fbpx
ತಂತ್ರಜ್ಞಾನ

ಮೋಡ ಬಿತ್ತನೆಗೆ ವಿಮಾನವೇ ಬೇಕಾಗಿಲ್ಲ, ಡ್ರೋಣ್‍ ಸಾಕು: ಕೃಷಿಗಾಗಿ ಉಡುಪಿ ವಿದ್ಯಾರ್ಥಿಗಳ ಸಂಶೋಧನೆ!

ರಾಜ್ಯದಲ್ಲಿ ಕೆಲವು ವರ್ಷಗಳಿಂದ ಸತತ ಬರ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಮೊನ್ನೆ ತಾನೇ ಸರಕಾರ ಬಜೆಟ್‍ನಲ್ಲಿ ಮೋಡ ಬಿತ್ತನೆಗೆ ಕೊಟಿಗಟ್ಟಲೆ ಹಣ ಮೀಸಲಿರಿಸಿತ್ತು. ಆದರೆ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಮೋಡ ಬಿತ್ತನೆ ಮಾಡುವ ಸಂಶೋಧನೆ ಮಾಡಿ ಬೇಸಿಗೆಯ ಬಿಸಿಯಲ್ಲೂ ರೈತರ ಮುಖದಲ್ಲಿ ಮಂದಹಾಸ ತಂದಿದ್ದಾರೆ.

ಮೋಡ ಬಿತ್ತನೆ ಅಂದರೆನು?

ಸಾಮಾನ್ಯವಾಗಿ ಮೋಡ ಬಿತ್ತನೆಯನ್ನು ವಿಮಾನದ ಮೂಲಕ ಮಾಡಲಾಗುತ್ತದೆ. ಹವಾಮಾನ ಇಲಾಖೆಯ ನೆರವಿನಿಂದ ಕಪ್ಪು ಮೋಡಗಳು ಬರುವ ಸಮಯ, ದಿಕ್ಕು, ಪ್ರಮಾಣಗಳ ಮಾಹಿತಿ ಪಡೆಯಲಾಗುತ್ತದೆ. ಮೋಡದ ಮೇಲೆ ವಿಮಾನ ಹಾರಿಸಿ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ರಾಸಾಯನಿಕಗಳ ಪ್ರಭಾವದಿಂದ ಮೋಡಗಳು ಕರಗಿ ಮಳೆಯಾಗುತ್ತದೆ. ರಾಜ್ಯದಲ್ಲಿ ಮೊದಲ ಬಾರಿ ಎಸ್‍.ಎಂ. ಕೃಷ್ಣ ಅವಧಿಯಲ್ಲಿ ಈ ಪ್ರಯೋಗ ಮಾಡಲಾಯಿತಾದರೂ ಅಷ್ಟೊಂದು ಯಶಸ್ವಿಯಾಗಿರಲಿಲ್ಲ.

ವಿದ್ಯಾರ್ಥಿಗಳ ಸಾಧನೆ

ಸಾಮಾನ್ಯವಾಗಿ ಡ್ರೋಣ್ ಅನ್ನು ಕ್ಯಾಮರಾ, ವೀಡಿಯೋ ದೃಶ್ಯಗಳನ್ನು ಸೆರೆ ಹಿಡಿಯಲು, ಸೈನಿಕರಿಗೆ ನೆರವಾಲು ಮುಂತಾದವುಗಳಿಗೆ ಬಳಸಲಾಗುತ್ತಿದೆ. ಆದರೆ ಉಡುಪಿಯ ವಿದ್ಯಾರ್ಥಿಗಳು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬರಗಾಲದಲ್ಲಿ ರೈತರಿಗೆ ನೆರವಾಗುವಂತಹ ತಂತ್ರವನ್ನು ಕಂಡುಹಿಡಿದ್ದಾರೆ.

ಇದೀಗ ವಿಮಾನದಿಂದ ಮಾಡುವ ಮೋಡಬಿತ್ತನೆಯನ್ನು ಡ್ರೋಣ್ ಮೂಲಕ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ. ಇದರಿಂದ ಕೋಟಿ ವೆಚ್ಚದಲ್ಲಿ ಆಗುತ್ತಿದ್ದ ಮೋಡ ಬಿತ್ತನೆ ಕೆಲವೇ ಲಕ್ಷಗಳಲ್ಲಿ ಮುಗಿದು ಹೋಗುತ್ತದೆ.

ಡ್ರೋಣ್‍ ಬಳಕೆ ಹೇಗೆ?

ಇದು ಮಾಮೂಲಿ ಡ್ರೋನ್‌ಗಿಂತಲೂ ದೊಡ್ಡದಾಗಿದೆ. ಸಿಲ್ವರ್ ಅಯೋಡೈಸ್ಟ್ ಸೆಲ್‌ಗಳನ್ನು ಹೊತ್ತು ಬಾನೆತ್ತರಕ್ಕೆ ಹಾರುತ್ತದೆ. ನೀರಿಯುವ ಮೋಡಗಳ ಮೇಲೆ ಅದನ್ನು ಸಿಡಿಸುತ್ತದೆ. ಬಿರು ಬೇಸಿಗೆಯಲ್ಲಿ ಮಳೆ ತರಿಸುತ್ತದೆ. ಮೋಡ ಬಿತ್ತನೆಗಾಗಿ ಈ ಡ್ರೋನ್ ಸಿಸ್ಟಮನ್ನು ಇವರಿಬ್ಬರು ಕಂಡು ಹುಡುಕಿದ್ದಾರೆ.

ಇಬ್ಬರು ವಿದ್ಯಾರ್ಥಿಗಳ ಸಾಧನೆ

ಪೇ ಪಾಯಿಂಟ್ ಟೆಕ್ನಾಲಜಿ ಬಳಸಲಾಗಿದ್ದು, ೧೧ ಲಕ್ಷ ರೂ.ವೆಚ್ಚದಲ್ಲಿ ಈ ಸಂಧೋದನೆ ಮುಗಿದಿದೆ. ಈ ಡ್ರೋನ್ ತಯಾರಿಸಿದ ವಿದ್ಯಾರ್ಥಿ ಹೇಳುವ ಪ್ರಕಾರ, ಏರೋನೆಟಿಕ್‌ನಲ್ಲಿ ಕಲಿತಿರುವ ಪ್ರಜ್ವಲ್ ಅವರ ಸಹಾಯ ಪಡೆದಿದ್ದು, ದೇಶದ ಜನರಿಗೆ ಉಪಯೋಗ ವಾಗುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡಲಾಗಿದೆ. ಮೋದಿ ಅವರು ಹೇಳುವಂತೆ ಸ್ಟಾರ್ಟ್ ಆಫ್ ಇಂಡಿಯಾಗೂ ಇದು ಅನ್ವಯವಾಗಬಲ್ಲದು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉತ್ತೇಜನ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಈ ತಂತ್ರಜ್ಞಾನವನ್ನು ಇಸ್ರೋದ ವಿಜ್ಞಾನಿಯೊಬ್ಬರು ಮೆಚ್ಚಿಕೊಂಡಿದ್ದಾರೆ. ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿದ್ಯಾರ್ಥಿಗಳ ಸಾಧನೆ ಹಾಗೂ ಈ ತಂತ್ರಜ್ಞಾನವನ್ನು ಬಳಕೆ ಮಾಡುವ ಕುರಿತು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top