fbpx
ಇತರೆ

ಶಾಕಿಂಗ್ ನ್ಯೂಸ್ : ರಿಯಾಲಿಟಿ ಶೋನಲ್ಲಿ ರೇಪ್ ಮತ್ತು ಕೊಲೆ , ನಿಜ ಜೀವನದ ಹಂಗರ್ ಗೇಮ್‍

ನಿಜ ಜೀವನದ ಹಂಗರ್ ಗೇಮ್‍, ರಷ್ಯಾ ವೆಬ್‍ಸೈಟ್‍ನಲ್ಲಿ ದಿನದ 24 ಗಂಟೆ ನೇರ ಪ್ರಸಾರ

ಪ್ರತಿಯೊಬ್ಬರ ಕೈಯಲ್ಲೂ ಮಾರಕಾಸ್ತ್ರ.. ಪ್ರತಿ ಮೂಲೆಯಲ್ಲೂ ಕ್ಯಾಮರಾ.. ಆ ಗುಂಪಿನಲ್ಲಿ ಒಬ್ಬೊಬ್ಬರದೂ ಒಂದೊಂದು ಕರಾಳ ಇತಿಹಾಸ.. ಹೆಂಗಸರೂ ಆ ರೇಸ್‍ನಲ್ಲಿ ಇರುತ್ತಾರೆ.. ಅಂತಹ ಹತ್ತಿಪ್ಪತ್ತು ಜನರನ್ನು ಒಂದು ದ್ವೀಪದಲ್ಲಿ ಬಿಟ್ಟು ಅವರ ಪ್ರತಿಯೊಂದು ನಡೆಯನ್ನು ನೇರ ಪ್ರಸಾರ ಮಾಡುವ ರಿಯಾಲಿಟಿ ಶೋ ಸಿನಿಮಾಗಳಲ್ಲಷ್ಟೇ ನೋಡಿರುತ್ತಿರಿ.

ಇದೀಗ ಇಂತಹ ರಿಯಾಲಿಟಿ ಕಾರ್ಯಕ್ರಮವನ್ನು ರಷ್ಯಾದ ಟೀವಿ ಚಾನೆಲ್‍ ಪ್ರಸಾರ ಮಾಡಲಿದೆ. ಅತ್ಯಂತ ಆಘಾತಕಾರಿ ಮತ್ತು ತಲ್ಲಣಗೊಳಿಸುವ ವಿಷಯ ಏನಪ್ಪಾ ಅಂದರೆ ನಿಜ ಜೀವನದ ಹಂಗರ್ ಗೇಮ್‍ ಇದಾಗಿದ್ದು, ಇಲ್ಲಿ ಒಬ್ಬರನೊಬ್ಬರು ಕೊಲ್ಲುವುದು, ರೇಪ್‍ ಮಾಡುವುದನ್ನು ಖುಲ್ಲಂ ಖುಲ್ಲಾ ತೋರಿಸಲಿದೆ.

ಗೇಮ್‍-2 ಹೆಸರಿನ ಈ ರಿಯಾಲಿಟಿ ಶೋ ಸೈಬಿರಿಯಾದ ದ್ವೀಪವೊಂದರಲ್ಲಿ ಚಿತ್ರಿಕರಿಸಲಾಗುತ್ತಿದೆ. ಇದರಲ್ಲಿ 30 ಮಂದಿ ಸ್ಪರ್ಧಿಗಳಿದ್ದಾರೆ. ಪ್ರತಿಯೊಬ್ಬರ ಕೈಯಲ್ಲೂ ಚಾಕು ಸೇರಿದಂತೆ ಮಾರಕಾಸ್ತ್ರಗಳು ಇರುತ್ತವೆ. 9 ತಿಂಗಳ ಈ ರಿಯಾಲಿಟಿ ಶೋನಲ್ಲಿ ತೋಳ, ಕರಡಿ, ಸೇರಿದಂತೆ ಕಾಡು ಪ್ರಾಣಿಗಳ ಜೊತೆ ಹೋರಾಡುವ ಜೊತೆಗೆ ಮನುಷ್ಯ- ಮನುಷ್ಯರೂ ಕಚ್ಚಾಡಲಿದ್ದಾರೆ.

