fbpx
ಸಮಾಚಾರ

ಆದಿತ್ಯನಾಥ್ ರಾಸಲೀಲೆ ವೀಡಿಯೋ ವಿವಾದ: ಬಿಜೆಪಿಯಿಂದ ಎಲ್ಲೆಡೆ ದೂರು ದಾಖಲು

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್​ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಯುವತಿ ಜತೆ ರಾಸಲೀಲೆಯಲ್ಲಿ ತೊಡಗಿದ್ದಾರೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾವಿಧಾರಿಯೊಬ್ಬ ಯುವತಿಯ ಜತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿರುವ ಫೋಟೋಗಳು ಇದಾಗಿದ್ದು, ಕೆಲವು ಕಿಡಿಗೇಡಿಗಳು ಯೋಗಿ ಆದಿತ್ಯನಾಥರ ಫೋಟೋ ಎಂದು ಬಿಂಬಿಸಿ ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರಗಳು ಸಂಚಲನ ಸೃಷ್ಟಿಸಿದ್ದು, ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ವಾಸ್ತವವಾಗಿ 2016 ಆಗಸ್ಟ್‍ 12ರಂದು ಅಶ್ಲೀಲ ವೆಬ್‍ಸೈಟ್‍ವೊಂದರಲ್ಲಿ ಪ್ರಕಟವಾಗಿದ್ದ ಚಿತ್ರವನ್ನೇ ಈ ರೀತಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯಿಂದ ದೇಶದೆಲ್ಲೆಡೆ ದೂರು ದಾಖಲು

ಯೋಗಿ ಆದಿತ್ಯನಾಥ್‍ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಈ ಹೀನಕೃತ್ಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಪೊಲೀಸ್‍ ಠಾಣೆಗಳಲ್ಲಿ ದೂರು ದಾಖಲಿಸಿದೆ.

ಆದಿತ್ಯನಾಥ್‍ ಅವರ ತೇಜೋವಧೆಗೆ ಯತ್ನಿಸಲಾಗುತ್ತಿದ್ದು ಫೇಸ್‍ಬುಕ್ಕಿನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವವರ ವಿರುದ್ಧ ದೂರು ದಾಖಲಿಸಲು ಸಂಘ ಸಂಸ್ಥೆಗಳು ಮುಂದಾಗಿವೆ. ಬಿಜೆಪಿ ಯುವ ಘಟಕ ಕೂಡ ದೂರು ಸಲ್ಲಿಸಲಾಗುತ್ತಿದೆ ಎಂದು ಬಿಜೆಪಿ ಹಿರಿಯ ಮಖಂಡರೊಬ್ಬರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top