fbpx
ಸಮಾಚಾರ

ಧೋನಿಯ ಆಧಾರ್‍ ಕಾರ್ಡ್ ಮಾಹಿತಿ ಸೋರಿಕೆ: ಸಚಿವರ ಜೊತೆ ಸಾಕ್ಷಿ ಟ್ವೀಟರ್‍ ವಾರ್‍

ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‍ ಧೋನಿ ಆಧಾರ್‍ ಕಾರ್ಡ್ ಮಾಡಿಸಿದ ಚಿತ್ರಗಳು ಇದೀಗ ವಿವಾದ ಸೃಷ್ಟಿಸಿದ್ದು, ವೈಯಕ್ತಿಕ ಮಾಹಿತಿಗಳು ಬಹಿರಂಗ ಆಗಿರುವ ಕುರಿತು ಅಸಮಾಧಾನ ವ್ಯಕ್ತಡಿಸಿರುವ ಪತ್ನಿ ಸಾಕ್ಷಿ, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರೊಂದಿಗೆ ಟ್ವೀಟರ್‍ ವಾರ್‍ ನಡೆಸಿದ್ದಾರೆ.

`ಅಭಿಮಾನಿಗಳಿಗಾಗಿ ಆಂದೋಲನ’ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧೋನಿ ಆಧಾರ್‍ ಕಾರ್ಡ್‍ ಮಾಡಿಸಿದ ವಿಷಯವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಧೋನಿ ಭರ್ತಿ ಮಾಡಿದ ಅರ್ಜಿಯ ವಿವರಗಳು ಕೂಡ ಅಚಾತುರ್ಯದಿಂದ ಬಿಡುಗಡೆ ಮಾಡಲಾಗಿದೆ.

ಸ್ಟಾರ್‍ ಆಟಗಾರ ಧೋನಿ ಮತ್ತು ಅವರ ಕುಟುಂಬ ಆಧಾರ್ ಕಾರ್ಡ್ ಅನ್ನು ಅಪ್‍ಡೇಟ್‍ ಮಾಡಿದ್ದಾರೆ. ವಿಎಲ್‍ಇ ಮಾರಿಯಾ ಫಾರೂಕಿಯ ಸಿಎಸ್‍ಇ, ರಾಂಚಿ, ಜಾರ್ಖಂಡ್‍ ಎಂಬ ವಿಳಾಸ ಪ್ರಕಟಿಸಿದೆ.

ಇದೂ ಸಾಲದು ಎಂಬಂತೆ ಕೇಂದ್ರ ಸರಕಾರದ ಆಧಾರ್‍ ಕಾರ್ಡ್ ಪ್ರಚಾರದ ಸಂಸ್ಥೆ ಎರಡು ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಒಂದರಲ್ಲಿ ಧೋನಿ ಆಧಾರ್‍ ಕಾರ್ಡ್‍ಗಾಗಿ ಹೆಬ್ಬೆಟ್ಟು ಒತ್ತುತ್ತಿದ್ದರೆ ಮತ್ತೊಂದರಲ್ಲಿ ಭರ್ತಿ ಮಾಡಿದ ಅರ್ಜಿ ಬಿಡುಗಡೆ ಮಾಡಿದೆ. ಇದರಲ್ಲಿ ಧೋನಿ ಅವರ ವೈಯಕ್ತಿಕ ವಿವರಗಳು ಇದ್ದವು.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಧೋನಿ ಪತ್ನಿ ಸಾಕ್ಷಿ, ಆಧಾರ್‍ ಕಾರ್ಡ್‍ನಿಂದ ವೈಯಕ್ತಿಕ ಮಾಹಿತಿಗಳು ಸೋರಿಕೆ ಆಗುವುದಾದರೆ ಖಾಸಗಿತನ ಎಲ್ಲಿದೆ ಎಂದು ಸಚಿವ ರವಿಶಂಕರ್‍ ಪ್ರಸಾದ್‍ ಅವರನ್ನು ಪ್ರಶ್ನಿಸಿದ್ದಾರೆ,

ಆಧಾರ್‍ ಕಾರ್ಡ್‍ನ ಯೂನಿಕ್‍ ಸಂಖ್ಯೆಯಲ್ಲಿನ ವೈಯಕ್ತಿಕ ಮಾಹಿತಿ ಸಾರ್ವಜನಿಕ ಆಸ್ತಿ ಅಲ್ಲ. ವೈಯಕ್ತಿಕ ಮಾಹಿತಿ ಸೋರಿಕೆ ಆಗಿದೆಯೇ ಎಂದು ಮರು ಪ್ರಶ್ನಿಸಿದ್ದಾರೆ.

ವೈಯಕ್ತಿಕ ವಿಷಯಗಳನ್ನು ಭರ್ತಿ ಮಾಡಿದ ವಿವರಗಳು ಸೋರಿಕೆ ಆಗಿವೆ  ಎಂದು ಮರು ಟ್ವೀಟ್ ‍ಮಾಡಿದ್ದಾರೆ ಸಾಕ್ಷಿ. ಈ ವಿಷಯ ನನ್ನ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು. ಈ ಬಗ್ಗೆ ಗಮನ ಹರಿಸುತ್ತೆನೆ ಎಂದಿದ್ದಾರೆ ಸಚಿವರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top