fbpx
ಸಣ್ಣ ಕಥೆ

ವೇದಿಕೆಯಲ್ಲೇ ಕುಸಿದುಬಿದ್ದು ಅಸುನೀಗಿದ ಖ್ಯಾತ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟರು

ಅತ್ಯಂತ ಜನಪ್ರಿಯ ಕಟೀಲು ಯಕ್ಷಗಾನ ಕಲಾವಿದರಾದ ಗೇರುಕಟ್ಟೆ ಗಂಗಯ್ಯ ಶೆಟ್ಟರು ಬಯಲಾಟದ ವೇಳೆ ರಂಗಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಯಕ್ಷಗಾನ ಪ್ರದರ್ಶನದ ವೇಳೆ ಗಂಗಯ್ಯ ಶೆಟ್ಟರು ಕುಸಿದು ಬಿದ್ದ ವೀಡೀಯೊ ಲಿಂಕ್‍ ಇಲ್ಲಿದೆ.

ಎಕ್ಕೂರಿನಲ್ಲಿ ನಡೆಯುತ್ತಿದ್ದ ದೇವಿ ಮಹಾತ್ಮೆ ಮೇಳದ ಪ್ರದರ್ಶನದ ವೇಳೆ ಅರುಣಾಸುರನ ಪಾತ್ರ ನಿರ್ವಹಿಸುತ್ತಿದ್ದ ಗಂಗಯ್ಯ ಶೆಟ್ಟರು ಹೃದಯಾಘಾತದಿಂದ ರಂಗಸ್ಥಳದಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆದಲ್ಲೇ ಅಸುನೀಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅರುಣಾಸುರನ ಪಾತ್ರದಲ್ಲಿ ದೇವಿ ವಿರುದ್ಧ ಹೋರಾಡುತ್ತಾ ಅಸುನೀಗುವ ದೃಶ್ಯ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ರಂಗಸ್ಥಳದ ಮೇಲೆ ಭಾಗವತರ ಎದುರಿರುವ ರಂಗಮಂಚಕ್ಕೆ ತಲೆಯಾನಿಸಿ ಕೆಳಗೆ ಬಿದ್ರು… ಕೈಲಾಸವಾಗುವ, ರಣರಂಗವಾಗುವ, ಸಿಂಹಾಸನವಾಗುವ, ಕಲ್ಲುಬಂಡೆಯಾಗುವ ಕಲ್ಪನಾ ವಿನ್ಯಾಸದ ಆ ರಂಗಮಂಚಕ್ಕೆ ತಲೆಯಿಟ್ಟು ಗಂಗಯ್ಯ ಶೆಟ್ರು ಕುಸಿದು ಬಿದ್ರು. ಅರುಣಾಸುರನ ವೇಷದಲ್ಲೇ ಆಸ್ಪತ್ರೆಗೆ ಕೊಂಡೊಯ್ಯುವ ದಾರಿಯಲ್ಲಿ ಕೊನೆಯುಸಿರೆಳೆದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top