fbpx
ತಂತ್ರಜ್ಞಾನ

ವಾಟ್ಸ್ ಆಪ್ ಹೊಸ ಸ್ಟೇಟಸ್ ಫೀಚರ್ ಅಪ್ ಡೇಟ್ ಮಾಹಿತಿ

ನ್ಯೂಯಾರ್ಕ್: ವಾಟ್ಸ್ ಆಪ್ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ಗಳಿಗೆ ಕಾಣುವಂತೆ ಫೋಟೋಗಳು ಹಾಗೂ ವೀಡಿಯೋಗಳನ್ನು ತಮ್ಮ ಸ್ಟೇಟಸ್ ನಲ್ಲೇ ಅಪ್ ಲೋಡ್ ಮಾಡಲು ಅನುವು ಮಾಡಿಕೊಡುವಂತಹ ಹೊಸ ವಾಟ್ಸ್ ಆಪ್ ಹೊಸ ಫೀಚರ್ ಇದೀಗ ಎಲ್ಲಾ ವಾಟ್ಸ್ ಆಪ್ ಬಳಕೆದಾರರಿಗೆ ಲಭ್ಯವಿದೆ. ಈ ಫೀಚರ್ ಆಂಡ್ರಾಯ್ಡ್ ಐಒಎಸ್ ಮತ್ತು ವಿಂಡೋಸ್ ಸ್ಮಾರ್ಟ್ಫೋನ್ ಗಳಲ್ಲಿ ಈ ವೈಶಿಷ್ಟ್ಯತೆ ಲಭ್ಯವಿದೆ. ಈ ಫೀಚರನ್ನು ಯಾರು ಕೂಡ ಆಯಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಅಪ್ ಡೇಟ್ ಮಾಡಬೇಕಿಲ್ಲ, ಅದು ಅ ಆಪ್ ನಲ್ಲಿ ಲಭ್ಯವಿದೆ. ಕಾಂಟ್ಯಾಕ್ಟ್

 

ಸ್ಮಾಟ್ ಸ್ಟೇಟಸ್ ಅಪ್ಡೇಟ್ ಮಾಡುವುದರ ಮಾಹಿತಿ

ಅಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸ್ ಆಪ್ ತೆರೆದ ಕೂಡಲೇ ಚಾಟ್ ಪಕ್ಕದಲ್ಲಿ ಸ್ಟೇಟಸ್ ಎಂಬ ಆಯ್ಕೆ ಲಭ್ಯವಿದೆ. ಈ ಮೊದಲ ಕಾಂಟ್ಯಾಕ್ಟ್ ಎನ್ನುವ ಆಯ್ಕೆ ಇತ್ತು. ಇದೀಗ ಕಾಂಟ್ಯಾಕ್ಟ್ ಜಾಗದಲ್ಲಿ ಸ್ಟೇಟಸ್ ಆಯ್ಕೆ ಕಾಣಿಸುತ್ತದೆ.

ಸ್ಟೇಟಸ್ ಟಚ್ ಮಾಡಿದರೆ ಕೂಡಲೇ ಸ್ಟೇಟಸ್ ಅಪ್ಡೇಟ್ಸ್ ಮಾಡಲು ಫೋಟೊ ಗ್ಯಾಲರಿ ಓಪನ್ ಆಗುತ್ತದೆ. ನಿಮ್ಮ ಫೋನ್ ನಲ್ಲಿ ಸೇವ್ ಆಗಿ ಅಪ್ಡೇಟ್ ಮಾಡಬಹುದು, ಅದಲ್ಲದೇ ನಿವೇ ವಿಡಿಯೋ ರೆಕಾರ್ಡ್ ಮಾಡಿಯೋ ಸೆಲ್ಫಿ ಕ್ಲಿಕ್ ಮಾಡಿಯೋ ಲೈವ್ ಸ್ಟೇಟಸ್ ಅಪ್ಡೇಟ್ ಮಾಡಬಹುದಾಗಿದೆ.

