾದ ಕುಟುಂಬ ವಂಶಾವಳಿಗಳು ವೃತ್ತಿಪರ ಹಿಂದೂ ಬ್ರಾಹ್ಮಣ ಪಂಡಿತರ ಬಳಿ ಇದೆ,”ಪಾಂಡ” ಎಂದು ಕರೆಯಲ್ಪಡುವ ಇವರು ಇರುವುದು ತೀರ್ಥಕ್ಷೇತ್ರ ಹರಿದ್ವಾರದಲ್ಲಿ.

Image result for haridwar

ತಲೆಮಾರುಗಳಿಂದ ಪಂಡಿತರಿಗೆ ತಮ್ಮ ಪೂರ್ವಜರು ಕೈಬರಹದ ರೆಜಿಸ್ಟರ್ಗಳನ್ನು ಬಳುವಳಿಯಾಗಿ ಕೊಟ್ಟಿದ್ದಾರೆ.ಅವುಗಳನ್ನು ಮೂಲ ಜಿಲ್ಲೆ ಹಾಗು ಹಳ್ಳಿಗಳ ಅನುಸಾರ ವಿಂಗಡಿಸಲಾಗಿದೆ.ಇವುಗಳನ್ನು ಬಹಿ(ವಹಿ) ಎಂದು ಕರೆಯುತ್ತಾರೆ.

Image result for haridwar pandit

ಇದು ಹೇಗೆ ಎಂದರೆ , ಶತಕಗಳಿಂದ , ಯಾರೇ ಹರಿದ್ವಾರಕ್ಕೆ ಹೋದರು ಅವರ ಪರಿವಾರಕ್ಕೆ ಅನುಗುಣವಾದ ಪಂಡಿತರ ಬಳಿ ಹೋಗಿ ಅವರ ಕೂಡು ಕುಟುಂಬದ ವಂಶವೃಕ್ಷವನ್ನು ಇತ್ತೀಚಿನ ಸಾವು,ಹುಟ್ಟು,ಮದುವೆ ಮುಂತಾದ ವಿಷಯಗಳನ್ನು ಪಂಡಿತರ ಗಮನಕ್ಕೆ ತರುವುದು ವಾಡಿಕೆ. ಈ ಮಾಹಿತಿಗಳು ಎಷ್ಟು ಕರಾರುವಾಕ್ಕಾಗಿರುತ್ತದೆ ಎಂದರೆ ಇದನ್ನು ಎಷ್ಟೋ ಬಾರಿ ಕಾನುನಾತ್ಮಾಕ ವಿಚಾರಗಳಿಗೆ ಉಪಯೋಗಿಸುತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top