fbpx
ಮಾಹಿತಿ

40 ಅಡಿ ಎತ್ತರದಿಂದ ಬಿದ್ದರೂ ಈಜಿ ಸುರಕ್ಷಿತವಾಗಿ ದಡ ಸೇರಿದ ಗರ್ಭಿಣಿ ಹಸು!

ಇದು ಪವಾಡ ಅನ್ನದೇ ಇರಲು ಸಾಧ್ಯವೇ ಇಲ್ಲ. ಏಕೆಂದರೆ 40 ಅಡಿ ಎತ್ತರದಿಂದ ನದಿಗೆ ಬಿದ್ದರೂ ಈಜಿ ಗರ್ಭಿಣಿ ಹಸು ದಡ ಸೇರಿದೆ ಅಂದರೆ ನೀವು ನಂಬಲೇ ಬೇಕು.

ಇಂಗ್ಲೆಂಡ್‍ನಲ್ಲಿ ಈ ಘಟನೆ ನಡೆದಿದ್ದು, ಬಿಬಿಸಿ ಸುದ್ದಿಸಂಸ್ಥೆ ಪ್ರಪಾತಕ್ಕೆ ಬಿದ್ದ ಹಸು ಏನಾಗಿದೆ ಎಂದು ನೋಡಲು ಹೋದಾಗ ಸುರಕ್ಷಿತವಾಗಿ ಇದ್ದಿದ್ದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದು ಮಾತ್ರವಲ್ಲ, ಕೂಡಲೇ ರಕ್ಷಣಾಪಡೆಯನ್ನು ಸಂಪರ್ಕಿಸಿ ನೆರವಿನ ಹಸ್ತ ಚಾಚಿದೆ.

ಕಾರ್ನೆವೆಲ್‍ನ ಪೋಲ್ಜೆಥ್ ಸಮೀಪದ ರಂಪ್ಸ್‍ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಲ್ಲಲ್ಲಿ ಕಪ್ಪು ಬಣ್ಣ ಇರುವ ಬಿಳಿ ಬಣ್ಣದ ಅಪರೂಪದ ತಳಿಯ ಈ ಹಸು ಕಲ್ಲುಬಂಡೆಗಳ ಬೆಟ್ಟದಲ್ಲಿ ದಾರಿ ಕಾಣದೇ ನಿಂತಿತ್ತು. ಒಂದು ಕಡೆ ಸಮುದ್ರದ ಅಲೆಗಳು ಮತ್ತೊಂದು ಕಡೆ ಏರಲು ಸಾಧ್ಯವಾಗದ ಬೆಟ್ಟ. ಇವೆರಡರ ಮಧ್ಯೆ ಸಿಲುಕಿದ್ದ ಹಸುವನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದೆ.

ಮಧ್ಯಾಹ್ನ ಕಾರ್ಯಾಚರಣೆ ಆರಂಭಿಸಿದ ಭದ್ರತಾ ಸಿಬ್ಬಂದಿ ಟ್ರಕ್ಕಿಂಗ್‍ಗೆ ಬಳಸುವ ಉಪಕರಣಗಳಿಂದಸುಮಾರು ಒಂದುವರೆ ದಿನ ಶ್ರಮಿಸಿ ಹಸುವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದೆ.

ಹೆಚ್ಚಾಗಿ ದ್ವೀಪಗಳೇ ಇರುವ ಈ ಪ್ರದೇಶದಲ್ಲಿ ಆಕಸ್ಮಿಕವಾಗಿ ಹಸು ಮೇಲಿನಿಂದ ಕೆಳಗೆ ಬಿದ್ದಿತು. ನೀರಿನಲ್ಲಿ ಬಿದ್ದ ಈ ಹಸು ಈಜಿ 60 ಅಡಿ ಕಂದಕದಲ್ಲಿ ಸಿಲುಕಿದ್ದ ಸುದ್ದಿ ತಿಳಿದು ನೆರವಿಗೆ ಹೋದೆವು. ಸುಮಾರು 7 ಗಂಟೆ ಕಾರ್ಯಾಚರಣೆ ಮಾಡಿದ್ದು, ಅತ್ಯಂತ ಕಷ್ಟದ ಕೆಲಸ ಇದಾಗಿತ್ತು ಎಂದು ವೇಡ್‍ಬ್ರಿಡ್ಜ್‍ನ ಅಗ್ನಿಶಾಮಕ ದಳದ ಸಿಬ್ಬಂದಿ ಟ್ವೀಟರ್‍ನಲ್ಲಿ ಘಟನೆಯನ್ನು ವಿವರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top