ಕರ್ನಾಟಕ

ಹಳ್ಳಿ ಬಿಟ್ಟು ಸಿಟಿಗೆ ಬರುವವರು ಈ ವಿಷಯಗಳನ್ನ ಓದಲೇಬೇಕು…

ಹಳ್ಳಿ ಬಿಟ್ಟು ಸಿಟಿಗೆ ಬರುವವರು ಇದನ್ನ ಓದಲೇಬೇಕು…

ಈಗಿನ್ ಕಾಲದ್ ಜನ್ರು ಹಳ್ಳಿಗಳ್ಳನ್ನ ಬಿಟ್ಟು ಸಿಟಿಕಡೆ ಬರ್ತಿದ್ದಾರೆ. ಹಿಂಗೆ ಹಳ್ಳಿಯಿಂದ ಸಿಟಿಗೆ ಬರ್ಲಿಕ್ಕೆ ಮುಖ್ಯ ಕಾರಣಗಳೆಂದ್ರೆ ಒಂದು ಕೆಲ್ಸ ಹುಡ್ಕೊಂಡ್ ಮಾಡಕ್ಕೆ ಇನ್ನೊಂದು ಹೆಚ್ಚಿನ ಮಟ್ಟದಲ್ಲಿ ಓದಕ್ಕೆ.ಹಿಂಗೆ ತಮ್ಮೂರನ್ನ ಬಿಟ್ಟು ಸಿಟಿಗೆ ಬರೋವಂತ ಹಳ್ಳಿ ಜನ್ರಿಗೆ ಸಿಟಿ ಬೇಗ ಅಡ್ಜಸ್ಟ್ ಆಗಲ್ಲ. ಅವರ ಮನಸ್ಥಿತಿ ಹೆಂಗಿರುತ್ತೆ ಅಂತ ಇಲ್ಲಿ ಓದಿ ತಿಳ್ಕೊಳ್ಳಿ,

ಹಳ್ಳಿಯಲ್ಲಿ ಒಳ್ಳೆ ಪರಿಸರ ಮತ್ತು ಸಿಂಪಲ್ ಜೀವನ ಮಾಡ್ಕೊಂಡು ಸಡನ್ ಆಗಿ ಸಿಟಿಗಳಿಗೆ ಬಂದವರು ಮೊದ್ಲು ಸಿಟಿಯ ಮಾಲಿನ್ಯ ಪೂರಿತ ಜೀವನಕ್ಕೆ ಅಡ್ಜಸ್ಟ್ ಆಗೋದು ಕಷ್ಟ ಆಗುತ್ತೆ.ಅಷ್ಟೊಂದು ವಾಹನಗಳು ಅವುಗಳ ಸೌಂಡು,ಹೊಗೆ,ಟ್ರಾಫಿಕ್, ಇನ್ನು ಎಷ್ಟೊಂದು ವಿಷ್ಯಗಳು ಅವ್ರ್ಗೆ ಕಿರಿಕಿರಿ ಉಂಟುಮಾಡುತ್ತವೆ.ಎಷ್ಟೊಂದು ಜನರು ಇದ್ದರು ಅವರಿಗೆ ಸ್ಪಂದಿಸೋರು ಸಿಗೋದು ತುಂಬಾ ಕಮ್ಮಿ. ಹಳ್ಳಿಯವ್ರು ಹಳ್ಳಿಯ ಸಿಂಪಲ್ ಜೀವ್ನಕ್ಕೆ ಹೊಂದುಕೊಂಡಿರ್ತಾರೆ ಆದ್ರೆ ಸಿಟಿಯಲ್ಲಿ ಎಲ್ಲವು ದುಬಾರಿ,ಎಲ್ಲದಕ್ಕೂ ದುಡ್ಡು ಕುಡಿಯೋ ನೀರಿಗೂ ದುಡ್ಡು, ಕುಡಿದ ನೀರನ್ನ ಹೊರ ಹಾಕಲೂ ದುಡ್ಡು. ಒಟ್ನಲ್ಲಿ ಸಿಟಿ ತುಂಬಾ ಒತ್ತಡದಾಯಕವಾಗ್ತದೆ . ಈ ಲೈಫ್ ಸ್ಟೈಲ್ ಗೆ ಹೊಂದುಕೊಳ್ಳೋದು ಅವ್ರಿಗೆ ಸ್ವಲ್ಪ ಕಷ್ಟವಾಗಬಹುದು.

