ದೇವರು

ಮೆಂತ್ಯ ನೆನೆಸಿದ ನೀರಿನಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗಗಳಾಗುತ್ತೆ ಗೊತ್ತಾ??

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮೆಂತ್ಯ ನೆನೆಸಿದ ನೀರಿನಿಂದ ಆರೋಗ್ಯ

ಆಹಾರ ಔಷಧಿಯಾಗಬೇಕೇ ವಿನಃ ಔಷಧಿಯೇ ಆಹಾರವಾಗಬಾರದು ಎಂಬ ಮಾತಿದೆ. ಮೂರ್ನಾಲ್ಕು ದಶಕದ ಹಿಂದಕ್ಕೆ ಈ ಮಾತು ಅನ್ವಯಿಸುತ್ತಿತ್ತು. ಅಂದಿನ ಆಹಾರ ಔಷಧಿಯುಕ್ತವಾಗಿರುತ್ತಿತ್ತು. ಎಲ್ಲವೂ ಪೌಷ್ಟಿಕವಾಗಿತ್ತು. ಹಾಗಾಗಿ ಆಹಾರಪದ್ಧತಿ, ಜೀವನಶೈಲಿಯಿಂದ ಕಾಯಿಲೆಗಳು ಬರುವುದು ಅಪರೂಪವಾಗಿತ್ತು. ನಮ್ಮ ಹಿರಿಯರಲ್ಲಿ ಎಷ್ಟೋ ಮಂದಿ ಕಾಯಿಲೆಗಳೇ ಇಲ್ಲದೆ, ಅಸ್ಪತ್ರೆ ಮೆಟ್ಟಿಲು ಹತ್ತದೆ, ವೈದ್ಯರ ಸಂಪರ್ಕವೇ ಇಲ್ಲದೆ ಜೀವಮಾನ ಕಳೆದುದೂ ಇತ್ತು. ಇದೆಲ್ಲವೂ ಸಾಧ್ಯವಾಗಿಸಿದ್ದು ಅಂದಿನ ಜೀವನ ಹಾಗೂ ಆಹಾರಪದ್ಧತಿ.

ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವುದೇ ಜಾಣತನ ಎನ್ನುತ್ತಾರೆ. ಈ ಮಾತು ಆ ಕಾಲಕ್ಕೆ ಅನ್ವಯವಾಗುತ್ತಿತ್ತು.ಅವರ ಆಹಾರ ಹಾಗೂ ಜೀವನಶೈಲಿಯಲ್ಲೇ ಕಾಯಿಲೆಗಳಿಂದ ರಕ್ಷಣೆ ಪಡೆಯುತ್ತಿದ್ದ ಅಪರೂಪದ ಕಾಲಮಾನವಿತ್ತು. ಈಗ ಹಾಗಿಲ್ಲ. ಕಾಯಿಲೆ ಬಾರದಂತೆ ತಡೆಯಲು ಎಂತಹ ದುಸ್ಸಾಹಸ ಪಟ್ಟರೂ ಯಶ ದೊರೆಯುತ್ತಿಲ್ಲ. ಎಷ್ಟು ಆರೋಗ್ಯಪೂರ್ಣ, ಸಾತ್ವಿಕ ಜೀವನವೆಂದರೂ ರೋಗದಿಂದ ಬಹುತೇಕವಾಗಿ ಮುಕ್ತಿ ಸಿಗುತ್ತಿಲ್ಲ.

ಹಾಗಿದ್ದರೂ ಪ್ರಯತ್ನವನ್ನಂತೂ ನಿಲ್ಲಿಸುವಂತಿಲ್ಲ.ಈಗಲೂ ಕೂಡ ನಮ್ಮ ಆಹಾರ ಪದ್ಧತಿಯನ್ನು ಶುದ್ಧವಾಗಿಸಿಕೊಂಡರೆ ಕೆಲವು ಕಾಯಿಲೆಗಳಿಂದಲಾದರೂ ವಿಮುಕ್ತಿ ಪಡೆಯಲು ಸಾಧ್ಯ. ಹೊರಗಿನ ಆಹಾರದ ಆಕರ್ಷಣೆಗೆ ಬಿದ್ದವರಿಗೆ ಇದು ಒಂದಿಷ್ಟು ಕಷ್ಟವೆನಿಸಿದರೂ, ಮನಸ್ಸಿಗಿಂತ ದೊಡ್ಡದಾವುದೂ ಇಲ್ಲ. ಹೀಗೆ ಆರೋಗ್ಯರಕ್ಷಣೆ ನೀಡಬಲ್ಲ ಹಲವು ವಸ್ತುಗಳು ನಮ್ಮ ಅಡುಗೆಮನೆಯಲ್ಲೇ ಇವೆ. ಅವುಗಳಲ್ಲಿ ಮೆಂತೆಯೂ ಒಂದು.ಭಾರತೀಯ ಆಯುರ್ವೇದ ಔಷಧಿಯಲ್ಲಿ ಹಿಂದಿನಿಂದಲೂ ತನ್ನದೇ ಆದ ಸ್ಥಾನ ಪಡೆದುಕೊಂಡಿರುವ ಮೆಂತೆ ಕಾಳಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ.