ನೀವು ಸ್ಟೇಟಸ್ ಅಪ್ಡೇಟ್ ಮಾಡಿದ ಕೂಡಲೇ ನಿಮ್ಮ ಸಂಪರ್ಕದಲ್ಲಿ ಇರುವವರಿಗೆ ನೀವು ಅಪ್ಡೇಟ್ ಮಾಡಬಹುದಾಗಿದೆ. ಇನ್ನೋಂದು ವಿಶೇಷವೆನೆಂದರೆ ನಿಮ್ಮ ಸಂಪರ್ಕ ದಲ್ಲಿರುವ ಸ್ನೇಹಿತರು ಯಾರೇ ಸ್ಟೇಟಸ್ ಅಪ್ಡೇಟ್ ಮಾಡಿದರೂ ನಿಮಗೆ ಅವರ ಸ್ಟೇಟಸ್ ಗೋಚರಿಸುತ್ತದೆ. ಯಾರೇಲ್ಲ ನಿಮ್ಮಸ್ಟೇಟಸ್ ನೋಡಿದರು ಎಂಬ ಮಾಹಿತಿ ನಿಮಗೆ ತಿಳಿಯುತ್ತದೆ.

ನೀವು ಅಪ್ಡೇಟ್ ಮಾಡಿದ ಸ್ಟೇಟಸ್ ಮಾಹಿತಿ 24 ಗಂಟೆಗಳು ಮಾತ್ರ ಕಾಲವಕಾಶವಿರುತ್ತದೆ. ನಂತರ ಟೈಮ್ ಮುಗಿದ ಮೇಲೆ ಸ್ಟೇಟಸ್ ಹಳಿಸಿಹೊಗುತ್ತದೆ.

ಸ್ಟೇಟಸ್ ಪ್ರೈವೆಸಿ ಸೆಟ್ಟಿಂಗ್ನಲ್ಲಿ ಬದಲಾವಣೆ ಮಾಡುವ ನಿಮ್ಮ ಸ್ಟೇಟಸ್ ಯಾರಿಗೆಲ್ಲ ಕಾಣಬೇಕು ಎಂದು ನೀವೇ ನಿರ್ಧರಿಸಬಹುದು. ಈ ಸೆಟ್ಟಿಂಗ್ ನಲ್ಲಿ ಮೂರು ಆಯ್ಕೆಗಳಿರುತ್ತವೆ.

*ಮೈ ಕಾಂಟ್ಯಾಕ್ಟ್ ನಿಮ್ಮ ಫೋನ್ ನಲ್ಲಿ ಸೇವ್ ಆಗಿರುವ ಎಲ್ಲ ಸಂಪರ್ಕ ಸಂಖ್ಯೆಗಳಿಗೆ ಮಾತ್ರ ನಿಮ್ಮ ಸ್ಟೇಟಸ್ ಕಾಣುತ್ತದೆ.

*ಮೈ ಕಾಂಟ್ಯಾಕ್ಟ್ ಎಕ್ಸೆಪ್ಟ್ – ನಿಮ್ಮ ಸ್ಟೇಟಸ್ ಯಾರಿಗೆ ಮಾತ್ರ ಕಾಣಬೇಕು ? ಯಾರಿಗೆ ಕಾಣಬಾರದು ಎಂಬುದನ್ನು ನೀವೇ ನಿರ್ಧರಿಸಬಹುದು. ಇಲ್ಲಿ ನೀವು ಆಯ್ಕೆ ಮಾಡುವ ನಿರ್ದಿಷ್ಟ ಸಂಪರ್ಕ ಸಂಖ್ಯೆಗೆ ಮಾತ್ರ ನಿಮ್ಮ ಸ್ಟೇಟಸ್ ಕಾಣದೇ ಇರುವಂತೆ ಮಾಡಬಹುದು.

*ಒನ್ಲೀ ಶೇರ್ ವಿತ್ – ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವ ಕೆಲವರೊಂದಿಗೆ ಮಾತ್ರ ನಿಮ್ಮ ಸ್ಟೇಟಸ್ ಶೇರ್ ಮಾಡಬಹುದಾಗಿದೆ.

ಒಬ್ಬರ ಸ್ಟೇಟಸ್ ಅಪ್ ಡೇಟ್ ಗೆ ರಿಪ್ಲೈ ಮಾಡುವ ಆಪ್ ಕೂಡ ಇದೆ. ನಿಮ್ಮ ಕಾಂಟ್ಯಾಕ್ಟ್ ಗಳು ಕಾಣಿಸುವಲ್ಲಿ ನೀಲಿ ವೃತ್ತಗಳಿಂದ್ದರೆ ಅವರ ಸ್ಟೇಟಸ್ ಅಪ್ ಡೇಟ್ ಇದೆಯೆಂದು ಅರ್ಥ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top