ಹಳ್ಳಿಯಿಂದ ಸಿಟಿಗೆ ಹೋಗಿರೋರು ತಮ್ಮ ಭಾಷೆಯಿಂದ ಪ್ರಾಬ್ಲಮ್ ಎದ್ರಿಸುತ್ತಾರೆ.ಸಿಟಿ ಜನರು ಮಾತಾಡೋ ಭಾಷೆ ಮತ್ತು ಹಳ್ಳಿಯವರ ಭಾಷೆಗೆ ಎಷ್ಟೊಂದ್ ವ್ಯತ್ಸಾಸ ಇರ್ತದೆ.ಹಳ್ಳಿಯವರುದು ಒರಟು ಭಾಷೆ.  ಹಳ್ಳಿ ಜನಕ್ಕೆ ಸಿಟಿಗಳಲ್ಲಿ ಎಲ್ಲೆಲ್ಲಿ ಹೇಗೆ ವರ್ತಿಸಬೇಕು ಅಂತ ಸಾಮಾನ್ಯವಾಗಿ ಗೊತ್ತಿರೋದಿಲ್ಲ ಇದು ಸಹ ಅವ್ರಿಗೆ ಕಷ್ಟವಾಗ್ನಾಹುದು.ಕೆಲಸ ಮಾಡಕ್ಕೆ ಅಂತ ಬಂದೋರಿಗೆ ಕೆಲಸ ಹುಡುಕೋದೇ ಒಂದು ದೊಡ್ಡ್ ಕೆಲ್ಸ ಆಗುತ್ತೆ.ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಮನೆಗಳಲ್ಲಿ ಇರ್ತಿದ್ದವ್ರು ಸಡನ್ ಆಗಿ ದುಬಾರಿ ಬಾಡಿಗೆಯ ಅತಿ ಚಿಕ್ಕ ರೂಮ್ ಗಳಲ್ಲಿ ಇರಲು ಹೊಂದ್ಕೊಳ್ಳಲು ಕಷ್ಟವಾಗುತ್ತೆ.

ಹಳ್ಳಿಗಳ ಬಟ್ಟೆಗಳಿಗೆ ಹೊಂದುಕೊಂಡಿದ್ದ ಜನ ಸಿಟಿಯ ಡ್ರೆಸ್ಸಿಂಗ್ ರೀತಿಗಳಿಗೆ ಅಡ್ಜಸ್ಟ್ ಆಗೋದು ಕಷ್ಟವಾಗುತ್ತೆ.ಹಳ್ಳಿಗಳಳ್ಳಿ ಜನರೆಲ್ಲರೂ ಒಂದೇ ಕುಟುಂಬದ ರೀತಿ ಇರ್ತಾರೆ, ಆದ್ರೆ ಸಿಟಿಗಳಲ್ಲಿ ಯಾವೊಬ್ಬ ವ್ಯಕ್ಯಿಯನ್ನು ನಂಬಕ್ಕೆ ಆಗಲ್ಲ. ಅಕ್ಕ ಪಕ್ಕದವರೇ ಇಲ್ಲಿ ಸರಿಯಾಗಿ ಮುಖ ಕೊಟ್ಟು ಮಾತಾಡೋದಿಲ್ಲ.ಇವುಗಳೆಲ್ಲವೂ ಅವರನ್ನು ಆರೋಗ್ಯಕೆಡುವಂತೆ ಮಾಡುತ್ತವೆ.

ಸಿಟಿಗಳಿಗೆ ಹೋಗುವ ಜನರು ಎದುರಿಸುತ್ತಿರೋ ಪ್ರಾಬ್ಲಮ್ ಗಳು ಗಂಭೀರವಾದರೂ ಬೆಳೆಯುತ್ತಿರುವ ಹಳ್ಳಿಗಳ ಜೀವನಕ್ಕೂ ಇದು ಒಳ್ಳೆಯ ಅನುಭವವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top