ಇದು ಕಾಯಿಲೆಗಳನ್ನು ನಿವಾರಿಸುವುದು ಮಾತ್ರವಲ್ಲದೆ ಕೆಲವೊಂದು ರೋಗಗಳು ಬರದಂತೆ ತಡೆಯುವುದು. ಒಂದು ಲೋಟ ನೀರಿಗೆ ಎರಡು ಚಮಚ ಮೆಂತೆ ಕಾಳುಗಳನ್ನು ರಾತ್ರಿಯಿಡೀ ನೆನೆಸಿಟ್ಟು, ಬೆಳಿಗ್ಗೆ ಇದನ್ನು ಸೋಸಿಕೊಂಡು ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಆರೋಗ್ಯ ವೃದ್ಧಿಸುವುದು..ಮೆಂತೆ ನೆನಸಿದ ನೀರನ್ನು ಕುಡಿಯುವುದರಿಂದ ಮತ್ತು ನೆನೆಸಿದ ಮೆಂತೆಯನ್ನು ಸ್ವಲ್ಪ ತಿನ್ನುವುದರಿಂದ ಹಸಿವು ಕಡಿಮೆಯಾಗುವುದು.

ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿ. ಮೆಂತೆ ನೀರಿನಲ್ಲಿರುವ ಉರಿಯೂತ ಶಮನಕಾರಿ ಗುಣವು ಜೀರ್ಣಕ್ರಿಯೆಯು ಸರಾಗವಾಗಲು ನೆರವಾಗುವುದು ಮತ್ತು ಹೊಟ್ಟೆ ಉರಿಯನ್ನು ಶಮಗೊಳಿಸುವುದು. ಮೆಂತೆಯಲ್ಲಿ ಗ್ಲಾಕ್ಟೊಮನ್ನನ್ ಮತ್ತು ಪೆÇಟಾಶಿಯಂ ಇದೆ. ಇವೆರಡೂ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ.ಮೆಂತೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತೆಗೆದುಹಾಕುವುದು ಎಂಬುದು ಹಲವಾರು ಅಧ್ಯಯನಗಳಿಂದ ದೃಢಪಟ್ಟಿದೆ.

ಇದರೊಂದಿಗೆ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಕಾಪಾಡುವುದು.ಸಂಧಿವಾತಆ್ಯಂಟಿಆಕ್ಸಿಡೆಂಟ್ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಮೆಂತೆ ಸಂಧಿವಾತದ ನೋವನ್ನು ನಿವಾರಿಸುವುದು.ಮೆಂತೆಯು ದೇಹದ ಅದರಲ್ಲೂ ಕರುಳಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದರಿಂದ ಕ್ಯಾನ್ಸರ್ ಬರದಂತೆ ತಡೆಯುವುದುಇದರಲ್ಲಿ ಗ್ಲಾಕ್ಟೊಮನ್ನನ್ ಎನ್ನುವ ಪ್ರಮುಖ ನಾರಿನಾಂಶವಿದ್ದು, ರಕ್ತವು ಸಕ್ಕರೆ ಅಂಶ ಹೀರಿಕೊಳ್ಳುವುದನ್ನು ತಗ್ಗಿಸುವುದು. ಇದರಿಂದ ಮಧುಮೇಹ ತಡೆಯಬಹುದು ಹಾಗೂ ನಿಯಂತ್ರಣದಲ್ಲೂ ಇಡಬಹುದು.ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಮೆಂತೆ ನೆನೆಸಿದ ನೀರನ್ನು ಕುಡಿಯಿರಿ. ಇದು ಕಿಡ್ನಿಯಲ್ಲಿ ಕಲ್ಲನ್ನು ಹೊರಹಾಕಲು ನೆರವಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top