fbpx
Health

ಗ್ಯಾಸ್ಟ್ರಿಕ್ ಸಮಸ್ಯೆಗೆ ಪ್ರಕೃತಿ ಚಿಕಿತ್ಸೆಯಿಂದ ಪರಿಹಾರ ಕಂಡಿಕೊಳ್ಳಿ!!!

ಜಠರದ ಉರಿಯಿಂದಾಗುವ ಸಮಸ್ಯೆಗಳು
ಉಬ್ಬಸ, ತೇಗುವಿಕೆ, ತಲೆ ಸುತ್ತುವಿಕೆ ಹಾಗೂ ಎದೆ ಉರಿತದೊಂದಿಗೆ ಉದರದ ಮೇಲ್ಭಾಗದಲ್ಲಿ ಕಂಡುಬರುವ ದೀರ್ಘಕಾಲ ಸಮಸ್ಯೆಯನ್ನು ಜಠರದ ಉರಿ ಅಥವಾ ಗ್ಯಾಸ್ಟ್ರಿಕ್ ಎಂದು ಕರೆಯುತ್ತಾರೆ. ಈಚೆಗಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಜಠರದುರಿತ ಕಂಡು ಬರುತ್ತಿದೆ.

Image result for gastric pain
ಇದು ವೃತ್ತಿಪರ ಉದ್ಯೋಗಿಗಳಲ್ಲಿ ಯಥಾಸ್ಥಿತಿಯ ಕಥೆ. ಹೌದು ಹೆಚ್ಚಿನ ಉದ್ಯೋಗಸ್ಥರು ಊಟ, ಉಪಾಹಾರಗಳ ನಡುವೆ ದೀರ್ಘ ಅಂತರಗಳಲ್ಲಿ, ಜಂಕ್ ಫುಡ್ ಸೇವನೆ, ದೈಹಿಕ ವ್ಯಾಯಾಮದ ಕೊರತೆ ಹಾಗೂ ಹೆಚ್ಚುವರಿ ಕೆಲಸದ ವೇಳೆ, ಈ ಎಲ್ಲ ಕಾರಣಗಳಿಂದ ಜಿಇಆರ್‍ಡಿ (ಗ್ಯಾಸ್ಟ್ರೋಎಸ್‍ಫಾಜಿಯಲ್ ರಿಫ್ಲಕ್ಸ್ ಡಿಸೀಸ್) ಸಮಸ್ಯೆಗೆ ಎಡೆಮಾಡಿಕೊಡುತ್ತದೆ. ಹೊಟ್ಟೆಗೆ ಸಕಾಲಕ್ಕೆ ಬೇಕಾದ ಆರೋಗ್ಯಕರ ಆಹಾರಗಳು ಸೇರದಿರುವುದರಿಂದ ಜಠರದುರಿತ ಉಂಟಾಗುತ್ತದೆ.
ಗ್ಯಾಸ್ಟ್ರೈಟಿಸ್ ನಮ್ಮ ಹೊಟ್ಟೆಯಲ್ಲಿ ಮಾತ್ರ ಕೇಂದ್ರೀಕೃತವಾಗಿರುವುದಿಲ್ಲ. ಬದಲಿಗೆ ಗಂಟಲಿನಲ್ಲಿಯೂ ಕೆಲ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಮಗುವಿಗೆ ಆಗಾಗ ಗಂಟಲು ಸೋಂಕು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಜಠರದ ಉರಿತ. ಉಬ್ಬಸ ಮತ್ತು ಉರಿಯಿಂದ ಅದು ಗಲಗ್ರಂಥಿ ತನಕ ತಲುಪುತ್ತದೆ.

Image result for gastric pain
ಗ್ಯಾಸ್ಟ್ರೈಟಿಸ್‍ನಿಂದ ನರಳುವವರು ಕಡಿಮೆ ಆಹಾರ ಸೇವಿಸುತ್ತಾರೆ. ಇದು ತಲೆನೋವು, ಮಂಪರು, ರಕ್ತಹೀನತೆ, ಕಡಿಮೆ ರಕ್ತದೊತ್ತಡ, ಅಲ್ಸರ್, ಕೀಲು ನೋವು, ಮೂಳೆ ನೋವು, ಅಸಮರ್ಪಕ ಬೆಳವಣಿಗೆ (ಎತ್ತರ ಮತ್ತು ತೂಕ), ರೋಗಪ್ರತಿರೋಧಕ ಶಕ್ತಿ ಕುಂಠಿತ. ಇದರಿಂದ ಎಲ್ಲ ರೀತಿಯ ಅಲರ್ಜಿಗಳು ಕಾಣಿಸಿಕೊಳ್ಳುತ್ತವೆ.
ಏಕಾಗ್ರತೆ ಕ್ಷೀಣಿಸುವಿಕೆ, ಸ್ಮರಣ ಶಕ್ತಿ ಕುಂಠಿತ, ಮಲಬದ್ಧತೆಯಿಂದ ಮೂಲವ್ಯಾಧಿ, ಮೂಲವ್ರಣ, ಅಸಮರ್ಪಕ ಆಹಾರ ಸೇವನೆ ಪದೇ ಪದೇ ಎದೆ ಉರಿ, ಹೃದಯಾಘಾತ, ನಿದ್ರಾಭಂಗ, ಭಾವೋದ್ವೇಗ, ಕಿರಿಕಿರಿ, ಖಿನ್ನತೆ, ಹತಾಶೆ ಇವುಗಳಿಗೆಲ್ಲ ಕಾರಣವಾಗುತ್ತದೆ.

