fbpx
ಕನ್ನಡ

‘ಬಾಹುಬಲಿ-2’ ಚಿತ್ರವನ್ನ ಕರ್ನಾಟಕದಲ್ಲಿ ನಿಷೇಧಿಸುವುದಾದರೆ ಖಂಡಿತ ಒಗ್ಗಟ್ಟಿನ ಹೋರಾಟಕ್ಕಿಳಿಯೋಣ : ಡಾ.ವಿಷ್ಣು ಸೇನಾ ಸಮಿತಿ

ಕಾವೇರಿ ವಿವಾದದ ಸಮಯದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಕಟ್ಟಪ್ಪ ಆಡಿದ ಲಘು ಮಾತುಗಳಿಂದ ಕೆರಳಿದ ಸಾಮಾನ್ಯ ಕನ್ನಡಿಗ ತಂಡ , #SayNoTOBahubali ಟ್ವಿಟರ್ ನಲ್ಲಿ ಟ್ರೆಂಡ್ ಮಾಡಿತ್ತು .. ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ [ಕರ್ನಾಟಕದಲ್ಲಿ ಬಾಹುಬಲಿ-2 ರೆಲೀಸ್ ಗೆ ಸಂಕಟವಾದ ಕಟ್ಟಪ್ಪನ ಕನ್ನಡ ವಿರೋಧಿ ಹೇಳಿಕೆ !!]

ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸಾಮಾನ್ಯ ಕನ್ನಡಿಗರು ಸೇರಿ ಕನ್ನಡ ಚಲನಚಿತ್ರ ಮಂಡಳಿಗೆ ಕರ್ನಾಟಕ ದಲ್ಲಿ ‘ಬಾಹುಬಲಿ-2’ ಬೇಡ ಅಂತ ಮನವಿ ಮಾಡಿತ್ತು . ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ [ಕರ್ನಾಟಕದಲ್ಲಿ ಬಾಹುಬಲಿ -2 ರಿಲೀಸ್ ಮಾಡೋಕ್ಕೆ ಬಿಡಲ್ವಂತೆ ? ಯಾಕೆ ಅಂತ ನೋಡಿ !]

ಈಗ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ”ಬಾಹುಬಲಿ-2′ ಚಿತ್ರವನ್ನ ಕರ್ನಾಟಕದಲ್ಲಿ ನಿಷೇಧಿಸುವುದಾದರೆ ಖಂಡಿತ ಒಗ್ಗಟ್ಟಿನ ಹೋರಾಟಕ್ಕಿಳಿಯೋಣ” ಅಂತ ಹೇಳಿ , ಅವರು ಸಹ ಕನ್ನಡ ಕನ್ನಡಿಗರ ಹೊರಟ್ಟಕ್ಕೆ ಬರುವುದಾಗಿ ಹೇಳಿದರೆ .

ಏನಿಕ್ಕೆ ಈ ಹೋರಾಟ ?

ಏಪ್ರಿಲ್ ನಲ್ಲಿ ತೆರೆ ಕಾಣುವ ‘ಬಾಹುಬಲಿ-2’ ಚಿತ್ರವನ್ನ ಕಣ್ತುಂಬಿಕೊಳ್ಳಲು ಸಿನಿ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ, ಕರ್ನಾಟಕದಲ್ಲಿ ‘ಬಾಹುಬಲಿ-2’ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕಾವೇರಿ ವಿವಾದದ ಸಮಯದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಕಟ್ಟಪ್ಪ ಆಡಿದ ಲಘು ಮಾತುಗಳು ಈಗ ‘ಬಾಹುಬಲಿ-2’ ಚಿತ್ರಕ್ಕೆ ಕರ್ನಾಟಕದಲ್ಲಿ ಕಂಟಕ ಎದುರಾಗಿದೆ

ಫೇಸ್ ಬುಕ್ ನಲ್ಲಿ ವೀರಕಪುತ್ರ ಶ್ರೀನಿವಾಸ್ ಬರೆದಿರುವುದೇನು.?

ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅದ್ಯಾರೋ ಕಟ್ಟಪ್ಪನೋ, ಕೆಟ್ಟಪ್ಪನೋ, ಹುಚ್ಚಪ್ಪನೋ ಅಥವಾ ಅಪ್ರಬುದ್ಧನೋ ಆಡಿದ ಲಘು ಮಾತುಗಳ ಹಿನ್ನಲೆಯಲ್ಲಿ ಬಾಹುಬಲಿ-2 ಚಿತ್ರವನ್ನು ಇಲ್ಲಿ ನಿಷೇಧಿಸುವುದಾದರೆ ಖಂಡಿತ ಒಗ್ಗಟ್ಟಿನ ಹೋರಾಟಕ್ಕಿಳಿಯೋಣ. ಅವರು ಜಲ್ಲಿಕಟ್ಟುಗೆ ಹೋರಾಡಿದ ರೀತಿಯೇ ನಾವು ಕಟ್ಟಪ್ಪನ ತೆರೆ ದರ್ಶನ ನಿಷೇಧಕ್ಕೆ ಯತ್ನಿಸೋಣ. ಆಗುವುದಾದರೆ ಕನ್ನಡಿಗರ ಶಕ್ತಿಪ್ರದರ್ಶನವಾಗಲಿ.

#ಆದರೆ ಇತ್ತ ಕನ್ನಡಿಗರನ್ನು ಮುಂದೆಬಿಟ್ಟು, ಹೋರಾಟದ ಕಾವನ್ನು ಹೆಚ್ಚಿಸಿ, ಅತ್ತ ಡಿಸ್ಟ್ರಿಬ್ಯೂಟರ್/ನಿರ್ಮಾಪಕನ ಜೊತೆ ವ್ಯಾಪಾರಕ್ಕಿಳಿಯಬೇಡಿ. ಯಾರದೋ ಸ್ವಾರ್ಥ ಮತ್ತು ಪ್ರಚಾರಕ್ಕೆ ಕನ್ನಡಿಗರ ಮಾನ ಹರಾಜಾಗುವುದು ಬೇಡ. ಕಾನೂನು ಸಹ ನಿರ್ಮಾಪಕರ ಪರವಾಗುವ ಸಾಧ್ಯತೆಗಳಿರುವುದರಿಂದ ಮತ್ತು ಬೆಳಗಿನ ಜಾವ 4 ಗಂಟೆ ಪ್ರದರ್ಶನಕ್ಕೆ ನಮ್ಮ ಚಿತ್ರರಂಗದ ಗಣ್ಯರೇ ಕಾದು ಕುಳಿತಿರುವುದರಿಂದ ನಮ್ಮ ಹೋರಾಟ ನಗೆಪಾಟಲಿಗೆ ಈಡಾಗದಿರಲಿ ಎಂಬ ಕಾಳಜಿ ನನ್ನದು.

ಸುಮ್ಮನೆ ಯೋಚಿಸಿ, ಒಂದು ವೇಳೆ ಕನ್ನಡಿಗರು ವಿರೋಧಿಸಿದ ಮೇಲೂ ಬಾಹುಬಲಿ-2 ಇಲ್ಲಿ ತೆರೆಕಂಡರೆ ಅದೆಂಥಾ ಅವಮಾನ ಎದುರಿಸಬೇಕಾದೀತು? ಆಗ ಕಟ್ಟಪ್ಪನಾಡಿದ ಲಘುಮಾತಿಗಳಿಗಿಂತ ಮತ್ತಷ್ಟು ಲಘುವಾಗಿ ಕನ್ನಡಿಗರು ಹೊರರಾಜ್ಯದವರಿಗೆ ಕಾಣುವುದಿಲ್ಲವೇ?
ಸಂಬಂಧಪಟ್ಟವರು ಯೋಚಿಸಿ! ನಿರ್ಧರಿಸಿ!!

-ವೀರಕಪುತ್ರ ಶ್ರೀನಿವಾಸ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top