fbpx
ಮಾಹಿತಿ

ರದ್ದಾದ ಹಳೆ ನೋಟ್ ಇದ್ದವರು ಇನ್ನುಮುಂದೆ ಜೈಲು ಪಾಲು!!

ನೋಟ್ ಬ್ಯಾನ್ ಮಾಡಿ ಶ್ರೀಮಂತರ ನಿದ್ದೇ ಕೆಡಿಸಿದ್ದ ಕೇಂದ್ರ ಸರ್ಕಾರ ಈಗ ಅವರ ನೆಮ್ಮದಿಯನ್ನು ಹಾಳು ಮಾಡಲು ಪ್ಲಾನ್ ಮಾಡಿಕೊಂಡಿದೆ. ರದ್ದಾದ ೫೦೦ ಹಾಗೂ ೧೦೦೦ ಮುಖಬೆಲೆಯ ನೋಟುಗಳು ನಿಮ್ಮಲ್ಲಿ ಸಿಕ್ಕರೆ ದಂಡ ಫಿಕ್ಸ್.
ಒಬ್ಬ ಮನುಷ್ಯನ ಬಳಿ ೧೦ ಕ್ಕಿಂತ ಹೆಚ್ಚು ರದ್ದಾದ ನೋಟುಗಳು ಇದ್ದರೆ ದಂಡ ಗ್ಯಾರಂಟಿ. ಒಂದು ವೇಳೆ ಹಳೆ ನೋಟುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿದವರು ಗರಿಷ್ಠ ೨೫ ನೋಟ್‌ಗಳನ್ನು ಮಾತ್ರ ಹೊಂದಿರಬಹುದು. 
Image result for note ban
ಸರ್ಕಾರ ಡಿಸೆಂಬರ್‌ನಲ್ಲಿ ರದ್ದು ಮಾಡಿರುವ ನೋಟುಗಳು ಸಿಕ್ಕಲ್ಲಿ ದಂಡ ವಿಧಿಸುವ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದಾರೆ. ಇನ್ನು ಈ ಕಾಯ್ದೆ ಜಾರಿಗೆ ಬರಲಿದ್ದು, ೫೦೦-೧೦೦ ಹೊಂದಿದವರ ವಿರುದ್ಧ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಕೇಂದ್ರ ಪ್ಲಾನ್ ಮಾಡಿಕೊಂಡಿದೆ.
ಒಬ್ಬನ ಬಳಿ ಹಳೆಯ ನೋಟುಗಳು ೧೦ಕ್ಕಿಂತ ಹೆಚ್ಚಿದಲ್ಲಿ ಅದು ಅಪರಾದ ಎಂದು ಪರಿಗಣನೆ ಆಗುತ್ತದೆ. ಇದು ಅಪರಾದವೇ ಎಂದು ರುಜುವಾತದಲ್ಲಿ ೧೦ ಸಾವಿರ ದಂಡ, ನೋಟಿನ ಮೌಲ್ಯದ ೫ ಪಟ್ಟು ಹಣವನ್ನು ದಂಡದ ರೂಪದಲ್ಲಿ ಸರ್ಕಾರಕ್ಕೆ ನೀಡಬೇಕಾಗುತ್ತದೆ.
Image result for jail cell india
ನೋಟ್ ನಿಷೇಧದ ವೇಳೆ ವಿದೇಶಿ ಪ್ರವಾಸ ಮಾಡಿದ ವ್ಯಕ್ತಿಗೆ ಕೊಂಚ ರಿಯಾಯಿತಿ ನೀಡಲಾಗಿದ್ದು, ಅವರು ಅಗತ್ಯ ದಾಖಲೆಗಳನ್ನು ತೊರಿಸಿ ಮಾ. ೩೧ರ ವರೆಗೆ ತಮ್ಮ ಖಾತೆಯಲ್ಲಿ ಜಮೆ ಮಾಡಿಸಬಹುದು. ತಮ್ಮ ಬಳಿಯಿರುವ ನೋಟ್‌ಗಳನ್ನು ಬದಲಾಯಿಸಿ ಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿದ್ದಲ್ಲಿ ಅವರಿಗೂ ದಂಡ ವಿಧಿಸಾಲಗುತ್ತದೆ. ದಂಡದ ಪ್ರಮಾಣ ೫ ಸಾವಿರ ಅಥವಾ ಜಮೆಯಾದ ಹಣದ ಐದು ಪಟ್ಟು. ಈ ಎರಡಲ್ಲಿ ಯಾವುದು ದೊಡ್ಡು ಎಂದಾಗುತ್ತದೇಯೋ ಆ ಮೊತ್ತವನ್ನೇ ಭರಿಸಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top