ಮಾಹಿತಿ

ಮಹಿಳೆಯರ ಹಾಸ್ಟೆಲ್‍ಗೆ ನುಗ್ಗುತ್ತಿದ್ದ ಬಿಹಾರ ಮೂಲದ ವಿಕೃತಕಾಮಿ ಬೆಂಗಳೂರಿನಲ್ಲಿ ಬಂಧನ: `ಸುಳಿವು’ ಸಿಕ್ಕಿದ್ದೇ ರೋಚಕ ಕಥೆ

ಬೆತ್ತಲಾಗಿ ಮಹಿಳೆಯರ ಹಾಸ್ಟೆಲ್‍ಗೆ ನುಗ್ಗುವುದು, ಮಹಿಳೆಯರ ಒಳಉಡುಪುಗಳನ್ನು ಧರಿಸಿ ಸಂತೋಷಿಸುತ್ತಿದ್ದ ವಿಕೃತಕಾಮಿಯನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಬಿಹಾರ ಮೂಲದ ಅಬು ತಾಲೀಮ್‍ ಎಂಬಾತನನ್ನು ಹೈಗ್ರೌಂಡ್‍ ಪೊಲೀಸರು ಬುಧವಾರ ಮುಂಜಾನೆ ಬಂಧಿಸಿದ್ದಾರೆ.

ಬಂಧಿತ ಅಬು ತಾಲೀಮ್ ರೇಸ್‍ ಕೋರ್ಸ್‍ನ ಉದ್ಯೋಗಿಯಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಈ ರೀತಿ ಮಹಿಳೆಯರ ಹಾಸ್ಟೆಲ್‍ಗೆ ನುಗ್ಗಿ ವಿಕೃತವಾಗಿ ನಡೆದುಕೊಳ್ಳುತ್ತಿದ್ದ ಈ ವ್ಯಕ್ತಿ ಮಹರಾಣಿ ಕಾಲೇಜಿನ ಹಾಸ್ಟೆಲ್‍ಗೆ ನುಗ್ಗಿ ಮಹಿಳೆಯರ ಒಳ ಉಡುಪು ಧರಿಸಿ ಸುತ್ತಾಡುತ್ತಿದ್ದುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಎರಡು ದಿನಗಳ ಹಿಂದೆ ಸಿಸಿಟಿವಿ ದೃಶ್ಯಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಅಬು ತಾಲೀಮ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಸಿಸಿಟಿವಿ ದೃಶ್ಯಗಳಲ್ಲಿ ಈತನ ತಲೆಯಲ್ಲಿ ಎರಡು ಸುಳಿಗಳನ್ನು ಇರುವುದನ್ನು ಪತ್ತೆಹಚ್ಚಿದ ಪೊಲೀಸರು ಇದೇ ಸುಳಿವಿನ ಆಧಾರದ ಮೇಲೆ ಬಂಧಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top