fbpx
Awareness

ನಾರ್ವೆ ದೇಶದ ಸೆರೆಮನೆಗಳಲ್ಲಿ ಬಾಗಿಲುಗಳೇ ಇಲ್ಲ!!

ನಾರ್ವೆ ಕೈದಿಯರದ್ದು ರಾಜ ವೈಭೋಗ.ನಮ್ಮ ದೇಶದಲ್ಲಿರುವ ತರಹ ‘ಶಿಕ್ಷೆಯೇ ಅಪರಾಧಕ್ಕೆ ಪರಿಹಾರ ‘ಎಂಬ ನಂಬಿಕೆಯ ಬದಲು ಅಲ್ಲಿ ‘ಅವರು ಮಾಡಿದ ತಪ್ಪಿನ ಅರಿವು ಅವರಿಗಾದಾದ್ರೆ ಅವರು ತಿದ್ದಿಕೊಂಡು ನಡೆಯುತ್ತಾರೆ , ಆದರಿಂದ ಅವರಿಗೆ ತಿಳಿವಳಿಕೆ ನೀಡಬೇಕು , ಯಾವದು ತಪ್ಪು ಯಾವುದು ಸರಿ ಎಂದು ಅರಿವು ಮೂಡಿಸಬೇಕು’ ಎಂದು ಅವರು ನಂಬಿದ್ದಾರೆ. ಈ ಜೈಲಿಗಳ ರೀತಿಯೇ ಬೇರೆ .

Image result for norway humane prison

ಇಲ್ಲಿನ ಖೈದಿಗಳಿಗೆ ಸಕಲ ಸೌಲಭ್ಯಗಳು  ಇರುತ್ತದೆ. ಇಲ್ಲಿ ಒಬ್ಬ ಮನುಷ್ಯನ ಸ್ವತಂತ್ರ  ಕಿತ್ತುಕೊಳ್ಳುವುದೇ ಅತ್ಯಂತ  ಕಠಿಣ ಶಿಕ್ಷೆ ಎಂದು ಪರಿಗಣಿಸುತ್ತಾರೆ . ಇಲ್ಲಿ 21  ವರ್ಷಗಳ ಸಜೆಯೇ ಗರಿಷ್ಟ .ಆತ ಕೊಲೆ ಮಾಡಿದ್ದರು , ಕಳ್ಳತನ ಮಾಡಿದ್ದರು , ಭಯೋತ್ಪದಕನಾಗಿದ್ದರು ಸಹ ಅವನಿಗೆ ಮರಣ ದಂಡನೆ ನೀಡುವುದಿಲ್ಲ , ಬದಲಾಗಿ ಗರಿಷ್ಟ 21  ವರ್ಷದ ಸಜೆಯನ್ನು ಕೊಡುತ್ತಾರೆ .

Image result for norway prison

ಮರಣದಂಡನೆ ನಾರ್ವೆ ದೇಶದಲ್ಲಿ ಕಾನೂನು ಬಾಹಿರ.ಇಲ್ಲಿನ ಕೈಧಿಗಳು ಹೇಗೆ ಸರಿಯಾಗುತಾರೆ ಇಷ್ಟೆಲ್ಲಾ ಐಷಾರಾಮದ ಜೀವನವನ್ನು ಕೊಟ್ಟರೆ ಎನ್ನುತೀರಾ ? ಇಲ್ಲಿ ಒಂದು ಬಾರಿ ಬಿಡುಗಡೆಯಾದ ವ್ಯಕ್ತಿ ಶೇಕಡಾ 80 ರಷ್ಟು ಬಾರಿ ಮಾತೇನು ತಪ್ಪು ಮಾಡುವುದಿಲ್ಲ . ಅಂದರೆ ಶೇಕಡಾ 20 ರಷ್ಟು ಜನ ಮಾತ್ರ ಎರಡನೇ ಬಾರಿ ತಪ್ಪು ಮಾಡಿ ಶಿಕ್ಷೆಗೊಳಗಾಗುತಾರೆ. ಅದೇ ಅಮೇರಿಕಾ ದಲ್ಲಿ ಶೇಕಡಾ 76 ರಷ್ಟು ಜನ 2  ನೇ ಯಾ ಬಾರಿ ತಪ್ಪು ಮಾಡಿ ಶಿಕ್ಷೆ ಪಡಿಯುತ್ತಾರೆ.

Image result for norway prison

2014  ರಲ್ಲಿ ನಾರ್ವೆ ಜೈಲ್ನಲ್ಲಿ 4000  ಕ್ಕೂ ಕಮ್ಮಿ ಕೈದಿಗಳಿದ್ದರು . ಈ ರೀತಿಯ ಶಿಕ್ಷೆಯ ಪದ್ದತಿಯನ್ನು ವಿಶ್ವದ ಸಾಕಷ್ಟು ದೇಶಗಳು ಟೀಕಿಸಿದ್ದಾರೆ, ಆದರೆ ನಾರ್ವೆ ಈ ಪದ್ಧತಿಯನ್ನೇ ಬಳಸಿ ಯಶಸ್ಸನ್ನು ಪಡೆದಿದೆ. ಇಲ್ಲಿ ಒಮ್ಮೆ ಬಿಡುಗಡೆಯಾದ ವ್ಯಕ್ತಿ ಗೆ ಸರ್ಕಾರ ಉತ್ತಮ ವ್ಯಕ್ತಿಯಾಗಿ ಬಾಳಲು ಸಕಲ ಸಿದ್ದತೆಯನ್ನು ಮಾಡಿಕೊಳ್ಳುತದೆ . ಇದನು ವಿಶ್ವದ ಅತಿ ಸುಂದರ ಜೈಲ್ ಎಂದು ವರ್ಣಿಸಿದವರು ಉಂಟು . ಒಟ್ಟಿನಲ್ಲಿ ಕೈದಿಗಳನ್ನು ಮನುಷ್ಯರನ್ನಾಗಿ ಮಾಡುವಲ್ಲಿ ನಾರ್ವೆ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳುತಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top