fbpx
Awareness

ಪೋಷಕರೇ ನಿಮ್ಮ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಪಾರುಮಾಡಬಹುದಾದ ಸರಳ ಸೂತ್ರಗಳು!

ಪೋಷಕರೇ ನಿಮ್ಮ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಪಾರುಮಾಡಬಹುದಾದ ಸರಳ ಸೂತ್ರಗಳು

Image result for child abuse india

೧)ನಿಮ್ಮ ಹೆಣ್ಣು ಮಗುವು ತಂದೆ ತಾಯಿ ಅಜ್ಜ ಅಜ್ಜಿಯಂದರನ್ನು ಹೊರತು ಪಡಿಸಿ ಯಾರ ತೊಡೆಯ ಮೇಲೂ ಕುಳಿತುಕೊಳ್ಳದಂತೆ ಎಚ್ಚರ ವಹಿಸಿ.

೨)ಮಕ್ಕಳು ೨- ೩ ವರ್ಷದವರಾದನಂತರ ಅವರ ಮುಂದೆ ವಸ್ತ್ರ ಬದಲಿಸಬೇಡಿ. ಸಾಧ್ಯವಾದಲ್ಲಿ ಮಕ್ಕಳನ್ನು ಕೋಣೆಯಿಂದ ಹೊರಕಳಿಸಿ ಅಥವಾ ನೀವೇ ಪ್ರತ್ಯೇಕ ಕೊಠಡಿಯಲ್ಲಿ ಬಟ್ಟೆ ಬದಲಾಯಿಸಿ.

೩) ಯಾವುದೇ ಕಾರಣಕ್ಕೂ ಯಾರಿಗೆ ಆಗಲಿ ನಿಮ್ಮ ಮಗುವನ್ನು ನನ್ನ ಗಂಡ/ ನನ್ನ ಹೆಂಡತಿ ಎಂದು ಸಂಭೋದಿಸುವುದಕ್ಕೆ ಅವಕಾಶ ನೀಡಬೇಡಿ.

೪) ನಿಮ್ಮ ಮಕ್ಕಳು ಹೊರಗೆ ಆಟವಾಡಲು ಹೋದಾಗ ಅವರು ಏನು ಹಾಗು ಯಾರ ಜೊತೆ ಆಟವಾಡುತ್ತಿದ್ದಾರೆ  ಎಂಬುದರ ಮೇಲೆ ಗಮನವಿಡಿ.

೫) ನಿಮ್ಮ ಮಕ್ಕಳಿಗೆ ಇಷ್ಟವಾಗದ ವ್ಯಕ್ತಿಯ ಬಳಿ ಮಾತನಾಡಲು ಅಥವಾ ಸಮಯ ಕಳೆಯಲು ಒತ್ತಡ ಹೇರಬೇಡಿ ಹಾಗೆಯೇ ನಿಮ್ಮ ಮಗುವು ಧಿಡೀರನೆ ಯಾರನ್ನಾದರೂ ಬಹಳ ಹಚ್ಚಿಕೊಂಡರೆ ಅದರ ಬಗ್ಗೆ ಗಮನ ಹರಿಸಿ.

Image result for child abuse

೬) ಬಹಳ ಚೂಟಿಯಾಗಿ/ಲವಲವಿಕೆಯಿಂದಿರುವ ಮಗುವು ಒಮ್ಮೆಯೇ ಎಲ್ಲ ಅದರ ಚಟುವಟಿಕೆಗಳಿಂದ ದೂರ ಉಳಿದಲ್ಲಿ ಸಮಾಧಾನದಿಂದ ಮಗುವಿನ ಬಳಿ ಕುಳಿತು ಸರಳ ಪ್ರಶ್ನೆಗಳಿಂದ ಅವರ ಮನಸ್ಸಿನಲ್ಲಿ ಏನಿದೇ ಎಂದು ತಿಳಿದು ಪರಿಹರಿಸಿ.

೭) ಬೆಳೆಯುತ್ತಿರುವ ಮಕ್ಕಳಿಗೆ ಒಳ್ಳೆಯ ಲೈಂಗಿಕ ಪ್ರಜ್ಞೆ ಹಾಗು ಲೈಂಗಿಕ ಶಿಕ್ಷಣವನ್ನು ನೀಡಿ. ಇಲ್ಲವಾದಲ್ಲಿ  ದೋಷಯುಕ್ತ ಸಮಾಜವು ಅವರು ತಪ್ಪು ಹಾದಿ ಹಿಡಿಯುವಂತೆ ಪ್ರಚೋದಿಸಬಹುದು. ಅವರು ಕೇಳುವ ಲೈಂಗಿಕತೆ ಕುರಿತಾದ ಪ್ರಶ್ನೆಗಳಿಗೆ ಉತ್ತರವನ್ನು ಅರ್ಥವಾಗುವ ರೀತಿ ಬಿಡಿಸಿ ಹೇಳಿ.

