fbpx
ಮಾಹಿತಿ

ಬಿಲಿಸಿನ ಬೇಗೆಯಿಂದ ಹೊರಬರಲು ಇಲ್ಲಿದೆ 500 ರುಪಾಯಿಯ AC!!

ಇಲ್ಲಿದೆ ನೋಡಿ ಬಡವರ AC!!

ಈ AC-ಯಾ ಬೆಲೆ ೫೦೦ ರೂಪಾಯಿ ಹಾಗು ಇದಕ್ಕೆ ವಿದ್ಯುತ್ತಿನ ಅವಶ್ಯಕತೆ ಇಲ್ಲ . ಆಶ್ಚರ್ಯವಾಗುತ್ತಿದೆಯೇ ? ಇಲ್ಲಿದೆ ನೋಡಿ ಇದರ ಕಥೆ . ಸದ್ಯಕ್ಕೆ ಇದು , ಬಾಂಗ್ಲಾದೇಶದಲ್ಲಿ ಚಾಲತಿಯಲ್ಲಿದೆ . ನ್ಯೂ ಯಾರ್ಕ್ ಮೂಲದ ಒಂದು ಅಡ್ವರ್ಟೈಸಿಂಗ್ ಸಂಸ್ಥೆ ಗ್ರೇಯಾ ಬಾಂಗ್ಲಾದೇಶದ ಶಾಖೆ ಗ್ರೇ ಢಾಕಾ ಮತ್ತು ಗ್ರಾಮೀಣ್ ಇಂಟೆಲ್ ಸೋಶಿಯಲ್ ಬಿಸಿನೆಸ್ ಲಿಮಿಟೆಡ್ ಸೇರಿ ಈ ಪ್ರಕೃತಿ ಸ್ನೇಹಿ AC ಯನ್ನು ಬಾಂಗ್ಲಾದೇಶದ ಬಡ ಜನತೆಗೆ ಈ ಬೇಸಿಗೆಯ ಉಡುಗೊರೆಯಾಗಿ ನೀಡಿದ್ದಾರೆ . ಬಾಂಗ್ಲಾದೇಶದಲ್ಲಿ ಬೇಸಿಗೆಯಲ್ಲಿ ತಾಪಮಾನವು 45 ಡಿಗ್ರಿ ಯನ್ನು ಮೀರುತ್ತದೆ .

Credits: Weekend Leader

ಆಶಿಶ್ ಪಾಲ್ ನ ಸಂಶೋಧನೆ AC. ಕಿಟಕಿಗೆ ಜೋಡಿಸಬಹುದಾದ ಈ ಸಾಧನವನ್ನು ಪರಿಷ್ಕರಿಸಿದ ಪ್ಲಾಸ್ಟಿಕ್ ಬಾಟಲಿ ಗಳಿಂದ ಮಾಡಬಹುದು . ಹಾಗು ಇದು ತಾಪಮಾನವನ್ನು 5 ಡಿಗ್ರಿ ಯ ವರೆಗೆ ಕಡಿಮೆ ಮಾಡುತ್ತದೆ .

 

Credits: Weekend Leader

ಈ ಯೋಚನೆ ಇವರ ತಲೆಗೆ ಬಂದದ್ದು ಅವನ ಮಗನ ಶಿಕ್ಷಕನ ಪಾಠವನ್ನು ಕೇಳಿದಾಗ . ಅದನ್ನು ಕೇಳಿ 2014 ರಲ್ಲಿ ಈ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದರು . 2015 ರಲ್ಲಿ ಇದರ ಮಾದರಿ ರೂಪವನ್ನು ಸಿದ್ಧ ಪಡಿಸಿದರು . ಈ ಸಾಧನದ ಹಿಂದಿರುವ ತತ್ವ ಅಡೈಬ್ಯಾಟಿಕ್ ಕೂಲಿಂಗ್ . ಅಂದರೆ ಗಾಳಿಯ ಒತ್ತಡವನ್ನು ಪರಿಮಾಣ ವಿಸ್ತರಣೆ ಇಂದ ಬದಲಿಸಿ ತಾಪಮಾನವನ್ನು ಕಮ್ಮಿ ಮಾಡುವುದು . ಇದರಲ್ಲಿ ಪರಿಷ್ಕರಿಸಿದ ಎರಡು ಲೀಟರ್ ಪ್ಲಾಸ್ಟಿಕ್ ಬಾಟಲಿ ಗಳನ್ನು ಅರ್ಧಕ್ಕೆ ಕತ್ತರಿಸಿ ಜೋಡಿಸಲಾಗುತ್ತದೆ .

Credits: Weekend Leader

ಇಲ್ಲಿಯವರೆಗೆ 25,000 ಜನ ಈ ಕೂಲರ್ ಅನ್ನು ಮಾಡುವ ವಿಧಾನವನ್ನು ಅಂತರ್ಜಾಲದಿಂದ ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂದು ಗ್ರೇ ಢಾಕಾ ಹೇಳುತ್ತದೆ . ಆ ಸಂಸ್ಥೆಗೆ ಇದನ್ನು ವಾಣಿಜಿಯೀಕರಣಕ್ಕೆ ಮಾಡಿದ್ದಲ್ಲದ್ದರಿಂದ ಇದರ ಬಗ್ಗೆ ಅವರಿಗೆ ಖುಷಿ ಇದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top