fbpx
News

ಚಾಲಕನ ಸಮಯ ಪ್ರಜ್ಞೆಯಿಂದ ರೈಲಿನಲ್ಲಿದ್ದವರೆಲ್ಲಾ ಪಾರು

ವಿಜಯಪುರ: ಸಂಭವಿಸಬಹುದಾಗಿದ್ದ ಭಾರೀ ರೈಲು ದುರಂತವೊಂದು ಚಾಲಕನ ಸಮಯ ಪ್ರಜ್ಞೆಯಿಂದಾಗಿ ತಪ್ಪಿದ್ದು, ಅದೃಷ್ಟವಶಾತ್ ರೈಲಿನಲ್ಲಿದ್ದವರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ.

ವಿಜಯಪುರದಿಂದ ಹುಬ್ಬಳ್ಳಿಗೆ ಹೊರಟಿದ್ದ ಪ್ಯಾಸೆಂಜರ್ ರೈಲಿನ ಚಾಲಕ ಹಳಿಯಲ್ಲಿ ಬಿರುಕು ಬಿಟ್ಟಿದ್ದನ್ನು ಗಮನಿಸಿ ರೈಲು ನಿಲ್ಲಿಸಿದ್ದಾರೆ.

ವಿಜಯಪುರ ತಾಲ್ಲೂಕಿನ ಆಲಿಯಾಬಾದ್ ಸಮೀಪದ ಹಳಿಯಲ್ಲಿ ಬಿರುಕು ಕಾಣಿಸಿದೆ. ಸ್ವಲ್ಪ ದೂರದಿಂದಲೇ ಇದನ್ನು ಗಮನಿಸಿದ ಚಾಲಕ ರೈಲನ್ನು ತಕ್ಷಣವೇ ನಿಲ್ಲಿಸಿದ್ದಾರೆ.

ಬಿರುಕು ಬಿಟ್ಟಿದ್ದ ಹಳಿಯನ್ನು ದುರಸ್ತಿಪಡಿಸಿದ ನಂತರ ರೈಲು 45 ನಿಮಿಷ ತಡವಾಗಿ ಹುಬ್ಬಳ್ಳಿಗೆ ಹೊರಟಿದೆ. ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top