Image result for no concentration
ಗ್ಯಾಸ್ಟ್ರೈಟಿಸ್‍ನಿಂದ ಮಾಸಿಕ ಋತುಚಕ್ರ ಅಸಮರ್ಪಕವಾಗಿ ಅದು ಯುವತಿಯರಲ್ಲಿ ಪಿಸಿಒಡಿ (ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್) ಎಂಬ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದನ್ನು ನಿರ್ಲಕ್ಷ್ಯಿಸಿದರೆ, ಅದು ಇನ್ಸುಲಿನ್ ಪ್ರತಿರೋಧ ತೊಂದರೆಗೂ ಆಸ್ಪದ ನೀಡುತ್ತದೆ. ಕೆಲ ಮಹಿಳೆಯರಲ್ಲಿ ಹಿರ್‍ಸುಟಿಸಂ ಎಂಬ ದೋಷವೊಂದು ಕಂಡುಬರುತ್ತದೆ.

Image result for PCOD

Image Source: Shutterstock

ಪುರುಷ ಹಾರ್ಮೋನುಗಳ ಪ್ರಮಾಣ ಹೆಚ್ಚಾಗಿ ಮುಖ ಹಾಗೂ ಎದೆಗಳಲ್ಲಿ ಅನಗತ್ಯ ಕೂದಲು ಬೆಳೆಯುತ್ತದೆ. ಪಿಸಿಒಡಿ ಸಮಸ್ಯೆ ಇದ್ದ ಮಹಿಳೆಯರು ಗರ್ಭ ಧರಿಸಲು ಕಷ್ಟವಾಗುತ್ತದೆ. ಗ್ಯಾಸ್ಟ್ರಿಟಿಸ್ ಪ್ರಕರಣವು ಹೈಪೆÇೀಥೈರಾಯ್ಡ್ ಸಮಸ್ಯೆ ತನಕ ಕೊಂಡೊಯ್ದಿರುವುದನ್ನು ಗಮನಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೈಪೆÇೀಥೈರಾಯ್ಡ್ ಒಂದು ಸಾಮಾನ್ಯ ಸಮಸ್ಯೆ ಎಂದು ಪರಿಗಣಿತವಾಗಿದೆ.
ಅನೇಕ ಸಂದರ್ಭಗಳಲ್ಲಿ ಸರಳ ಗ್ಯಾಸ್ಟ್ರೈಟಿಸ್ ದೀರ್ಘಕಾಲದ ತಲೆನೋವಿಗೆ ಕಾರಣವಾಗಿ ಮೈಗ್ರೇನ್ ತನಕ ತಲುಪುತ್ತದೆ. ವಾಂತಿಯೊಂದಿಗೆ ತಲೆನೋವು ಕಾಣಿಸಿಕೊಂಡು ನಿಮ್ಮ ಅಧ್ಯಯನ ಮತ್ತು ಉದ್ಯೋಗದಲ್ಲಿ ಸಾಧನೆ ಕುಂಠಿತಗೊಳ್ಳುವಂತೆ ಮಾಡುತ್ತದೆ. ಈ ಖಿನ್ನತೆಯು ಮಾನಸಿಕ ಒತ್ತಡಕ್ಕೆ ಸಂಬಂಧಪಟ್ಟ ರೋಗಗಳಿಗೆ ರಹದಾರಿ ನೀಡುತ್ತದೆ.
ಹೈಪೆÇೀಥೈರಾಯ್ಡ್, ಪಿಸಿಒಡಿ, ಹಿರ್‍ಸುಟಿಸಂ, ಮೈಗ್ರೇನ್ ತಲೆನೋವು, ಅಸಮರ್ಪಕ ಋತುಚಕ್ರ, ತೂಕ ಹೆಚ್ಚಳ ಇವುಗಳಿಗೆ ಒಂದು ಸಣ್ಣ ಗ್ಯಾಸ್ಟ್ರಿಟಿಸ್ ಕಾರಣವೆಂದರೆ, ನಿಮಗೆ ಅಚ್ಚರಿಯಾಗಬಹುದು. ಹಾಗೆಯೇ ಇದರಿಂದ ಖಿನ್ನತೆ, ಹತಾಶೆ, ಭಯ, ಆತಂಕ ಹಾಗೂ ಇತರೆ ದೀರ್ಘಕಾಲೀನ ಮಾನಸಿಕ ನ್ಯೂನತೆಗಳಿಗೂ ಕಾರಣವಾಗುತ್ತದೆ.
ಈ ಎಲ್ಲ ಸಮಸ್ಯೆಗಳಿಗೆ ಉತ್ತಮ ಮಾರ್ಗೋಪಾಯ ಮತ್ತು ಉತ್ತರವೆಂದರೆ, ಪ್ರಕೃತಿ ಚಿಕಿತ್ಸೆ. ಪ್ರಕೃತಿ ಚಿಕಿತ್ಸೆ ಪರಿಪೂರ್ಣ ಸುರಕ್ಷತೆಯಾಗಿದ್ದು, ಉದರದ ಒಳ ಭಾಗದ ಅಂಗಗಳ (ಗ್ಯಾಸ್ಟ್ರೋ-ಇನ್‍ಟೆಸ್ಟೆನಲ್ ಸಮಸ್ಯೆಗಳು) ಸಮಸ್ಯೆಗಳು ಮತ್ತು ಅವುಗಳ ತೊಡಕುಗಳ ಚಿಕಿತ್ಸೆಗೆ ಅತ್ಯುತ್ತಮ ವಿಧಾನವಾಗಿದೆ. ಈ ವಿಧಾನದಿಂದ ದೀರ್ಘಕಾಲದ ಗ್ಯಾಸ್ಟ್ರಿಟಿಸ್‍ನನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಗುಣಪಡಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top