ಉದ್ಯೋಗ

HDK cabs ಅಧಿಕೃತ ಘೋಷಣೆ

ನಮ್ಮ ಬೆಂಬಲ HDK ಕ್ಯಾಬ್ಸ್ ಗೆ ಇದರಲ್ಲಿ ರಾಜಕೀಯ ಇಲ್ಲ ಇಂತ ಕೆಲಸ ಯಾರೇ ಮಾಡಿದ್ರು ಬೆಂಬಲ ಕೊಡ್ಬೇಕು

ಓಲಾ ಉಬರ್ ನಿಂದ ಮೊಸ ಹೋಗಿದ್ದ ಚಾಲಕರು ಹಲವಾರು ದಿನಗಳು ಪ್ರತಿಭಟನೆ ನೆಡೆಸಿದರೂ ಈ ಚಾಲಕರ ಸಮಸ್ಯೆಗಳನ್ನು ಕೇಳಿ ಬಗೆಹರಿಸಲು ಓಲಾ,ಉಬರ್ ಸಂಸ್ಥೆಗಳಾಗಲಿ, ಸಾರಿಗೆ ಇಲಾಖೆಯಾಗಲಿ, ಸಾರಿಗೆ ಸಚಿವರಾಗಲಿ, ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ಬರಲಿಲ್ಲ,
ಈ ಸಮಯದಲ್ಲಿ ಚಾಲಕರ ನೆರವಿಗೆ ಬಂದದ್ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಯವರು.
ಅದಾದ ನಂತರ ಅವರು ಸಹ ಅಧಿಕಾರಿಗಳಿಗೆ, ಸಚಿವರಿಗೆ ಮನವಿ ಮಾಡಿದರು, ಏನೂ ಪ್ರಯೋಜನವಾಗಲಿಲ್ಲ. ಚಾಲಕರ ಸಮಸ್ಯೆ ಬಗೆಹರಿಸಲು ಯಾರು ಬಾರದ ಕಾರಣ, ಕುಮಾರಣ್ಣ ಒಂದು ಉತ್ತಮ ನಿರ್ಧಾರಕ್ಕೆ ಬಂದು ಈ ಚಾಲಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೊಸ ಟ್ಯಾಕ್ಸಿ ಆಪ್ ತಯಾರಿಸಿ ಚಾಲಕರಿಗಾಗಿ ಓಲಾ,ಉಬರ್ ನಂತಹದ್ದೇ ಹೊಸ ಸಂಸ್ಥೆ ಸ್ಥಾಪಿಸಲು ಮುಂದಾಗಿದ್ದಾರೆ.
ಈ ಸಂಸ್ಥೆಯು ಚಾಲಕರಿಗೆಂದೆ ಮಾಡಿ ಇದರಲ್ಲಿ ಬರುವ ಲಾಭವನ್ನು ಚಾಲಕರೆ ಅನುಭವಿಸಬೇಕೆಂದು ಆಲೋಚಿಸಿ ಅದೇ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.
ಇದರಿಂದ ಚಾಲಕರಿಗೆ ಅನೇಕ ಸವಲತ್ತು ಗಳನ್ನು ನೀಡುವ ಮೂಲಕ ಚಾಲಕರ ಬಾಳಿನಲ್ಲಿ ಮರುಜೀವ ಮತ್ತು ಸಂತಸ ತುಂಬಲು ಮುಂದಾಗಿದ್ದಾರೆ.
ಈಗಾಗಲೇ ಆಫ್ ಕೆಲಸ ಅಂತಿಮ ಘಟ್ಟ ತಲುಪಿದ್ದು ಆಫೀಸ್ ಮತ್ತು ಅಡ್ಮಿನಿಸ್ಟ್ರೇಷನ್ ವ್ಯವಸ್ಥೆಯ ವಿಚಾರವಾಗಿ ಸೋಮವಾರದಂದು ಪ್ರಮುಖರ ಸಭೆ ಕರೆದಿದ್ದಾರೆ.
ಮತ್ತು ಈ ಸಂಸ್ಥೆಯು ಯುಗಾದಿ ಹಬ್ಬದ ಮೊದಲೇ ಕಾರ್ಯಪ್ರಾರಂಭ ಮಾಡುತ್ತದೆ. ಹೆಚ್ ಡಿ ಕುಮಾರಸ್ವಾಮಿ ಯವರ ವತಿಯಿಂದ ಇದು ಚಾಲಕರಿಗೆ ಯುಗಾದಿ ಹಬ್ಬದ ಉಡುಗೊರೆಯಾಗುತ್ತೆ.

