ಮಾಹಿತಿ

ಬ್ರಿಟನ್‍ ಸಂಸತ್‍ ಸಮೀಪ ಉಗ್ರರ ದಾಳಿ: ನಾಲ್ವರು ಸಾವು, ಹಲವರಿಗೆ ಗಾಯ

ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮನ್ಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದೂ ಅಲ್ಲದೇ ಸಂಸತ್‍ ಭವನದ ಕಟ್ಟಡಕ್ಕೆ ಡಿಕ್ಕಿ ಹೊಡೆಯಲು ಯತ್ನಿಸಿದ್ದು, ಘಟನೆಯಲ್ಲಿ ಪೊಲೀಸ್ ಸೇರಿದಂತೆ ನಾಲ್ವರು ಮೃತಪಟ್ಟು 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಬ್ರಿಟನ್‍ನಲ್ಲಿ ಬುಧವಾರ ಸಂಜೆ ಜರುಗಿದೆ.

ಕಾರಿನಲ್ಲಿದ್ದ ದುಷ್ಕರ್ಮಿಗಳು ಸಂಸತ್‍ ಭವನ ಸಮೀಪದ ವೆಸ್ಟ್ ಮಿಸ್ಟರ್ ಸೇತುವೆ ಮೇಲೆ ಬರುತ್ತಿದ್ದಂತೆ ಗುಂಡು ಹಾರಿಸತೊಡಗಿದ್ದಾರೆ. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಕಾರು ನಾಗರೀಕರ ಮೇಲೆ ನುಗ್ಗಿ ಕೊನೆಗೆ ಸಂಸತ್ ಭವನದ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಿಂದ ಇಳಿದ ವ್ಯಕ್ತಿಯ ಕೈಯಲ್ಲಿ ಗನ್‍ ಹಾಗೂ ಚೂರಿ ಇದ್ದು, ಅದರಿಂದ ಆತ ಪೊಲೀಸ್‍ಗೆ ಇರಿದಿದ್ದಾನೆ.

ಘಟನೆಯಲ್ಲಿ ಪೊಲೀಸ್‍ ಮತ್ತು ಸಹಾಯಕ ಅಲ್ಲದೇ ಕಾರಿನ ಸಿಲುಕಿದ್ದ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯನ್ನು ಪೊಲೀಸರು ಉಗ್ರರ ದಾಳಿ ಎಂದು ಬಣ್ಣಿಸಿದ್ದು, ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ.

ಕಾರು ಕಟ್ಟಡಕ್ಕೆ ಡಿಕ್ಕಿ ಹೊಡೆದ ನಂತರ ಕನಿಷ್ಠ ಒಬ್ಬ ವ್ಯಕ್ತಿ ಕೆಳಗೆ ಇಳಿದಿದ್ದಾನೆ. ಆತನ ಕೈಯಲ್ಲಿ ಚೂರಿ ಇದ್ದು, ಅದರಿಂದ ಪೊಲೀಸ್‍ ಸೇರಿದಂತೆ ಎದುರಿಗೆ ಬಂದವರ ಮೇಲೆ ದಾಳಿ ನಡೆಸುತ್ತಾ ಸಂಸತ್‍ ಭವನದ ಒಳಗೆ ನುಗ್ಗಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ವೇಳೆ ಪತ್ರಕರ್ತರು ಕಟ್ಟಡದ ಒಳಗೆ ಇದ್ದು, ಛಾಯಾಗ್ರಾಹಕನೊಬ್ಬ ಘಟನೆಯನ್ನು ಫೋಟೋ ತೆಗೆದಿದ್ದಾನೆ. ಈತ ಘಟನೆಯನ್ನು ನೋಡಿದ್ದು, ಕನಿಷ್ಠ 15ರಿಂದ 16 ಮಂದಿ ಗಾಯಗೊಂಡಿರಬಹುದು ಎಂದು ಹೇಳಿದ್ದಾನೆ.

ಬ್ರುಸೆಲ್ಸ್‍ನಲ್ಲಿ ಉಗ್ರರ ದಾಳಿಗೆ 32 ಮಂದಿ ಬಲಿಯಾದ ವಾರ್ಷಿಕೋತ್ಸವ ಸಂದರ್ಭದಲ್ಲಿ ಉಗ್ರರು ಉದ್ದೇಶಪೂರ್ವಕ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

ದಾಳಿ ವೇಳ ಬ್ರಿಟನ್‍ ಸಂಸತ್‍ ಅಧಿವೇಶನ ನಡೆಯುತ್ತಿದ್ದು, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜನಪ್ರತಿನಿಧಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದ್ದು, ಅಧಿವೇಶನವನ್ನು ಅಮಾನತು ಮಾಡಲಾಯಿತು. ಪ್ರಧಾನಿ ತೆಸೆರಾ ಮೆ ಸುರಕ್ಷಿತವಾಗಿದ್ದಾರೆಂದು ಹೇಳಿಕೆಯಲ್ಲಿ ಸ್ಪಷ್ಟನೆ ನೀಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top