fbpx
ತಂತ್ರಜ್ಞಾನ

ಜಿಯೋಗೆ ಸಡ್ಡು ಹೊಡೆಯಲು ಬರುತಿದೆ ಸ್ಯಾಟೆಲೈಟ್ ಫೋನ್

ದೇಶದ ಯಾವುದೇ ಮೂಲೆಯಿಂದ ಕರೆ ಮಾಡಿದರೂ ಕಾಲ್‍ಡ್ರಾಪ್‍ ಸೇರಿದಂತೆ ಯಾವುದೇ ಸಮಸ್ಯೆ ಆಗದ ಸ್ಯಾಟಲೈಟ್‍ ಫೋನ್‍ಗಳು ಬರಲಿದ್ದು, ಸರಕಾರಿ ಒಡೆತನದ ಬಿಎಸ್ಸೆನ್ನೆಲ್ ಇನ್ನೆರಡು ವರ್ಷದಲ್ಲಿ ದೇಶದ ಎಲ್ಲಾ ಮನೆಗಲ್ಲೂ ಸ್ಯಾಟಲೈಟ್ ಫೋನ್‍ ತಲುಪಿಸುವ ಗುರಿ ಹೊಂದಿದೆ.

  • ವಿಮಾನ, ಹಡಗುಗಳಲ್ಲೂ ಬಳಸಬಹುದು
  • ಹವಾಮಾನ ವೈಪರಿತ್ಯಗಳ ನಡುವೆಯೂ ಸುಗಮ ಕರೆ
  • ಟವರ್ ಆಧಾರಿತ ಸಂಪರ್ಕಕ್ಕೆ ತಿಲಾಂಜಲಿ
  • 2 ವರ್ಷದಲ್ಲಿ ಪ್ರತಿಯೊಂದಲ್ಲೂ ಮನೆಯಲ್ಲೂ ಸ್ಯಾಟಲೈಟ್ ಫೋನ್‍
  • ಆರಂಭದಲ್ಲಿ ಒಂದು ಕರೆಗೆ 30-35ರೂ. ನಿಗದಿ, ನಂತರ 1ರೂ.ಗೆ ಇಳಿಕೆ
  • ಫೋನ್‍ ಬೆಲೆ ಕನಿಷ್ಠ 40,000 ರೂ.

ಸ್ಯಾಟಲೈಟ್ ಫೋನ್‍ ಬಳಕೆ ಅನುಮತಿಗಾಗಿ ಅಂತಾರಾಷ್ಟ್ರೀಯ ಮೇರಿಟೈಮ್‍ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದೇನೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು 18ರಿಂದ 24 ತಿಂಗಳು ಆಗುತ್ತದೆ. ಮುಕ್ತ ಸ್ಯಾಟಲೈಟ್‍ ಫೋನ್‍ ಬಳಕೆ ಯೋಜನೆ ಜಾರಿಗೆ ತರುವ ವಿಶ್ವಾಸವಿದೆ. ಒಂದು ವೇಳೆ ಇದು ಯಶಸ್ವಿಯಾದರೆ ದೇಶದ ದೂರ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂದು ಬಿಎಸ್ಸೆನ್ನೆಲ್ ಚೇರ್‍ಮನ್‍ ಮತ್ತು ಮ್ಯಾನೇಜಿಂಗ್‍ ಡೈರೆಕ್ಟರ್ ಅನುಪಮ್‍ ಶ್ರೀವತ್ಸವ್ ತಿಳಿಸಿದ್ದಾರೆ.

ಈ ಫೋನ್‍ಗಳ ಸಂಪರ್ಕ ಸ್ಯಾಟಲೈಟ್‍ ಆಧಾರಿತವಾಗಿರುವುದರಿಂದ ವಿಮಾನ ಹಾಗೂ ಹಡುಗಗಳಲ್ಲಿಯೂ ಯಾವುದೇ ತೊಂದರೆ ಇಲ್ಲದೇ ಬಳಸಬಹುದಾಗಿದೆ. ಭೂಮಿಯಿಂದ ಸುಮಾರು 35,700 ಕಿ.ಮೀ. ಎತ್ತರದಲ್ಲಿ ಸ್ಯಾಟಲೈಟ್ ಇರುವುದರಿಂದ ಸುಲಭವಾಗಿ ಎಲ್ಲಾ ಕಡೆ ನೆಟ್‍ವರ್ಕ್ ದೊರೆಯಲಿದೆ.

ಪ್ರಸ್ತುತ ಈಗ ಎಲ್ಲಾ ಕಡೆ ಮೊಬೈಲ್‍ ಟವರ್‍ ಆಧಾರಿತ ಸಂಪರ್ಕಗಳು ದೊರೆಯುತ್ತಿವೆ. ಟವರ್‍ ನಿಂದ 25ರಿಂದ 30 ಕಿ.ಮೀ. ವ್ಯಾಪ್ತಿ ವರೆಗೆ ಮಾತ್ರ ಮೊಬೈಲ್‍ ನೆಟ್‍ ವರ್ಕ್‍ ಲಭಿಸುತ್ತದೆ. ಟವರ್‍ ನಿಂದ ದೂರ ಹೊಂದತೆಲ್ಲಾ ಸಿಗ್ನಲ್ ಕಡಿಮೆ ಆಗುತ್ತಾ ಹೋಗುತ್ತದೆ. ಇದರಿಂದ ಬಳಕೆದಾರರಿಗೆ ತೊಂದರೆಗಳು ಆಗುತ್ತಿರುತ್ತದೆ. ಆದರೆ ಸ್ಯಾಟಲೈಟ್ ಆಧಾರಿತ ಫೋನ್ ಬಳಕೆ ವೇಳೆ ಈ ಯಾವುದೇ ಸಮಸ್ಯೆಗಳು ಇರುವುದಿಲ್ಲ.

ಬಿಎಸ್ಸೆನ್ನೆಲ್ ಈಗಾಗಲೇ ಸೇನೆ, ರೈಲ್ವೆ, ಪೊಲೀಸ್‍ ಸೇರಿದಂತೆ ಸರಕಾರಿ ಸಂಸ್ಥೆಗಳಿಗೆ ಈ ಸೇವೆ ಒದಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಾಗರೀಕರಿಗೂ ಈ ಸೇವೆ ಒದಗಿಸುವ ಮೂಲಕ ಹೊಸ ಕ್ರಾಂತಿ ಮಾಡಲು ಸಜ್ಜಾಗಲಿದೆ.

ಆರಂಭಿಕ ಹಂತವಾಗಿ ದೇಶದಲ್ಲಿ 4600 ಫೋನ್‍ಗಳನ್ನು ಬಿಡುಗಡೆ ಮಾಡಲಿದ್ದು, ಒಂದು ಕರೆಗೆ 30ರೂ.ನಿಂದ 35 ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ. ಅಲ್ಲದೇ ಸ್ಯಾಟಲೈಟ್‍ ಫೋನ್‍ಗಳ ಬೆಲೆ ಕೂಡ 40 ಸಾವಿರ ರೂ. ಆಗಲಿದೆ. ನಂತರದ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಮತ್ತು ಸೇವೆಯನ್ನು ಗಮನಿಸಿ ದರದಲ್ಲಿ ಕಡಿತವಾಗುತ್ತಾ ಹೋಗಲಿದೆ ಎಂದು ಶ್ರೀವಾತ್ಸವ್ ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top