ಚಾಲಕರಿಗೆ ಕುಮಾರಣ್ಣ ನ ನೇತೃತ್ವದಲ್ಲಿ ಬರುತ್ತಿರುವ ಸಂಸ್ಥೆಯ ಬ್ರಾಂಡ್ name “HDK Cabs” ಎಂದು ಅಧಿಕೃತ ವಾಗಿ ಸೂಚಿಸಲಾಗಿದೆ. HDK cabs ಬರಬೇಕು ಎನ್ನುವುದು ಚಾಲಕರ ಒತ್ತಾಯವಾಗಿತ್ತು. ಹಾಗಾಗಿ ಕುಮಾರಸ್ವಾಮಿ ಯವರು ಇಂದು ಸಭೆಯಲ್ಲಿ ಈ ಹೆಸರಿಗೆ ಅನುಮತಿ ನೀಡಿದ್ದಾರೆ.
ಈ ಸಭೆಗೆ ಅನೇಕ ಚಾಲಕರು ಮತ್ತು ಚಾಲಕ ಮುಖಂಡರಾದ ತನ್ವೀರ್ ಪಾಷ, ಚಂದ್ರ ಕುಮಾರ್, ಮಣಿಕಂಠ ವಿ. ಸುಗುಟೂರು ಮಂಜುನಾಥ್, ಅಶೋಕ್ ಗೌಡ, ಸೋಮಶೇಖರ್ ಹೆಚ್.ಇ. ಹಾಗೂ ರಮೇಶ್ ಗೌಡ. ಮತ್ತಿತರು ಹಾಜರಾಗಿದ್ದರು.

ಚಾಲಕರಿಗೆ ಈ ಸಂಸ್ಥೆಯಿಂದ ಸಿಗುವ ಸವಲತ್ತು ಗಳು ಈ ಕೆಳಕಂಡಂತಿವೆ.

೧. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಾರುಗಳ ವಾರ್ಷಿಕ ನಿರ್ವಹಣೆ ಜವಾಬ್ದಾರಿ ಸಂಸ್ಥೆ ನೋಡಿಕೊಳ್ಳುತ್ತದೆ.

* ಕಾರುಗಳಿಗೆ ಕಂಪ್ಲೀಟ್ (ಫುಲ್) ವಾಟರ್ ವಾಶ್,
* ಕಾರುಗಳಿಗೆ ಪ್ರತಿ ಹತ್ತು ಸಾವಿರ ಕಿ.ಮಿ. ಗೆ ಆಯಿಲ್ ಚೇಂಜ್, ಫಿಲ್ಟರ್ ಚೇಂಜ್, (ಆಯಿಲ್ ಸರ್ವೀಸ್).
* ಕಾರುಗಳಿಗೆ ಪ್ರತಿವರ್ಷವೂ ಕಟ್ಟಬೇಕಾದ (approx 20.000) ರೂ ಇನ್ಶೊರೆನ್ಸ್ ಸಂಸ್ಥೆ ಪಾವತಿಸುತ್ತದೆ.
* ಮತ್ತು ಕಾರುಗಳಿಗೆ ಪ್ರತಿ ವರ್ಷ ಕಟ್ಟುವ ಟ್ಯಾಕ್ಸ್ ಸಹ ಸಂಸ್ಥೆಯೇ ಪಾವತಿಸುತ್ತದೆ.
* ಸ್ವಂತ ಕಾರುಗಳಿಲ್ಲದ ಚಾಲಕರಿಗೆ ಹೊಸ ಕಾರುಗಳ ವ್ಯವಸ್ಥೆ ಮಾಡಿ ಕೊಡಲಾಗುವುದು.

2. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಚಾಲಕ/ಮಾಲೀಕರಿಗೆ ಮತ್ತು ಅವರ ಕುಟುಂಬಕ್ಕೆ ಸಿಗುವ ಸೌಲಭ್ಯಗಳು.

* ಚಾಲಕನಿಗೆ 10 ಲಕ್ಷದ ಜೀವ ವಿಮೆ.
* ಚಾಲಕನಿಗೆ ಮತ್ತು ಅವನ ಕುಟುಂಬಕ್ಕೆ ಆರೋಗ್ಯ ವಿಮೆ, (medical insurance)
* ಶಾಲೆಯಲ್ಲಿ ಓದುತ್ತಿರುವ ಚಾಲಕರ ಮಕ್ಕಳಿಗೆ ಪ್ರತಿ ವರ್ಷ ಬುಕ್ಸ್, ಬ್ಯಾಗ್, ಸ್ಟೇಷನರಿ, ಮತ್ತು ಅವರಿಗೆ ಬೇಕಾದ ಅಗತ್ಯತೆಗಳನ್ನು ಪೂರೈಸಲಾಗುತ್ತದೆ.
* ಅತೀ ಕಡಿಮೆ ಕಮೀಷನ್ ದರ 10%. (ಓಲಾ ಉಬರ್ ಕಮೀಷನ್ 30%).
* ಚಾಲಕರ ಭವಿಷ್ಯ ಮತ್ತು ಅಭಿವೃದ್ಧಿಯ ಆಲೋಚನೆಯನ್ನು ಇಟ್ಟುಕೊಂಡು ಚಾಲಕರಿಗಾಗಿ, ಚಾಲಕರ ಕಲ್ಯಾಣ ನಿಧಿ ಸಂಗ್ರಹ.
* ಅಭಿವೃದ್ಧಿ ಪಥ ದತ್ತ ಸಾಗಿ ಮುಂದಿನ ದಿನಗಳಲ್ಲಿ ಚಾಲಕರಿಗೆ ಬಡಾವಣೆಗಳ ಹಾಗು ಮನೆಗಳ ನಿರ್ಮಾಣ ಮಾಡಿ ಚಾಲಕರಿಗೆ ಹಂಚಿಕೆ ಮಾಡಲಾಗುವುದು.

ಶೇರ್ ಮಾಡಿ ಬೆಂಬಲ ಕೊಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments
G.dinesh says:

Hdk cabs

G.dinesh says:

I like it supper I am support

To Top