fbpx
ಇತರೆ

ತಿಂಗಳಾದರೂ ಪ್ರಥಮ್ ಕೈ ಸೇರದ ಬಿಗ್‍ಬಾಸ್‍ ಬಹುಮಾನ ಮೊತ್ತ! ಏಕೆ ಗೊತ್ತಾ?

ಬಿಗ್ ಬಾಸ್-4 ಮುಗಿದು ತಿಂಗಳು ಕಳೆದರೂ ವಿಜೇತ ಪ್ರಥಮ್ ಗೆ ಬಹುಮಾನ ರೂ‍ಪದಲ್ಲಿ ಬರಬೇಕಿದ್ದ 50 ಲಕ್ಷ ರೂ. ಇನ್ನೂ ಕೈ ಸೇರಿಲ್ಲವಂತೆ. ಇದರಲ್ಲಿ ಬಿಗ್‍ಬಾಗ್‍ ಕಾರ್ಯಕ್ರಮದ ಸಂಘಟಕರ ಸಮಸ್ಯೆ ಅಲ್ಲವಂತೆ. ಪ್ರಥಮ್ ಬಳಿ ಇನ್ನೂ ಪಾನ್‍ ಕಾರ್ಡ್‍ ಇಲ್ಲದ ಕಾರಣ ಇಷ್ಟು ದೊಡ್ಡ ಮೊತ್ತವನ್ನು ಕೊಡಲು ಆಗುತ್ತಿಲ್ಲ, ತೆಗೆದುಕೊಳ್ಳಲೂ ಆಗುತ್ತಿಲ್ಲ!

ಬಿಗ್‍ಬಾಸ್‍ ವಿಜೇತರಾದ ಬೆನ್ನಲ್ಲೇ ಪ್ರಥಮ್‍, ಬಹುಮಾನ ಮೊತ್ತದಲ್ಲಿ ಬಂದ ಹಣದಲ್ಲಿ ಸೈನಿಕರ ಕಲ್ಯಾಣಕ್ಕೆ ಹಾಗೂ ಊರಿನಲ್ಲಿ ಮೂಲಭೂತ ಸೌಕರ್ಯ ಒದಗಿಸುವುದಕ್ಕೆ ಬಳಸುವುದಾಗಿ ಘೋಷಿಸಿದ್ದರು. ಆದರೆ ತಿಂಗಳು ಕಳೆದರೂ ಯಾರಿಗೂ ಹಣ ತಲುಪಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಥಮ್ ಈ ಸ್ಪಷ್ಟನೆ ನೀಡಿದ್ದಾರೆ.

ಮಂಡ್ಯಕ್ಕೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಪ್ರಥಮ್‍, ಸುದ್ದಿಗಾರರು ಪ್ರಶ್ನಿಸಿದಾಗ ಈ ವಿವರ ನೀಡಿದ್ದಾರೆ.

ನಾನು 50 ಲಕ್ಷ ರೂಪಾಯಿ ಇಟ್ಟುಕೊಳ್ಳಲ್ಲ ಎಂದಾಗ ಕೆಲವರು ಈತ ರಾಜಕೀಯಕ್ಕೆ ಹೋಗುತ್ತಾನೆ ಎಂದರು. ಮತ್ತೆ ಕೆಲವರು 50 ಲಕ್ಷವನ್ನು ತಾನೆ ಇಟ್ಟುಕೊಂಡಿದ್ದಾನೆ ಎಂದಿದ್ದಾರೆ. ನಿಜ ಏನೆಂದರೆ ನನ್ನ ಬಳಿ ಪಾನ್ ಕಾರ್ಡ್ ಇಲ್ಲದ ಕಾರಣ ಇದುವರೆಗೂ ನನಗೆ ಬಹುಮಾನದ ಮೊತ್ತವೇ ಬಂದಿಲ್ಲ. ನಾನು ಸ್ವ ಇಚ್ಛೆಯಿಂದ 50 ಲಕ್ಷ ಕೊಡಲು ನಿರ್ಧರಿಸಿರುವುದು. ಇಂಥವರಿಗೆ ಕೊಡಬೇಕು ಎಂದು ಲಿಸ್ಟ್ ಕೂಡ ಮಾಡಿದ್ದೇನೆ. ಅವರಿಗೆ ತಲುಪಿಸುವ ವ್ಯವಸ್ಥೆ ಕೂಡ ಮಾಡುತ್ತೇನೆ.

ರಾಜಕೀಯಕ್ಕೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಾಲಿಟಿಕ್ಸ್ ಕಲಿಯಲು ನನಗೆ 10 ವರ್ಷನಾದರೂ ಬೇಕು. ನನಗೂ ರಾಜಕೀಯಕ್ಕೆ ದೂರದ ಮಾತು ಎಂದರು. ಡಬ್ಬಿಂಗ್ ಗೆ ವಿರೋಧ ವ್ಯಕ್ತಪಡಿಸಿದ ಪ್ರಥಮ್, ಡಬ್ಬಿಂಗ್ ಅನ್ನೊದು ಏಡ್ಸ್ ಗಿಂತಲೂ ದೊಡ್ಡ ರೋಗ. ಡಬ್ಬಿಂಗ್ ವಿಷಯದಲ್ಲಿ ಈಗಾಗಲೇ ಕನ್ನಡಿಗರು ತೀರ್ಮಾನ ತೆಗೆದುಕೊಂಡಿದ್ದಾರೆ. ನನಗೆ ಈಗಾಗಲೇ 5 ಸಿನಿಮಾಗಳಲ್ಲಿ ನಾಯಕನಾಗಿ ನಟಿಸೋ ಅವಕಾಶ ಸಿಕ್ಕಿದೆ. ನನ್ನ ಮೊದಲ ಸಿನಿಮಾದ ಪೂಜೆ ಸಿದ್ದಗಂಗಾಮಠದಿಂದಲೇ ಆರಂಭವಾಗಿದೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top