fbpx
ತಿಂಡಿ ತೀರ್ಥ

ಬಾಯಲ್ಲಿ ನಿರೂರಿಸುವ ಗೋಡಂಬಿ ಬರ್ಫಿ ಹೀಗೆ ಮಾಡಿ

ಬೇಕಾಗುವ ಪದಾರ್ಥಗಳು :(1 ಕಪ್ = 250 ಎಮ್ ಎಲ್)
1 ಕಪ್ ಗೋಡಂಬಿ
ಸಕ್ಕರೆ ನಿಮ್ಮ ಸಿಹಿಗೆ ತಕ್ಕಷ್ಟು
5 ಟೇಬಲ್ ಸ್ಪೂನ್ ನೀರು
1 ಟೇಬಲ್ ಸ್ಪೂನ್ ತುಪ್ಪ
1 ಟೀ ಸ್ಪೂನ್ ರೋಸ್ ವಾಟರ್ ಅಥವಾ ಕೇಸರಿ

ಮಾಡುವ ವಿಧಾನ
ಗೋಡಂಬಿಯನ್ನು ನೀರಿನ ಪಸೆ ಇಲ್ಲದ ಮಿಕ್ಸರ್ ನಲ್ಲಿ ಪುಡಿ ಮಾಡಿಕೊಳ್ಳಿ.
ಒಂದು ನಾನ್ ಸ್ಟಿಕ್ ಪ್ಯಾನ್ ನಲ್ಲಿ ಸಕ್ಕರೆ ಮತ್ತು ನೀರು ಹಾಕಿ ಸಣ್ಣ ಉರಿಯಲ್ಲಿ ಕುದಿಸುತ್ತಿರಿ, ಸಕ್ಕರೆ ಪೂರ್ತಿಯಾಗಿ ನೀರಿನಲ್ಲಿ ಕರಗಿದ ನಂತರ ಗೋಡಂಬಿ ಪೌಡರ್ ನ್ನು ಅದಕ್ಕೆ ಸೇರಿಸಿ.
ಗೋಡಂಬಿ ಪುಡಿ ಗಂಟು ಕಟ್ಟದಂತೆ ಸಣ್ಣ ಉರಿಯಲ್ಲಿ ನಿಧಾನವಾಗಿ ಕದಡುತ್ತಾ ಇರಿ.ಈಗ ಇದು ನಿಧಾನವಾಗಿ ದಪ್ಪಗಾಗುತ್ತಾ ಬರುತ್ತದೆ.ತಳ ಬಿಡುವವರೆಗೂ 7 – 8 ನಿಮಿಷಗಳ ಕಾಲ ಬೇಯಿಸಬೇಕು.
ಇನ್ನೊಂದು ಕಡೆ ಒಂದು ಪ್ಲೇಟ್ ಗೆ ಸ್ವಲ್ಪ ತುಪ್ಪ ಸವರಿ ಬದಿಯಲ್ಲಿ ಇಟ್ಟುಕೊಳ್ಳಿ. ಈಗ ಪ್ಯಾನ್ ನಿಂದ ಗೋಡಂಬಿ ಮಿಕ್ಸರ್ ನ್ನು ಇಳಿಸಿ, ಒಂದು ಪಾತ್ರೆಗೆ ಹಾಕಿ ಅದರ ಮೇಲೆ ಸ್ವಲ್ಪ ತುಪ್ಪ, ರೋಸ್ ವಾಟರ್ ಅಥವಾ ಕೇಸರಿ ಹಾಕಿ, ಸ್ವಲ್ಪ ತಣ್ಣಗಾದ ಮೇಲೆ ಈ ಗೋಡಂಬಿ ಹಿಟ್ಟನ್ನು ಚೆನ್ನಾಗಿ ನಾದಿ.
ನಾದಿದ ಗೋಡಂಬಿ ಹಿಟ್ಟನ್ನು ತುಪ್ಪ ಸವರಿದ ಪ್ಲೇಟ್ ಗೆ ಸಮತಟ್ಟಾಗಿ ಹಾಕಬೇಕು.ಅದರ ಮೇಲೆ ಒಂದು ಬಟರ್ ಪೇಪರ್ ಹಾಕಿ ನಂತರ ಲಟ್ಟಣಿಗೆಯನ್ನು ತೆಗೆದುಕೊಂಡು ನಿಧಾನವಾಗಿ ಹಿಟ್ಟಿನ ಮೇಲೆ 3 – 5 ಮಿ.ಮೀ ನಷ್ಟು ದಪ್ಪ ಬರುವವರೆಗೆ ರೋಲ್ ಮಾಡುತ್ತಿರಿ.
ಈಗ ಬಟರ್ ಪೇಪರ್ ನ್ನು ತೆಗೆದು ಹಿಟ್ಟನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಒಂದು ಹರಿತವಾದ ಚಾಕುವಿನಿಂದ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ, ಚೌಕ ಅಥವಾ ವಜ್ರಾಕೃತಿಯಾಗಬಹುದು.
ನಿಧಾನವಾಗಿ ತುಪ್ಪ ಸವರಿದ ಚಾಕುವಿನಿಂದ ಗೋಡಂಬಿ ಬರ್ಫಿಯನ್ನು ತೆಗೆಯಿರಿ. ಈಗ ರುಚಿರುಚಿಯಾದ ಗೋಡಂಬಿ ಬರ್ಫಿ ಯನ್ನು ಸವಿಯಲು ಕೊಡಿ ಅಥವಾ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ ಇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top