fbpx
ರಾಜಕೀಯ

ಅಯೋಧ್ಯೆ ವಿವಾದ ಕೋರ್ಟ್ ಹೊರಗೆ ಬಗೆಹರಿಸಿಕೊಳ್ಳಿ: ಸುಪ್ರೀಂ ಸೂಚನೆ

ಅಯೋಧ್ಯೆಯದಲ್ಲಿ ರಾಮಮಂದಿರ ನಿರ್ಮಾಣ ಅತ್ಯಂತ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯವಾಗಿದೆ. ಮಾತುಕತೆ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

2010ರಿಂದ ನೆನೆಗುದಿಗೆ ಬಿದ್ದಿರುವ ಪ್ರಕರಣದ ಕುರಿತು ತೀರ್ಮಾನ ಪ್ರಕಟಿಸಲು ಬಿಜೆಪಿ ಮುಖಂಡ ಸುಬ್ರಹ್ಮಣ್ಯಸ್ವಾಮಿ ಅವರ ಮನವಿಯನ್ನು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಎಸ್‍. ಖೇಹರ್ ‍ಅವರನ್ನೊಳಗೊಂಡ ಪೀಠ, ಮಾತುಕತೆ ಮೂಲಕ ಬಗೆಹರಿಯದೇ ಇದ್ದರೆ ಆಗ ನಾವು ಈ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದಿದೆ.

ಎರಡೂ ಸಮುದಾಯಗಳು ಕುಳಿತು ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಒಂದು ವೇಳೆ ಮಾತುಕತೆಗೆ ಅಜೆಂಡಾ ರೂಪಿಸಬೇಕು ಎಂದು ಕೇಳಿಕೊಂಡರೆ ಅದಕ್ಕೆ ವ್ಯವಸ್ಥೆ ಮಾಡಿಕೊಡುತ್ತೇವೆ. ಆದರೆ ನ್ಯಾಯಾಲಯದ ಮಧ್ಯಪ್ರವೇಶ ಇಲ್ಲದೇ ಮಾತುಕತೆ ನಡೆಸುವುದು ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಟ್ಟಿತು.

ಎರಡೂ ಸಮುದಾಯಗಳ ನಡುವೆ ಮಾತುಕತೆ ನಡೆಸಲು ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಬಿಜೆಪಿ ಮುಖಂಡ ಮಹೇಶ್‍ ಶರ್ಮಾ ಇದೇ ವೇಳೆ ಹೇಳಿಕೆ ನೀಡಿದರು.

ನ್ಯಾಯಾಲಯದ ಸೂಚನೆಯನ್ನು ಬಾಬ್ರಿ ಮಸೀದಿ ಕಾರ್ಯಕಾರಿ ಸಮಿತಿ ಸಂಚಾಲಕ ಜಾಫರ್‍ ಯಾಬ್‍ ಗಿಲಾನಿ ಸ್ವಾಗತಿಸಿದ್ದಾರೆ. ಕಳೆದ 31 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹತ್ವದ ವಿಚಾರವನ್ನು ಖಾಸಗಿಯಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಾವು ಹೇಳುತ್ತಾ ಬಂದಿದ್ದೆವು ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top