fbpx
ಸಮಾಚಾರ

ಕುಂಬ್ಳೆಯನ್ನು ಮರೆತು ಬಿಸಿಸಿಐ, ಐಪಿಎಲ್‍ ಉದ್ಘಾಟನೆ ವೇಳೆ `ಫೈವ್ ಸ್ಟಾರ್‍’ಗಳಿಗೆ ಸನ್ಮಾನ !

ಭಾರತ ಕ್ರಿಕೆಟ್‍ ತಂಡದ ಫ್ಯಾಬ್-5 ಎಂದೇ ಖ್ಯಾತರಾದ ಸ್ಟಾರ್‍ ಬ್ಯಾಟ್ಸ್ ಮನ್‍ಗಳಾದ ಸಚಿನ್‍ ತೆಂಡುಲ್ಕರ್‍, ರಾಹುಲ್‍ ದ್ರಾವಿಡ್, ಸೌರವ್‍ ಗಂಗುಲಿ, ವಿವಿಎಸ್‍ ಲಕ್ಷ್ಮಣ್‍ ಮತ್ತು ವೀರೇಂದ್ರ ಸೆಹ್ವಾಗ್‍ ಅವರನ್ನು ಐಪಿಎಲ್‍ ಉದ್ಘಾಟನಾ ಸಮಾರಂಭದ ವೇಳೆ ಸನ್ಮಾನಿಸಲಾಗುತ್ತಿದೆ.

ಏಪ್ರಿಲ್‍ 5ರಂದು ಹೈದರಾಬಾದ್‍ನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಭಾರತ ಕ್ರಿಕೆಟ್‍ಗೆ ನೀಡಿದ ಕೊಡುಗೆ ಗಮನಿಸಿ ಈ ಐವರು ಬ್ಯಾಟಿಂಗ್‍ ದಿಗ್ಗಜರನ್ನು ಸನ್ಮಾನಿಸಲು ಗುರುವಾರ ನಡೆದ ಬಿಸಿಸಿಐ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಬ್ಯಾಟ್ಸ್ ಮನ್‍ಗಳನ್ನು ಮಾತ್ರ ಏಕೆ ಸನ್ಮಾನಿಸಲಾಗುತ್ತಿದೆ ಎಂಬುದಕ್ಕೆ ಕಾರಣ ನೀಡಲಾಗಿಲ್ಲ. ಇವರ ಕಾಲಾಮಾನದಲ್ಲೇ ಭಾರತ ತಂಡದ ನಾಯಕರಾಗಿದ್ದ ಸ್ಪಿನ್‍ ಮಾಂತ್ರಿಕ ಅನಿಲ್‍ ಕುಂಬ್ಳೆ ಅವರನ್ನು ಕೈಬಿಡಲಾಗಿದೆ.

ಇದೇ ವೇಳೆ ಭಾರತ ಮಹಿಳಾ ಕ್ರಿಕೆಟ್‍ ತಂಡದ ಮಾಜಿ ನಾಯಕಿ ಡಯಾನಾ ಎಡುಜಿ ಅವರಿಗೆ ಒಂದು ಸಲದ ನೆರವಿಗೆ ಆಯ್ಕೆ ಮಾಡಲಾಗಿದ್ದು, ಸ್ಥಳೀಯ ಪಂದ್ಯದ ವೇಳೆ ಚೆಕ್‍ ವಿತರಿಸಲು ತೀರ್ಮಾನಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top