೮) ಹೊಸದಾಗಿ ಖರೀದಿಸಿದ ಆಟದ ಸಾಮಾನು/ ಕಾರ್ಟೂನ್ ಚಿತ್ರಗಳನ್ನು ಮೊದಲು ನೀವು ನೋಡಿ ಅದರಲ್ಲಿ ಏನಾದರೂ ಅಶ್ಲೀಲವಿದಿಯೇ ಎಂಬುದನ್ನು ಪರೀಕ್ಷಿಸಿ ಏನು ಇಲ್ಲವಾದಲ್ಲಿ ಮಕ್ಕಳಿಗೆ ನೋಡಲು ಕೊಡಿ.

೯) ನಿಮ್ಮ ಮಕ್ಕಳ ಸ್ನೇಹಿತರ ತಂದೆ/ತಾಯಿಯರೊಂದಿಗೆ  ನೀವು ಸಂಪರ್ಕದಲ್ಲಿರಿ. ಆಗ ಮಕ್ಕಳು ದಾರಿ ತಪ್ಪಿ ಹೋಗುತ್ತಿದ್ದರೆ ಎಲ್ಲರೂ ಸೇರಿ ಒಟ್ಟಿಗೆ ತಿಳಿಹೇಳಬಹುದು.

Image result for child abuse india

೧೦) ನಿಮ್ಮ ಮಗುವಿಗೆ ೩ ವರ್ಷ ತುಂಬಿದೊಡನೆ ಅವುಗಳ ಗುಪ್ತಅಂಗಗಳ ಸ್ವಚ್ಛತೆ ಹೇಗೆ ಮಾಡಿಕೊಳ್ಳುವುದೆಂದು ಹೇಳಿಕೊಡಿ ಹಾಗು ನಿಮ್ಮನ್ನು ಹೊರತಾಗಿ ಇತರರು ನಿಮ್ಮ ಮಗುವಿನ ದೇಹವನ್ನು ಮುಟ್ಟಲು ಬಿಡಬೇಡಿ.

೧೧) ಯಾವುದಾದರೂ ಸಂಗೀತ, ಚಲನಚಿತ್ರ, ವ್ಯಕ್ತಿಗಳು, ಪರಿಸರ ನಿಮ್ಮ ಮಗುವಿಗೆ ತಪ್ಪು ಮೆಸೇಜ್ ನೀಡುತ್ತದೆಯೆಂದು ನಿಮಗನಿಸಿದರೆ ಮಕ್ಕಳ ಸಹಿತ ನೀವೂ ಅದರಿಂದ ದೂರವಿರಿ.

೧೨) ನಿಮ್ಮ ಮಗು ಯಾರೊಬ್ಬರ ಬಗ್ಗೆ ದೂರು ಸಲ್ಲಿಸಿದ್ದಲ್ಲಿ ಗಮನವಿಟ್ಟು ಕೇಳಿ. ಒಂದೊಮ್ಮೆ ಅದರಲ್ಲಿ ಸತ್ಯಾಂಶವಿದ್ದಲ್ಲಿ ತತ್ತಕ್ಷಣ ಕ್ರಮವನ್ನು ತೆಗೆದುಕೊಳ್ಳಿ.

ನೆನಪಿಡಿ  ಮಕ್ಕಳ ಮನಸ್ಸು ಗಾಜಿನ ಕನ್ನಡಿತರಹ ಚೂರು ಗಾಯವಾದರೂ ಅದರ ಛಾಯೆ ಜೀವನ ಪೂರ್ತಿ ಹಾಗೆ ಉಳಿದು ಹೋಗುತ್ತದೆ. ” ಬೆಳೆಯುವ ಸಿರಿ ಮೊಳಕೆಯಲ್ಲಿ” ಅನ್ನುವ ಹಾಗೆ ಚಿಕ್ಕ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿದ್ದಲ್ಲಿ ಅವರು ಉತ್ತಮ ಪ್ರಜೆಯಾಗಿ ರೂಪುಗೊಳ್ಳುವದರಲ್ಲಿ ಸಂಶಯವೇ ಇಲ್ಲ. ಇಲ್ಲವಾದಲ್ಲಿ ಮಿಂಚಿ ಹೋದ ಕಾಲಕ್ಕೆ ಎಷ್ಟೇ ಚಿಂತಿಸಿದರೂ ಫಲವಿಲ್ಲದಂತಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top