fbpx
ತಂತ್ರಜ್ಞಾನ

ಜಿಯೊ, ಏರ್‍ ಟೆಲ್‍ ಎದುರಿಸಲು ಒಂದಾದ ಐಡಿಯಾ- ವೊಡಾಫೋನ್‍

ರಿಲಾಯನ್ಸ್‍ ಜಿಯೊ ಮತ್ತು ಭಾರ್ತಿ ಏರ್‍ ಟೆಲ್‍ ವಿರುದ್ಧ ಐಡಿಯಾ ಮತ್ತು ವೋಡಾಫೋನ್‍ ಸಂಸ್ಥೆಯಾಗಿ ಒಂದಾಗಿ ಹೋರಾಡಲು ನಿರ್ಧರಿಸಿವೆ. ಎರಡೂ ಸಂಸ್ಥೆಗಳು ವಿಲೀನಗೊಳ್ಳುವ ಮೂಲಕ ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಲಿದ್ದು, ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ದರ ಸಮರದ ವಿರುದ್ಧ ಹೋರಾಡಲು ಸಜ್ಜಾಗಿವೆ.

ಜಿಯೊ, ಏರ್‍ ಟೆಲ್‍ ದರ ಸಮರದಿಂದ ತತ್ತರಿಸಿರುವ ಸಣ್ಣಪುಟ್ಟ ಟೆಲಿಕಾಂ ಸಂಸ್ಥೆಗಳು ತತ್ತರಿಸುತ್ತಿವೆ. ಇದೀಗ ಬ್ರಿಟಿಷ್‍ ಮೂಲದ ವೋಡಾಫೋನ್ ಮತ್ತು ಐಡಿಯಾ ಸೆಲ್ಯುಲರ್‍ ಕಂಪನಿಗಳು ವಿಲೀನಗೊಳ್ಳುವ ಮೂಲಕ ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಹಾಗೂ ಅತೀ ಹೆಚ್ಚು ವ್ಯಾಪ್ತಿಯ ನೆಟ್‍ವರ್ಕ್‍ ಹೊಂದಿರುವ ಸಂಸ್ಥೆಯಾಗಿ ಹೊರಹೊಮ್ಮಲಿದೆ.

ವೋಡಾಫೋನ್‍ ಶೇ.45ರಷ್ಟು ಪಾಲು ಹೊಂದಲಿದೆ. ಇದರಿಂದ ಎರಡೂ ಸಂಸ್ಥೆಗಳು ತಲಾ ಮೂವರು ನಿರ್ದೇಶಕರನ್ನು ಹೊಂದಲಿದೆ. ಎರಡೂ ಸಂಸ್ಥೆಗಳ ವಿಲೀನದಿಂದ 40 ಕೋಟಿ ಗ್ರಾಹಕರು ಒಂದೇ ಸಂಸ್ಥೆಯಡಿ ಬರಲಿದ್ದಾರೆ. ಐಡಿಯಾ ಸಂಸ್ಥೆಯ ನಿರ್ದೇಶಕ ಮುಖ್ಯಸ್ಥರ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಎರಡೂ ಕಡೆಯ ನಿರ್ದೇಶಕರು ಸೇರಿ ಸಿಇಒ ಮತ್ತು ಕಾರ್ಯಾಚರಣೆಯ ಮುಖ್ಯಸ್ಥರನ್ನು ನೇಮಿಸಲಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top