ಈ ದ್ವೀಪದಲ್ಲಿ ಬೇಸಿಗೆ ಕಾಲದಲ್ಲಿ 35ರಿಂದ ಚಳಿಗಾಲದಲ್ಲಿ -50 ಡಿಗ್ರಿ ಸೆಲ್ಸಿಯಂ ಉಷ್ಣಾಂಶ ಇರಲಿದೆ. ಸ್ಪರ್ಧಿಗಳಿಗೆ ಚಳಿಗಾಲದಿಂದ ರಕ್ಷಿಸಿಕೊಳ್ಳಲು ಮಾತ್ರ ವಸ್ತ್ರ ನೀಡಲಾಗಿರುತ್ತದೆ.

ನೊವೊಸಿಬಿರಿಕ್‍ ಎಂಟರ್‍ ಪ್ರೈನರ್‍ ಯೆವೆಗ್ನೆ ಪ್ಯಾಟ್ಕೊವಸ್ಕಿ ಸಂಸ್ಥೆ ರಿಯಾಲಿಟಿ ಶೋ ಹಿಂದಿನ ಮಾಸ್ಟರ್‍ ಮೈಂಡ್‍ ಆಗಿದ್ದು, ದ್ವೀಪದಲ್ಲಿ ಸುಮಾರು 2000 ಕ್ಯಾಮರಾ ಅಳವಡಿಸಲಾಗಿದ್ದು, ಇಂಗ್ಲೀಷ್ ಸೇರಿದಂತೆ ನಾನಾ ಭಾಷೆಗಳಲ್ಲಿ ವೆಬ್‍ಸೈಟ್‍ ಮೂಲಕ ದಿನದ 24 ಗಂಟೆ ನೇರ ಪ್ರಸಾರವಾಗಲಿದೆ.

ರಿಯಾಲಿಟಿ ಶೋ ಕುರಿತು ಪತ್ರಿಕಾಗೊಷ್ಠಿಯಲ್ಲಿ ನಿಯಮಗಳನ್ನು ಬಹಿರಂಗಪಡಿಸಿದ ಆಯೋಜಕರು, ಇಲ್ಲಿ ಎಲ್ಲವೂ ಮುಕ್ತ. ಜಗಳ, ಮದ್ಯಪಾನ, ಕೊಲೆ, ಅತ್ಯಾಚಾರ, ಧೂಮಪಾನ.. ಏನು ಬೇಕಾದರೂ ಮಾಡಬಹುದು ಎಂದಿದ್ದಾರೆ.

ದೈಹಿಕ ಹಲ್ಲೆ ತಡೆಯೊಲ್ಲವೇ ಎಂಬ ಪ್ರಶ್ನೆಗೆ `ಇಲ್ಲ’ ಎಂಬ ಉತ್ತರ ಬಂದಿದ್ದು, ನಾವು ಯಾವುದೇ ಸಮಯದಲ್ಲೂ ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ ಸ್ಪರ್ಧಿಗಳು ರಷ್ಯಾದ ಕ್ರಿಮಿನಲ್‍ ನಿಯಮದ ವಿವರ ನೀಡಲಾಗಿರುತ್ತದೆ. ಇಲ್ಲದಿದ್ದರೆ ಸರಕಾರದ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಧಿಕಾರಿಗಳಿಂದಲೇ ಶಿಕ್ಷೆಗೆ ಗುರಿಯಾಗಲಿದ್ದಾರೆ. ರಿಯಾಲಿಟಿ ಶೋ ಬಗ್ಗೆ ವ್ಯತಿರಿಕ್ತ ಪ್ರತಿಕ್ರಿಯೆ ಬಂದರೂ ಹಿಂಜರಿಯುವುದಿಲ್ಲ ಎಂದು 35 ವರ್ಷದ ಸಂಸ್ಥೆಯ ಮಾಲೀಕ ಪ್ಯಾಟ್ಕೊವಸ್ಕಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top