fbpx
ಕನ್ನಡ

ಸ್ವಂತ ಖರ್ಚಿನಲ್ಲೆ ರಸ್ತೆ ನಿರ್ಮಿಸಿ ಇತರರಿಗೆ ಮಾದರಿಯಾದ ಕಾಳೇನಹಳ್ಳಿ ಗ್ರಾಮಸ್ಥರು

ಶಾಸಕ ಚಲುವರಾಯಸ್ವಾಮಿಯವರ ನಿರ್ಲಕ್ಷ್ಯ ಮತ್ತು ಪಂಚಾಯಿತಿ ಜನಪ್ರತಿನಿಧಿಗಳ ನಿರಾಶಕ್ತಿಯಿಂದ ಬೇಸತ್ತ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮಸ್ಥರು, ಬೆಂಗಳೂರು ನಿವಾಸಿಗಳ ಸಹಕಾರದೊಂದಿಗೆ ತಾವೇ ರಸ್ತೆ ನಿರ್ಮಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಹದಗೆಟ್ಟ ರಸ್ತೆಯಲ್ಲಿ ನಿತ್ಯವೂ ಶಾಲಾಮಕ್ಕಳು ಮತ್ತು ಗ್ರಾಮಕ್ಕೆ ಆಗಮಿಸುವವರು ಅನುಭವಿಸುತ್ತಿದ್ದ ಸಂಕಷ್ಟದಿಂದಾಗಿ ಆಕ್ರೋಶೀತರಾದ ಕಾಳೇನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮದ ಬೆಂಗಳೂರು ನಿವಾಸಿ ಯುವಕರ ಅಗತ್ಯ ಸಹಕಾರ ಪಡದುಕೊಂಡು ಸ್ವಂತ ಖರ್ಚಿನಲ್ಲೆ ಜೆಸಿಬಿ ಮೂಲಕ 1 ಕಿ.ಮಿ. ರಸ್ತೆ ನಿರ್ಮಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ

ಗ್ರಾಮಕ್ಕೆ ರಸ್ತೆ ಮಾಡಿಸಬೇಕೆಂದು ಮೂರು ವರ್ಷಗಳಿಂದಲೂ ಶಾಸಕ ಚಲುವರಾಯಸ್ವಾಮಿಯವರನ್ನ ಹಲವು ಬಾರಿ ಗ್ರಾಮಸ್ಥರು ಮನವಿ ಮಾಢಿಕೊಂಡಿದ್ದರು ಮತ್ತು ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಮ್ಮ, ಅನುಸೂಯ, ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಸುಶೀಲಮ್ಮನವರನ್ನ ಸಹ ಕೋರಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ

ಕಾಂತಾಪುರ ಗ್ರಾಮ ತಾಲ್ಲೂಕಿನ ಪಂಚಾಯಿತಿ ಕೇಂದ್ರಸ್ಥಾನದಿಂದ ಒಂದು ಕಿ.ಮಿ. ಅಂತರದಲ್ಲಿರುವ ಕಾಳೇನಹಳ್ಳಿ ಗ್ರಾಮಕ್ಕೆ ತಿರುಗಾಡಲು ವ್ಯವಸ್ಥಿತ ರಸ್ತೆಯಿಲ್ಲದಿರುವುದು ದುರಂತವಾಗಿತ್ತು.350 ಜನಸಂಖ್ಯೆಯಿರುವ ಗ್ರಾಮದಲ್ಲಿ ಒಕ್ಕಲಿಗ,ಕುಂಬಾರ,ದಲಿತರು ಸೇರಿ 80 ಕುಟುಂಬಗಳಿವೆ.

ಇದು ಸ್ಥಳಿಯ ಜನಪ್ರಿನಿಧಿಗಳನ್ನ ನಾಚಿಸುವಂತೆ ಮಾಡಿದ ಕೆಲಸ ಎಂದು ಸಾರ್ವಜನಿಕರ ಮೆಚ್ಚಿಗೆಗೆ ಪಾತ್ರವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top